Advertisements

ಈತನ ಅಕೌಂಟ್ ಗೆ ಇದ್ದಕ್ಕಿದ್ದಂತೆ 5 ಕೋಟಿ ಬರುತ್ತದೆ.. ನಂತರ ಏನಾಯ್ತು ಅಂತ ಕೇಳಿದರೆ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಅದೃಷ್ಟ ಬಾಗಿಲು ತಟ್ಟಿದರೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಬಹುದು, ಇನ್ನೂ ದುರಾದೃಷ್ಟ ಬಾಗಿಲು ತಟ್ಟಿದರೆ ರಾತ್ರೋರಾತ್ರಿ ಕೋಟ್ಯಾಧಿಪತಿ ಕೂಡ ಭಿಕ್ಷುಕನಾಗಬಹುದು. ಆದರೆ ಅದೃಷ್ಟ ಮತ್ತು ದುರಾದೃಷ್ಟ ಎರಡು ಒಟ್ಟಿಗೆ ಬಂದರೆ ಏನಾಗುತ್ತೆ? ಹೌದು ಇದಕ್ಕೆ ಸಂಬಂಧಪಟ್ಟಾಗೆ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.. ಉತ್ತರ ಪ್ರದೇಶಕ್ಕೆ ಸೇರಿದ ಪರವಂಗಿ ಎಂಬ ಗ್ರಾಮದಲ್ಲಿ ಒಂದು ಸೆಂಟ್ರಲ್ ಅಕಾಡೆಮಿಯಲ್ಲಿ ಓದುತ್ತಿದ್ದಂತಹ ಈ ಹುಡುಗನ ಹೆಸರು ಶರ್ಮಾ ಇನ್ನೂ ಇವರ ತಂದೆಯ ಹೆಸರು ನರೇಂದ್ರ ಶರ್ಮಾ..

Advertisements

ಒಂದು ದಿನ ನರೇಂದ್ರ ಶರ್ಮಾ ಮಗನಾದಂತಹ ಶರ್ಮಾ ಅವರಿಗೆ ಒಂದು ಮೆಸೇಜ್ ಬರುತ್ತದೆ.. ಅದೇನೆಂದರೆ ಅವರ ಅಕೌಂಟ್ ಗೆ ಐದು ಕೋಟಿಯ ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರ ಐವತ್ತೈದು ಬಂದಿದೆ ಅಂತ. ಇದನ್ನ ನೋಡಿ ಗಾಬರಿಗೊಂಡ ಶರ್ಮಾ ಅವರ ತಂದೆಗೆ ತಿಳಿಸುತ್ತಾನೆ.. ಇನ್ನೂ ಅವರ ತಂದೆ ಕೂಡ ಮಿನಿ ಸ್ಟೇಟ್ ಮೆಂಟ್ ತೆಗೆದು ನೊಡ್ತಾರೆ. ಅಲ್ಲಿಯೂ ಕೂಡ ಅಷ್ಟೇ ಹಣ ಇರುತ್ತದೆ.. ಆದರೆ ಆತನ ಅಕೌಂಟ್ ನಲ್ಲಿ ಕೇವಲ ಒಂದು ಲಕ್ಷದ ಐವತ್ತು ಸಾವಿರ ಇರಬೇಕಾಗಿತ್ತು ಇನ್ನೂ ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಅಂತ ಅವರ ತಂದೆ ತಲೆ ಕೆಡಿಸಿಕೊಳ್ಳುತ್ತಾರೆ..

ನಂತರ ಮತ್ತೆ ಸ್ವಲ್ಪ ಸಮಯದ ನಂತರ ಚೆಕ್ ಮಾಡಿ ನೊಡೋಣ ಎಂದು ನರೇಂದ್ರ ಶರ್ಮಾ ಅವರು ಸುಮ್ಮನಾಗುತ್ತಾರೆ. ಐದು ನಿಮಿಷಗಳಾದ ನಂತರ ನರೇಂದ್ರ ಶರ್ಮಾ ಅವರು ಮತ್ತೆ ಮಿನಿ ಸ್ಟೇಟ್ ಮೆಂಟ್ ತೆಗೆದುಕೊಳ್ಳುತ್ತಾರೆ.. ಆದರೆ ಆಗ ಅವರ ಅಕೌಂಟ್ ನಲ್ಲಿ ಒಂದು ರೂಪಾಯಿ ಕೂಡ ಇರೋದಿಲ್ಲ. ಆಕಸ್ಮಿಕವಾಗಿ ಬಂದಿರುವಂತಹ ಹಣ ಮತ್ತೆ ರಿಟರ್ನ್ ಹಾಗಿದೆ ಎಂದು ತಿಳಿದುಬಂತು.. ಆದರೆ ಅವರ ಅಕೌಂಟ್ ನಲ್ಲಿ ಇರಬೇಕಾದಂತಹ ಒಂದು ಲಕ್ಷ 50 ಸಾವಿರ ಕೂಡ ಇಲ್ಲ. ಇದನ್ನು ನೋಡಿದ ನರೇಂದ್ರ ಶರ್ಮಾ ಅವರಿಗೆ ಇನ್ನೂ ಟೆಂಕ್ಷನ್ ಜ್ಯಾಸ್ತಿಯಾಗುತ್ತದೆ..

ಇದಾದ ತಕ್ಷಣವೇ ತನ್ನ ಮಗನನ್ನು ಕರೆದುಕೊಂಡು ಬ್ಯಾಂಕ್ ಗೆ ಹೋಗುತ್ತಾನೆ.. ಇನ್ನೂ SBI ಅವರ ನಿರ್ಲಕ್ಷ್ಯ ದಿಂದ ಇದೆಲ್ಲಾ ನಡೆದಿದೆ ಎಂದು ಅಲ್ಲಿ ಹೋದಮೇಲೆ ಗೊತ್ತಾಗುತ್ತದೆ. ಬೇರೆ ಯಾರದೋ ಅಕೌಂಟ್ ಗೆ ಹೋಗಬೇಕಾದಂತಹ ಹಣ ತಪ್ಪಿ ಇವರ ಅಕೌಂಟ್ ಗೆ ಬಂದಿರುತ್ತದೆ.. ಇನ್ನೂ ಆ ಹಣವನ್ನು ರಿಟರ್ನ್ ಮಾಡಬೇಕಾದರೆ ಇವರ ಅಕೌಂಟ್ ನಲ್ಲಿ ಇರುವ ಹಣವನ್ನು ಕೂಡ ತೆಗೆದುಕೊಂಡಿರೋದು ಬ್ಯಾಂಕಿನ ನಿರ್ಲಕ್ಷ್ಯದಿಂದಲೇ ಕಾರಣ ಎಂದು ನರೇಂದ್ರ ಶರ್ಮಾ ಅವರು ಹೇಳಿದ್ದಾರೆ..

ಇನ್ನೂ ಈ ಘಟನೆ ನಡೆದ ನಂತರ ಕ್ಷಮಾಪಣೆ ಕೇಳಿದ ಬ್ಯಾಂಕಿನವರು ಮತ್ತೆ ನಿಮ್ಮ ಹಣವನ್ನು ಹಿಂದಿರುಗಿಸುತ್ತೇವೆ ಎಂದು ಹೇಳುತ್ತಾರೆ.. ಆದರೆ ನಿಮ್ಮ ಅಕೌಂಟ್ ಗೆ ಹಣ ಹಾಕಲು ಇನ್ನೂ ಎರಡು ದಿನ ಆಗುತ್ತದೆ ಎಂದು ಹೇಳಿದ್ದಾರೆ.. ಯಾಕೆಂದರೆ ಅವತ್ತು ಶನಿವಾರ ಬ್ಯಾಂಕ್ ಎರಡು ದಿನ ರಜೆ ಇರುತ್ತದೆ.. ಈಗಾಗಿ ಸೋಮವಾರ ಬೆಳಗ್ಗೆಯೇ ನಿಮ್ಮ ಅಕೌಂಟ್ ಗೆ ಹಣ ಹಾಕುತ್ತೇವೆ ಎಂದು ಹೇಳಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಯಾರೋ ಒಬ್ಬರು ಮಾಡುವಂತಹ ನಿರ್ಲಕ್ಷ್ಯದಿಂದ ಎಷ್ಟು ಜನ ಕಷ್ಟಕ್ಕೆ ಸಿಲುಕುತ್ತಾರೆ ಎಂದು.. ಇನ್ನೂ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.