Advertisements

ಹೆಂಡತಿ ಇಲ್ಲಾ ಅಂತ ಎರಡನೇ ಮದಯವೆಯಾದ.. ಆದರೆ ಹೆಂಡತಿಗೆ ಈತ ಎಷ್ಟನೇ ಗಂಡ ಗೊತ್ತಾ? ಸತ್ಯ ತಿಳಿದು ಬೆಚ್ಚಿಬಿದ್ದ ಗಂಡ..

News

ಮದುವೆ ಅಂದ್ರೆ ಅದು ಬದುಕಿನ ಮಹತ್ತರವಾದ ಘಟ್ಟ. ಗಂಡು ಹೆಣ್ಣಿಗೆ ತನ್ನೆಲ್ಲ ಕಷ್ಟ ಸುಖದಲ್ಲಿ ಜೊತೆಯಾಗಿರು ಅಂತ ಮನವಿ ಮಾಡಿ ಆಕೆಯ ನೋವುಗಳಿಗೆ ಸ್ಪಂದಿಸಿ ಸಂತಸದಲ್ಲಿ ಜೊತೆಯಾಗಿದ್ದು, ಬದುಕಿನ ಪ್ರತಿ ಆಗು ಹೋಗಿನಲ್ಲಿ ಆಕೆಯೊಂದಿಗೆ ಇರುತ್ತೇನೆ ಅಂತ ಪ್ರಮಾಣ ಮಾಡುವ ಸಂದರ್ಭ, ಹಾಗೇ ಹೆಣ್ಣು ಕೂಡ ತನ್ನ ಸಂಗಾತಿಯ ನೋವುಗಳಿಗೆ ಸುಖಕ್ಕೆ ಎಲ್ಲ ಸಂದರ್ಭದಲ್ಲಿ ಸಹ ಜೊತೆಯಾಗಿರುತ್ತೇನೆ ಅಂತ ಪ್ರಮಾಣ ಮಾಡುವ ಸಂದರ್ಭ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲವರಿಂದ ಮದುವೆ ತನ್ನ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿದೆ.
ಇವತ್ತು ನಾವು ನಿಮಗೆ ಒಬ್ಬಳು ಪುಣ್ಯಾತ್​ಗಿತ್ತಿ ಸಾಲು ಸಾಲು ಮದುವೆಯಾಗಿ ನಾನು ಮದುವೆನೇ ಆಗಿಲ್ಲ ಅಂತ ಗಂಡನಿಗೆ ಚಳ್ಳೆ ಹಣ್ನು ತಿನ್ನಿಸಿರುವ ಕತೆ ಹೇಳ್ತೀವಿ.

[widget id=”custom_html-3″]

Advertisements

ಇದು ಕತೆಯಲ್ಲ ಸತ್ಯ. ಈ ಫೋಟೋದಲ್ಲಿ ನೀವು ನೋಡ್ತಾ ಇದ್ದೀರಲ್ಲ ಈತನ ಹೆಸರು ಷಡಕ್ಷರಿ. ತಾನು ಮದುವೆಯಾದ ಎರಡನೇ ಹೆಂಡತಿಗೆ ಈತ ಎಷ್ಟನೆ ಗಂಡ ಎಂಬ ಸತ್ಯ ತಿಳಿದು ಬೆಚ್ಚಿಬಿದ್ದ ಪಾಪದ ಗಂಡ. ಚಿಕ್ಕಮಗಳೂರಿನ ಬೀಕನ ಹಳ್ಳಿ ಗ್ರಾಮದ ನಿವಾಸಿ. ಈತನ ಹೆಂಡತಿ ಈತನ ಜೊತೆ ಇರಲಿಲ್ಲ , ಈ ಹಿನ್ನೆಲೆ ಇವನ ಅಣ್ಣ ಫೋರ್ಸ್ ಮಾಡಿ ಎರಡನೇ ಮದುವೆಯಾಗಿರ್ತಾನೆ. ಆಕೆಯ ಹೆಸರು ಉಷಾ. ಮದುವೆಯೇನೋ ಆಯಿತು.. ಷಡಕ್ಷರಿ ಹಾಗೂ ಉಷಾ ಹೊಸ ಜೀವನವೇನೋ ಶುರು ಮಾಡಿದರು.. ಉಷಾ ಮದುವೆಯಾಗುವಾಗ ತನಗೆ ಬೆರೊಬ್ಬರ ಜೊತೆ ಮದುವೆಯಾಗಿಲ್ಲ ಅಂತ ಸುಳ್ಳು ಹೇಳಿರ್ತಾಳೆ, ಆದ್ರೆ ಆಕೆಗೆ ಮದುವೆಯಾಗಿರೋ ವಿಚಾರ ಷಡಕ್ಷರಿಗೆ ತಿಳಿದಿರುತ್ತದೆ. ಅಸಲಿ ವಿಷ್ಯ ಏನಂದ್ರೆ ಆಕೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ನಾಲ್ಕು ಮದುವೆಯಾಗಿರ್ತಾಳೆ.

[widget id=”custom_html-3″]

ಗಂಡನಿಗೆ ವಿಚಾರ ತಿಳಿಯುತ್ತಿದ್ದಂತೆ ಆತ ಮಾಡಿದ ಕೆಲಸವೇ ಬೇರೆ. ಹೌದು ಈ ವಿಚಾರದ ಸಲುವಾಗಿ ಷಡಕ್ಷರಿ ಪ್ರಶ್ನೆ ಮಾಡಿದ್ದಕ್ಕೆ ಈಕೆ ರಾತ್ರೋ ರಾತ್ರಿ ಷಡಕ್ಷರಿಯನ್ನು ಬಿಟ್ಟು ಪರಾರಿಯಾಗಿದ್ದಾಳೆ.. ಹೋಗುವಾಗ ಒಬ್ಬಳೇ ಹೋಗಿಲ್ಲ.. ಮನೆಯಲ್ಲಿದ್ದ ಎರಡೂವರೆ ಲಕ್ಷ ರೂಪಾಯಿ ಹಾಗೂ ಪತ್ನಿಗೆ ಆಸೆಯಿಂದ ಷಡಕ್ಷರಿ ಮಾಡಿಸಿದ್ದ ಆಭರಣವನ್ನೆಲ್ಲಾ ತೆಗೆದುಕೊಂಡು ಪರಾರಿಯಾಗಿದ್ದಾಳೆ.
ಇತ್ತ ಷಡಕ್ಷರಿ ತನ್ನ ಹೆಂಡತಿ ಆಗಿದ್ದ ಒಂದೊಂದು ಮದುವೆಯ ಬಗ್ಗೆಯೂ ದಾಖಲೆ ಕಲೆ ಹಾಕಿ ಇಟ್ಟುಕೊಂಡಿದ್ದಾನೆ. ಅಷ್ಟೇ ಅಲ್ಲದೇ ನನಗೆ ನನ್ನ ಹೆಂಡತಿ ಬೇಕು ಹುಡುಕಿಕೊಡಿ ಅಂತ ಆಕೆಗಾಗಿ ಊರುರು ಅಲೆಯುತ್ತಿದ್ದಾನೆ. ಒಂದು ಕಡೆ ಗಂಡ ಬೇಡ ಅಂತ ಗಂಡನ ಹಣವನ್ನು, ಚಿನ್ನವನ್ನು ದೋಚಿ ಪರಾರಿಯಾದ ಹೆಂಡತಿ , ಇನ್ನೊಂದು ಕಡೆ ನನಗೆ ಮೋಸ ಮಾಡಿದ್ರೂ ಓಕೆ ನನ್ನ ಹೆಂಡತಿ ಬೇಕು ನಂಗೆ ಅಂತ ಪತ್ನಿಗಾಗಿ ಹುಡುಕಾಟ ನಡೆಸ್ತಾಯಿರೋ ಗಂಡ. ಎಂತಹ ವಿಪರ್ಯಾಸ ನೋಡಿ.

[widget id=”custom_html-3″]