Advertisements

ರೋಡ್ ಸೈಡ್ ನಲ್ಲಿ ಮಾಡೋ ತರ ಗರಿ ಗರಿ ಸೇವ್ ಪುರಿ ಮನೆಯಲ್ಲೇ ಮಾಡೋದು ಹೇಗೆ ಗೊತ್ತಾ?

Aduge

ಕರೋನಾ ಹಬ್ಬುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಹೋಟೆಲ್ ಗಳು, ಚಾಟ್ಸ್ ಸೆಂಟರ್ ಗಳನ್ನ ಬಂದ್ ಮಾಡಲಾಗಿದೆ. ಇನ್ನು ಎರಡು ತಿಂಗಳುಗಳಿಂದ ಚಾಟ್ಸ್ ಸೆಂಟರ್ ಗಳನ್ನ ಮುಚ್ಚಿರುವುದರಿಂದ ಪಾನಿ ಪುರಿ, ಸೇವ್  ಪುರಿಗಳನ್ನ ತಿನ್ನಲು ಆಗುತ್ತಿಲ್ಲ. ಸ್ನೇಹಿತರೆ ನೀವು ಬೇಸರ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲೇ ಬಾಯಲ್ಲಿ ನೀರೂರಿಸುವ ಸೇವ್ ಪುರಿಯನ್ನ ಮಾಡಿಕೊಂಡು ತಿನ್ನಬಹುದು. ಮೊದಲ ಬಾರಿಗೆ ನಿಮ್ಮ ಮನೆಯಲ್ಲಿ ಸೇವ್ ಪುರಿ ಮಾಡುತ್ತಿರುವವರು ಈ ವಿಧಾನವನ್ನ ಅನುಸರಿಸಿ.

ಮೊದಲಿಗೆ ಬಟಾಣಿಯನ್ನ ಚೆನ್ನಾಗಿ ನೆನಸಿಟ್ಟುಕೊಳ್ಳಬೇಕು. ಬೆಳಿಗ್ಗೆಯೇ ನೆನೆ ಹಾಕಿದ್ದಲ್ಲಿ ಸಾಯಂಕಾಲದ ಹೊತ್ತಿಗೆ ಬಟಾಣಿ ನೆಂದಿರುತ್ತದೆ. ಬಳಿಕ ನೆಂದ ಬಟಾಣಿಯನ್ನ ಒಂದು ಕುಕ್ಕರ್ ನ ಒಳಗೆ ಹಾಕಿಕೊಳ್ಳಿ. ಬಳಿಕ ಒಂದು ಆಲೂಗಡ್ಡೆ ತೆಗೆದುಕೊಂಡು ಅದರ ಸಿಪ್ಪೆಯನ್ನ ತೆಗೆದು, ಅದನ್ನ ನಾಲ್ಕೈದು ಹೋಳುಗಳಾಗಿ ಕಟ್  ಮಾಡಿ ಕುಕ್ಕರ್ ನಲ್ಲಿ ಹಾಕಿ. ಬಳಿಕ ಒಂದು ಗ್ಲಾಸ್ ನೀರು ಜೊತೆಗೆ, ಅರ್ಧ ಚಮಚ ಉಪ್ಪು ಹಾಕಿ ಎರಡು ವೀಸಲ್ ಬರುವವರೆಗೂ ಬೇಯಿಸಬೇಕು. ಇನ್ನು ವಿಸಿಲ್ ಬರುವಷ್ಟರಲ್ಲಿ ಎರಡು ತರದ ಚಟ್ನಿ ಮಾಡಿಕೊಳ್ಳಬೇಕು. ಗ್ರೀನ್ ಚಟ್ನಿ ಮತ್ತು ಸ್ವೀಟ್ ಚಟ್ನಿ. ಸೇವ್ ಪುರಿಗೆ ಈ ಎರಡೂ ಚಟ್ನಿ ಬೇಕೇ ಬೇಕು. ತುಂಬಾ ಸುಲಭವಾಗಿ ಕಡಿಮೆ ಸಮಯದಲ್ಲೇ ಮಾಡಬಹುದು. ಮಾಡೋದು ಹೇಗೆ ಅಂತ ತಿಳಿಯಲು ಕೆಳಗಿರುವ ವಿಡಿಯೋ ಮೇಲೆ ಕ್ಲಿಕ್ ಮಾಡಿ..

Leave a Reply

Your email address will not be published. Required fields are marked *