Advertisements

ದಿನಕ್ಕೆ ಲಕ್ಷ ಸಂಭಾವನೆ ಪಡೆಯುತ್ತಿದ್ದ ಶಕೀಲಾ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ? ಬದುಕು ಕಟ್ಟಿಕೊಟ್ಟ ಅಕ್ಕನಿಗೆ ಸ್ವಂತ ತಂಗಿಯರಿಂದಲೇ ಮೋಸ..

Cinema

ಕಷ್ಟಗಳು ಯಾರಿಗೆ ತಾನೆ ಬರುವುದಿಲ್ಲ ಹೇಳಿ. ಹರಿ ಬ್ರಹ್ಮನಿಗೂ ಕಷ್ಟಗಳು ತಪ್ಪಿಲ್ಲವಂತೆ ಇನ್ನು ನಾವು ನೀವುಗಳು ಹುಲುಮಾನವರು. ಬರಿ ಸುಖವನ್ನೇ ಪಡೆದವರು ಯಾರು ಇರುವುದಿಲ್ಲ ಆದರೆ ಕಷ್ಟಗಳು ಬಂದಾಗ ಕೆಲವೊಮ್ಮೆ ಅವರ ಯೋಗ್ಯತೆ ನೋಡಿ ಸಹಾಯ ಮಾಡಬೇಕು. ನಮ್ಮ ಸಹಾಯವನ್ನು ಅವರು ಮರಳಿ ನೀಡದಿದ್ದರೂ ಪರವಾಗಿಲ್ಲ, ಸಹಾಯಕ್ಕೆ ಕೃತಜ್ಞರಾಗಿರಬೇಕು. ಎಲ್ಲರನ್ನೂ ನಮ್ಮವರು ಎಂದು ಸರ್ವಸ್ವವನ್ನು ಧಾರೆ ಎರೆದರೆ ಕೊನೆಗೆ ನಮ್ಮ ಕೈಯಲ್ಲಿ ಬಿಡಿಗಾಸು ಕೂಡ ಇರುವುದಿಲ್ಲ ಎನ್ನುವುದಕ್ಕೆ ಈ ನಟಿಯ ಜೀವನವೇ ಸಾಕ್ಷಿ. ಹೌದು ಇವಳು ಮಾದಕನಟಿ, ಮೋಹದ ಸುಂದರಿ ಎಂತಲೂ ಹೆಸರು ಪಡೆದ ಟಾಪ್ ಒನ್ ನಟಿ. ಆದರೆ ಇವಳು ಆರಿಸಿಕೊಂಡ ದಾರಿ ಮಾತ್ರ ಬೇರೆ. ಎಲ್ಲರೂ ನಟಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿಯೇ. ಇವಳು ಕೂಡಾ ನಟಿಸಿದ್ದು ಹೀಗೆ. ಹೌದು ನಿಮಗೆಲ್ಲ ಶಕೀಲಾ ಎಂದರೆ ಯಾರು ಅಂತ ಗೊತ್ತೇ ಇದೆ. ಅವಳ ಮೈಮಾಟ ದಿಂದಲೇ ಅಪಾರ ಅಭಿಮಾನಿಗಳನ್ನು ಲಕ್ಷಾಂತರ ರೂಪಾಯಿ ಯನ್ನು ಸಹ ಗಳಿಸಿದ್ದಾಳೆ ಎನ್ನುವುದು ಮಾತ್ರ ನಿಮಗೆ ಗೊತ್ತು. ಆದರೆ ಅವಳ ನಿಜ ಜೀವನ ಕಥೆ ಕೇಳಿದರೆ ಎಂಥವರಿಗೂ ಆದ್ರೂ ಅನಿಸುತ್ತದೆ.

[widget id=”custom_html-3″]

Advertisements

ಶಕೀಲಾ ಆರಿಸಿಕೊಂಡ ದಾರಿ ಸರಿಯಾಗಿತ್ತು ಎಂದು. ಶಕೀಲಾ ಅದು ಒಂದು ಕೂಡುಕುಟುಂಬ. ಆರು ಜನ ಹೆಣ್ಣು ಮಕ್ಕಳು ಇರುವ ಈ ಮನೆಯಲ್ಲಿ ಶಕೀಲ ದೊಡ್ಡ ಮಗಳು. ಇವಳಿಗೆ ಪೊಲೀಸ್ ಕಾನ್ಸ್ಟೇಬಲ್ ಆಗುವ ಕನಸಿತ್ತು. ಆದರೆ ಎಸೆಸೆಲ್ಸಿಯಲ್ಲಿ ಶಕೀಲಾ ಫೇಲಾದಳು. ಆಗ ಅವಳ ತಂದೆ ನಡುರಸ್ತೆಯಲ್ಲಿಯೇ ಅವಳನ್ನು ಹೀಯಾಳಿಸಿ ಮನಬಂದಂತೆ ತಳಿಸುತ್ತಾರೆ. ಇದರಿಂದ ಮಾ’ನ’ಸಿಕವಾಗಿ ಕುಗ್ಗಿದ್ದಳು ಶಕೀಲಾ. ಹೀಗಿರುವಾಗ ಒಂದು ದಿನ ಸಿನಿಮಾದಲ್ಲಿ ಒಂದು ಪಾತ್ರಕ್ಕಾಗಿ ಆಡಿಶನ್ ಕರೆದಿರುತ್ತಾರೆ. ಶಕೀಲಾ ನೋಡಲು ಸುರದ್ರೂಪಿ ಹೆಣ್ಣಾಗಿದ್ದಳು. ನೋಡಲು ಮೋ’ಹ’ಕವಾಗಿದ್ದ ಶಕೀಲಾ ಆ ಪಾತ್ರಕ್ಕೆ ಆಯ್ಕೆಯಾದಳು. ಕಾಲಕ್ರಮೇಣ ಶಕೀಲಾ ಸಣ್ಣ ಪಾತ್ರಗಳಲ್ಲಿ ಅಭಿನಯಿಸುತ್ತಾ ಮನೆಯ ಕೆಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದಳು. ಇದೇ ಸಂದರ್ಭದಲ್ಲಿ ಅವಳ ತಂದೆ ತಿರುಕೊಳ್ಳುತ್ತಾರೆ ಆಗ ಗಂಡು ದಿಕ್ಕಿಲ್ಲದ ಮನೆಯಾಗುತ್ತದೆ. ಆಗ ಶಕಿಲ ಕುಟುಂಬದ ಜವಾಬ್ದಾರಿ ಹೊರುವ ಅನಿವಾರ್ಯತೆ ಎದುರಾಗುತ್ತದೆ.

[widget id=”custom_html-3″]

ಅದರಂತೆ ಸಿಕ್ಕ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಾ ಅಭಿನಯದಲ್ಲಿ ತಲ್ಲೀನರಾಗುತ್ತಾಳೆ ಶಕೀಲಾ. ತಾನು ದುಡಿದ ಹಣದಿಂದಲೇ ಎಲ್ಲರ ಮದುವೆ ಮಾಡುತ್ತಾಳೆ. ಅವರ ಖರ್ಚುಗಳನ್ನು ನಿಭಾಯಿಸುತ್ತಾಳೆ. ಕೊನೆಗೆ ಅವರ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಓದಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ನೆರವಾಗುತ್ತಾಳೆ. ಅಷ್ಟೇ ಸಾಲದು ಅವರಿಗೆ ಸ್ವಂತ ಮನೆಗಳನ್ನು ಸಹ ಕಟ್ಟಿಸಿ ಕೊಡುತ್ತಾಳೆ. ಹೀಗಿರುವಾಗ ಅವಳ ತಾಯಿಗೆ ಅನಾರೋಗ್ಯ ಕಾಡುತ್ತದೆ. ಆಗ ಅಕ್ಕ, ತಂಗಿಯರ ಬಳಿ ಸಹಾಯ ಕೇಳುತ್ತಾಳೆ. ಎಲ್ಲರೂ ಒಂದಿಲ್ಲ ಒಂದು ಸಬೂಬು ಹೇಳಿ ಹಣ ನೀಡದೆ ಅವಳನ್ನು ಹೀಯಾಳಿಸುತ್ತಾರೆ. ನೀನು ದುಡಿದ ಲಕ್ಷಾಂತರ ರೂಪಾಯಿ ಏನು ಮಾಡಿದೆ ಎಂದು ಕೇಳಿ ನೋಯಿಸುತ್ತಾರೆ. ಆಕಾಶಕ್ಕಿಂತ ಸಂಪೂರ್ಣವಾಗಿ ಕುಗ್ಗಿ ಹೋಗುತ್ತಾಳೆ. ಮತ್ತೊಂದು ದಿನ ಮದುವೆಯ ಆಮಂತ್ರಣಕ್ಕೆ ಹೋದಾಗ ಶಕೀಲ್ ಳನ್ನು ಬಹು ಗೌರವದಿಂದ ಕಂಡ ಜನರನ್ನು ನೋಡಿ ಶಕಿಲಾ ಖುಷಿಯಾಗುತ್ತಾಳೆ. ಸಂಜೆ ತನ್ನ ಸಂಬಂಧಿ ಮದುವೆ ರಿಸೆಪ್ಶನ್ ಗೆ ಹೋದಾಗ ಅಲ್ಲಿ ಅವಳು ತಂದ ಗಿಫ್ಟ್ ಅನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅವಳ ಕೈಯಿಂದ ಪಡೆದ ಗಿಫ್ಟ್ ಅನ್ನು ಎಡಗೈಯಿಂದ ಹಿಡಿದು ದೂರ ಇಡುತ್ತಾರೆ. ಈ ಘಟನೆಯಿಂದ ಶಕೀಲಾ ತುಂಬಾ ನೋವು ಅನುಭವಿಸುತ್ತಾಳೆ. ತನ್ನ ಸಂಬಂಧಿಕರಿಗಾಗಿ, ಸೋದರಿಯರಿಗೆ ಆಗಿ,

[widget id=”custom_html-3″]

ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೇ ಧಾರೆಯೆರೆದ ಶಕೀಲಾಳನ್ನು ಕಂಡರೆ ಸಂಬಂಧಿಕರು ಅವಳನ್ನು ಹಿಯಾಳಿಸಿ ನೋಯಿಸುತ್ತಾ ರೆ. ಅದೇ ಎಂದೋ ಒಂದು ದಿನ ಸಹಾಯ ಮಾಡಿದ ಜನರು ಅವಳನ್ನು ಗೌರವದಿಂದ ಕಾಣುತ್ತಾರೆ. ಪ್ರೀತಿಯಿಂದ ನೋಡುತ್ತಾರೆ. ಆಗ ಅವಳಿಗೆ ಅನಿಸುತ್ತದೆ ಅವಶ್ಯಕತೆ ಇದ್ದಾಗ ಇದೇ ಕೈಯಿಂದ ಹಣ ನೀಡಿದೆ ಆಗಬೇಕಿತ್ತು. ಈಗ ಇದೆ ಕೈಯಿಂದ ಬೇಡವಾಯಿತು. ಎಂದು ನೊಂದುಕೊಳ್ಳುತ್ತಾಳೆ. ಇದಾದ ಮೇಲೆ ಶಕೀಲಾ ಮುಂದೆ ನನ್ನ ಮಕ್ಕಳಿಗೂ ಈ ನೋವು ಬರದೇ ಇರಲಿ ಎಂದು ವಿವಾಹವಾಗದೆ, ಮಕ್ಕಳನ್ನು ಪಡೆಯದೆ ಹಾಗೆಯೇ ಜೀವಿಸುತ್ತಾಳೆ. ಇದೀಗ ತೃತೀಯ ಲಿಂ’ಗಿ’ಯ ಒಂದು ಹೆಣ್ಣು ಮಗುವನ್ನು ಸಾಕುತ್ತಿದ್ದಾಳೆ. ಹಾಗೆ ಸಮಾಜ ಸೇವೆಯಲ್ಲಿ ತೃಪ್ತಿ ಕಾಣುತ್ತಿದ್ದಾಳೆ ಶಕೀಲಾ. ಸಹಾಯ ಪಡೆದ ಸಂಬಂಧಿಗಳು ಇಂದು ಅವಳನ್ನು ಕೀಳಾಗಿ ನೋಡಿದರೆ, ಜನರು ಅವಳು ಮಾಡಿದ ಸಹಾಯಕ್ಕೆ ಕೃತಜ್ಞರಾಗಿ ಪ್ರೀತಿ ತೋರಿಸುತ್ತಿದ್ದಾರೆ. ಈಗಲೂ ಶಕೀಲಾ ಬಾಡಿಗೆ ಮನೆಯೊಂದರಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇಷ್ಟೇ ಕಣ್ರೀ ಪ್ರಪಂಚ. ಶಕೀಲಾಳ ಜೀವನಕಥೆ ನೋಡಿ ನೀವು ತಿಳಿಯಬೇಕು. ಜೀವನದಲ್ಲಿ ಸಹಾಯ ಮಾಡುವಾಗ ಯೋಚನೆ ಮಾಡಿ ಸಹಾಯ ಮಾಡಬೇಕು ಎಂದು ಅರಿಯಬೇಕು ಅಷ್ಟೇ..