Advertisements

ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕನ್ನಡ ಸೇರಿದಂತೆ ಎಲ್ಲಾ ಸಿನಿಮಾ ರಂಗದಲ್ಲೂ ದೊಡ್ಡ ನಟ..

Cinema

ನಮಸ್ತೆ ಸ್ನೇಹಿತರೆ, ಕೆಲವೊಮ್ಮೆ ಕಷ್ಟಗಳು ಜೀವನದಲ್ಲಿ ಛಲವನ್ನು ಮೂಡಿಸುತ್ತವೆ ತಾವು ಅಂದುಕೊಂಡಿದ್ದನ್ನು ಸಾಧಿಸಲು ಕಾರಣವಾಗುತ್ತವೆ.. ಹೌದು ಈ ನಟನ ಬದುಕಿನಲ್ಲೂ ಆದದ್ದೂ ಇದೇ.. ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಚಿತ್ರರಂಗದಲ್ಲಿ ಇಂದು ತುಂಬಾ ಎತ್ತರಕ್ಕೆ ಬೆಳೆದು ದೊಡ್ಡ ನಟರಾಗಿದ್ದಾರೆ.. ತೆಲುಗು ಕನ್ನಡ ಸೇರಿದಂತೆ ನಾಲ್ಕು ಬಾಷೆಗಳಲ್ಲಿ ನಟಿಸಿದ ನಟ ಸಯಾಜಿ ಶಿಂದೆ. ಸಯಾಜಿ ಶಿಂದೆ ಅವರು ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮುಂಚೆ ಮೂರು ವರ್ಷಗಳ ಕಾಲ ಕಾಲೇಜ್ ಒಂದರಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದ್ದರು.. ನಾಲ್ಕು ಬಾಷೆಯ ಸುಮಾರು 100 ಕ್ಕು ಹೆಚ್ಚು ಚಿತ್ರಗಳಲ್ಲಿ ಈ ನಟ ನಟಿಸಿದ್ದಾರೆ. ಕನ್ನಡದಲ್ಲಿ ವೀರ ಕನ್ನಡಿಗ, ಉಪ್ಪಿಟ್ಟು, ಆರಕ್ಷಕ ಸೇರಿದಂತೆ ಇದುವರೆಗೂ 12 ಚಿತ್ರಗಳಲ್ಲಿ ನಟಿಸಿದ್ದಾರೆ..

[widget id=”custom_html-3″]

Advertisements

ತೆಲುಗಿನಲ್ಲಿ 50ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮರಾಠಿಯವರಾದ ಸಿಯಾಜಿ ಶಿಂದೆ ತೆಲುಗಿನಲ್ಲಿ ತಾನು ನಟಿಸುವ ಚಿತ್ರಗಳಲ್ಲಿ ಶೇಕಡಾ 90ರಷ್ಟು ಚಿತ್ರಗಳಿಗೆ ತಾವೇ ಡಬ್ಬಿಂಗ್ ಮಾಡಿಕೊಳ್ಳುತ್ತಾರೆ.. ಮಹಾರಾಷ್ಟ್ರದ ಸಣ್ಣ ಹಳ್ಳಿ ಒಂದರಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದ ಈ ನಟ ತನ್ನ ಊರಿನಲ್ಲಿ ಏಳನೇ ತರಗತಿಯವರೆಗೂ ಓದಿದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನಗರಕ್ಕೆ ಹೋದರು.. ನಂತರ ಕಾಲೇಜಿಗೆ ಸೇರಿಕೊಂಡರು. ತುಂಬಾ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಶಿಂದೆ ತನ್ನ ಕಾಲೇಜ್ ಪೀಜ್ ಅನ್ನು ಕಟ್ಟಿಕೊಳ್ಳಲು ಮೂರು ವರ್ಷ ಅದೇ ಕಾಲೇಜಿನಲ್ಲಿ ವಾಚ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡರು. ಹಗಲಿನಲ್ಲಿ ಓದುವ ಸಲುವಾಗಿ ಕಾಲೇಜಿಗೆ ಹೋಗುತ್ತಿದ್ದ ಶಿಂದೆ ರಾತ್ರಿ ವೇಳೆಯಲ್ಲಿ ಅದೇ ಕಾಲೇಜಿನಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದರು..

[widget id=”custom_html-3″]

ಹಗಲು ರಾತ್ರಿ ಎನ್ನದೇ ಕಷ್ಟಪಡುತ್ತಿದ್ದ ಶಿಂದೆ ತಾನು ಸಂಪಾದನೆ ಮಾಡಿದ ಹಣದಲ್ಲಿ ಕಾಲೇಜ್ ಫೀಸ್ ಅನ್ನು ಕಟ್ಟಿಕೊಂಡು ತನ್ನ ಖರ್ಚಿಗೂ ಹಣ ಹೊಂದಿಸಿಕೊಳ್ಳುತ್ತಿದ್ದರು. ನಂತರ ನಾಟಕಗಳಲ್ಲಿ ನಟಿಸುತ್ತಾ ಹಾಗೆ ಸಿನಿಮಾ ರಂಗದ ನಂಟನ್ನು ಬೆಳಸಿಕೊಂಡರು.. 1997 ರಲ್ಲಿ ಶಿಂದೆ ನಟಿಸಿದ ಚುಲ್ಕ ಎಂಬ ನಾಟಕ ಇವರಿಗೆ ಒಳ್ಳೆಯ ಹೆಸರು ತಂದುಕೊಡುತ್ತದೆ. ನಂತರ ಇನ್ನೂ ಕೆಲವು ಮರಾಠಿ ನಾಟಕಗಳಲ್ಲಿ ನಟಿಸುತ್ತಾ ಬೆಳ್ಳಿ ತೆರೆಗೆ ದು’ಮುಕುತ್ತಾರೆ.. ಮರಾಠಿ ಸಿನಿಮಾಗಳಲ್ಲಿ ತನ್ನದೇ ಆದ ಪ್ರೇಕ್ಷಕರನ್ನು ಗಳಿಸುತ್ತಾರೆ. ನಂತರ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲಿ ನಟಿಸಿ ಈಗ ಬಹುಬೇಡಿಕೆ ನಟರಾಗಿರುವ ಶಿಂದೆ ಅವರ ಪರಿಶ್ರಮ ನಿಜಕ್ಕೂ ಎಲ್ಲರೂ ಮೆಚ್ಚುವಂತದ್ದು.. ಸಿನಿಮಾ ರಂಗವೇ ಹಾಗೆ. ಪ್ರತಿಭೆಯ ಜೊತೆಗೆ ಒಂದಿಷ್ಟು ಅದೃಷ್ಟವಿದ್ದರೆ ಅವಾಕಶದ ಬಾಗಿಲುಗಳು ತಮ್ಮಷ್ಟಕ್ಕೆ ತಾವೇ ತೆರೆದುಕೊಳ್ಳುತ್ತವೆ.. ಇದರ ಬಗ್ಗೆ ನೀವೇನ್ ಹೇಳ್ತಿರಾ.