Advertisements

ದಾರಿಯಲ್ಲಿ ನಿಂತು ಶಾಲೆ ತೆರೆಯಬೇಡಿ ಎಂದ ಪುಟಾಣಿ ಪೋರಿ ! ಆದ್ರೆ ಮಿನಿಸ್ಟರ್ ಸಾಹೇಬ್ರು ಆ ಬಾಲೆಗೆ ಕೊಟ್ಟ ಉತ್ತರವೇ ಬೇರೆ ?

News

ಕರೋನಾ ವೈರಾಣು ಹಬ್ಬುವ ಭಯದ ಹಿನ್ನಲೆಯಲ್ಲಿ ರಾಜ್ಯಾದಂತ ಶಾಲೆ ಕಾಲೇಜುಗಳು ಬಂದ್ ಆಗಿವೆ. ಲಾಕ್ ಡೌನ್ ಸಡಿಲಗೊಂಡಿದ್ದರೂ ಶಾಲಾ ಕಾಲೇಜುಗಳನ್ನ ತೆರೆಯುವುದೋ ಬೇಡವೋ ಎಂಬ ಗೊಂದಲ್ಲಿದೆ ರಾಜ್ಯ ಸರ್ಕಾರ. ಇನ್ನು ಖಾಸಗಿ ವಲಯದ ಶಾಲೆಗಳಂತೂ ತೆರೆಯಲು ತುದಿಗಾಲಲ್ಲಿ ನಿಂತಿವೆ. ಇನ್ನು ಕೆಲವೊಂದು ಮಾಹಿತಿಗಳ ಪ್ರಕಾರ ಜುಲೈ ಮೊದಲ ವಾರದಿಂದ ಶಾಲಾ ಕಾಲೇಜುಗಳು ಶುರುವಾಗಲಿವೆ ಎಂಬ ಸುದ್ದಿಗಳು ಓಡಾಡುತ್ತಿವೆ.

Advertisements

ಇನ್ನು ಶಾಲೆಗಳನ್ನ ತೆರೆಯುವುದರ ಬಗ್ಗೆ ಸರ್ಕಾರ ಕೂಡ ಸಾರ್ವಜನಿಕರ ಅಭಿಪ್ರಾಯಗಳನಂ ಸಂಗ್ರಹ ಮಾಡುತ್ತಿದೆ. ಲಕ್ಷಾಂತರ ಪೋಷಕರು ಕರ್ನಾಟಕರ ಕರೋನಾ ಸೋಂಕಿನಿಂದ ಮುಕ್ತವಾಗುವ ತನಕ ಶಾಲೆಗಳನ್ನ ಪ್ರಾರಂಭಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ರವರು ತಮಗಾದ ಒಂದು ವಿಶೇಷ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಶಿಕ್ಷಣ ಸಚಿವರು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಹಾಗೆ, ನಾನು ವಿಧಾನಸೌಧಕ್ಕೆ ಹೊರಟಿದ್ದೆ. ಇದೆ ವೇಳೆ ಒಬ್ಬ ಯಂಗ್ ಫ್ರೆಂಡ್ ಬಂದು ನನ್ನೆದುರು ನಿಂತಳು. ಮಹನ್ಯಾ ಎಂಬ ಈ ಮುದ್ದು ಬಾಲೆ ನಿಮ್ಮನ್ನ ಟಿವಿಯಲ್ಲಿ ನೋಡಿದ್ದೇನೆ ಎಂದಳು. ಶಾಲೆ ಯಾವಗ ಪ್ರಾರಂಭ ಮಾಡುತ್ತೀರ ಎಂದು ನನ್ನ ಕೇಳಿದಳು. ಯಾವಾಗ ಶುರು ಮಾಡಬೇಕು ಎಂದು ನಾನು First Std ಓದುತ್ತಿರುವ ಆ ಚಿನ್ನಾರಿಯನ್ನ ಕೇಳಿದೆ. ಅದಕ್ಕೆ ಆ ಮುದ್ದು ಮಗು ಕೊರೋನಾ ಹೋದ ಮೇಲೆ ಎಂದಳು.

ಬಳಿಕ ನಾನು ತುಂಬಾ ದಿನ ಕೊರೋನಾ ಹೋಗದಿದ್ದರೆ ಎಂದು ನಾನು ಪ್ರಶ್ನಿಸಿದ್ದಕ್ಕೆ, ಇಲ್ಲ ಕೊರೋನಾ ಹೋದ ಮೇಲೇ ಶಾಲೆ ಓಪನ್ ಮಾಡಿ” ಎಂದಳು ಪೋರಿ.ಇನ್ನು ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ ಎಂಬ ನನ್ನ ಪ್ರಶ್ನೆಗೆ ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ” ಎಂದು ಬೀಗುತ್ತಾ ನುಡಿದಳು ಮುದ್ದು ಮಹನ್ಯಾ. ಕೊರೋನಾ ಭಯ ಎಷ್ಟರ ಮಟ್ಟಿಗೆ ಮಕ್ಕಳನ್ನೂ ಕೂಡ ಭಯಭೀತಗೊಳಿಸಿದೆ ಎಂಬುದಕ್ಕೆ ಈ ಮುದ್ದು ಮಗುವೇ ಸಾಕ್ಷಿ ಅಲ್ಲವೇ. ಇನ್ನು ಆ ಮುದ್ದು ಮಗುವಿನ ಪ್ರಶ್ನೆಗಳಿಗೆ ಮಗುವಿನ ಹಾಗೆ ತಾಳ್ಮೆಯಿಂದೆ ಉತ್ತರಿಸಿದ ಶಿಕ್ಷಣ ಸಚಿವರ ಬಗ್ಗೆ ನಿಮ್ಮ ಅಭಿಪರಾಯವೇನೆಂದು ಕಾಮೆಂಟ್ ಮಾಡಿ ತಿಳಿಸಿ ಸ್ನೇಹಿತರೆ..