Advertisements

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್.?

News

ಲಾಕ್ ಡೌನ್  ನಿಂದಾಗಿ ಶಾಲಾ ಕಾಲೇಜುಗಳು ಬಂದ್ ಆಗಿವೆ. ಇನ್ನು ಹಾಸ್ಟೆಲ್ ಗಳಲ್ಲಿ ಇದ್ದ ಕಾಲೇಜು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ.  ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಂತೆ ಇಂಗ್ಲಿಷ್ ಪರೀಕ್ಷೆ ಮಾತ್ರ ಇನ್ನು ಬಾಕಿ ಉಳಿದಿದೆ. ಶಿಕ್ಷಣ ಇಲಾಖೆ ಕೂಡ ಬಳಿ ಉಳಿದಿರುವ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ತಯಾರಿಗಳನ್ನ ಮಾಡಿಕೊಳ್ಳುತ್ತಿದೆ.

Advertisements

ವಿಶೇಷ ಏನೆಂದರೆ ಲಾಕ್ ಡೌನ್ ಪರಿಣಾಮ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗಿರುವುದರಿಂದ, ಕರೋನಾ ಹರಡುವ ಭೀತಿಯಲ್ಲಿ ಅವರ ಅವರ ಊರುಗಳಲ್ಲೇ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಇನ್ನು ವಿದ್ಯಾರ್ಥಿಗಳು  ಉಳಿದುಕೊಂಡಿರುವ ಜಿಲ್ಲೆಗಳಲ್ಲೇ ಪರೀಕ್ಷಾ ಕೇಂದ್ರಗಳನ್ನ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಗದಿ ಮಾಡಿದ್ದು, ಹತ್ತಿರದ ಎಕ್ಸಾಮ್ ಸೆಂಟರ್ ಗಳಿಗೆ ಹೋಗಿ ಸೆಕೆಂಡ್ ಪಿಯುಸಿ  ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.

ಇನ್ನು ವಿದ್ಯಾರ್ಥಿಗಳು ತಾವು ವಾಸವಿರುವ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವವರು ಸ್ಟೂಡೆಂಟ್ ಹೆಸರು, ಸ್ಟೂಡೆಂಟ್ ನಂಬರ್, ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಕೋಡ್, ಸೆಕೆಂಡ್ ಪಿಯುಸಿ ರಿಜಿಸ್ಟರ್ ನಂಬರ್, ವಾಸವಾಗಿರುವ ಜಿಲ್ಲೆಯ ಹೆಸರು, ಪ್ರಸ್ತುತ ಪರಿಸಖೇ ಬರೆದ ಪರೀಕ್ಷಾ ಕೇಂದ್ರದ ಹೆಸರು ಈ ಎಲ್ಲಾ ಮಾಹಿತಿಯನ್ನ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಇ-ಮೇಲ್ ಮಾಡ್ಬೇಕಾಗಿದೆ. ಇನ್ನು ಈ ಎಲ್ಲಾ ಮಾಹಿತಿಯನ್ನ ನೀಡಿದ ಬಳಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿ ಎಲ್ಲಿ ವಾಸವಾಗಿದ್ದಾನೋ, ಅದೇ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತದೆ. ಇನ್ನು ಜೂನ್ ತಿಂಗಳಿನಲ್ಲಿ ಪರೀಕ್ಷಾ ದಿನಾಂಕವನ್ನ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.