Advertisements

ಎಂಜಿನಿಯರ್ ಆಗಿದ್ದ ಶಕುನಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ..ಅವಕಾಶಕ್ಕಾಗಿ ಅಲೆಯುತ್ತಿರುವಾಗ ಮ’ಲುಗುತ್ತೀಯಾ ಅಂತ ಕೇಳಿದ್ದರು !

Entertainment

ನಮಸ್ತೇ ಸ್ನೇಹಿತರೇ, ತನ್ನ ತಂಗಿ ಗಾಂಧಾರಿಗಾದ ಅನ್ಯಾಯವನ್ನ ಇಡೀ ಜೀವನ ತನ್ನ ಮನಸಿಲ್ಲಿಟ್ಟುಕೊಂಡು ಪ್ರತೀಕಾರ ತೆಗೆದುಕೊಳ್ಳುವ ಶಕುನಿಯದು ಮಹಾಭಾರತದಲ್ಲಿ ಒಂದು ಅಮೋಘ ಪಾತ್ರ. ಮನುಷ್ಯನ ಅತೀ ಬುದ್ದಿವಂತಿಕೆ ದೊಡ್ಡ ವಿನಾಶಕ್ಕೆ ಕಾರಣವಾಗಲಿದೆ ಹಾಗೂ ಅತೀ ಬುದ್ದಿವಂತಿಕೆಯನ್ನ ಯಾವುದಕ್ಕೆಲ್ಲಾ ಬಳಸಿಕೊಳ್ಳಬಾರದು ಎಂಬುದಕ್ಕೆ ಶಕುನಿಗಿಂತ ಸಾಕ್ಷಿ ಬೇರೆ ಬೇಕಿಲ್ಲ. ಇನ್ನು ಶಕುನಿಯ ಪಾತ್ರವೆಂದರೆ ತಟ್ಟನೆ ಕಣ್ಣುಮುಂದೆ ಬರುವವರು ನಟ ಪ್ರಣೀತ್ ಭಟ್. ಅಷ್ಟರ ಮಟ್ಟಿಗೆ ಸ್ವತಃ ರಿಯಲ್ ಶಕುನಿಯೇ ನಟಿಸುತ್ತಿದ್ದಾರೆಯೇ ಎಂಬಷ್ಟರ ಮಟ್ಟಿಗೆ ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರ ‘ಓ ನನ್ನ ಮೂರ್ಖ ಮಗುವೇ’ ಎನ್ನುವ ಡೈಲಾಗ್ ಅಂತೂ ಅತೀ ಹೆಚ್ಚು ವೈರಲ್ ಆಗಿದ್ದು ನಿಮಗೆ ಗೊತ್ತೇ ಇದೆ.

ನಟ ಪ್ರಣೀತ್ ಭಟ್ ಕಾಶ್ಮೀರದ ಶ್ರೀನಗರದ ಮೂಲದವರು. ಇನ್ನು ಇವರು ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವರು. ಇನ್ನು ಇವರ ಕುಟುಂಬ ಸೆಟ್ಲ್ ಆಗಿದ್ದು ಜಮ್ಮುವಿನಲ್ಲಿ. ಇನ್ನು ನಾಟಿಗ್ಗ ಪ್ರಣೀತ್ ಭಟ್ ರವರು ಓದಿದ್ದು ಇಂಜಿನಿಯರ್. ವಿಶೇಷ ಎಂದರೆ ಇವರ ಕುಟುಂಬದವರೆಲ್ಲಾ ಹೈ ಕ್ವಾಲಿಫೈಡ್ ಆದವರು. ಪ್ರಣೀತ್ ಅವರ ತಂಗಿ ವಿಜ್ನ್ಯಾನಿಯಾಗಿದ್ದು ಉಳಿದವರೆಲ್ಲ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇನ್ನು ಶಾಲೆಯ ದಿನಗಳಿಂದಲೇ ನಾಟಕಗಳನ್ನ ಮಾಡುತ್ತಿದ್ದ ನಟ ಪ್ರಣೀತ್ ರವರಿಗೆ ಅಭಿನಯ ಮಾಡುವುದೆಂದರೆ ತುಂಬಾ ಇಷ್ಟವಾಗಿತ್ತು. ಇನ್ನು ಪ್ರಣೀತ್ ರವರು ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದು ಮಹಾರಾಷ್ಟ್ರದ ನಾಸಿಕ್ ನ ಕೇಕೆ ವಾಗ್ ಕಾಲೇಜಿನಲ್ಲಿ.

Advertisements

ಇನ್ನು ಮೂರನೇ ವರ್ಷದ ಇಂಜಿನಿಯರಿಗ್ ಓದುವ ಸಮಯದಲ್ಲಿ ಸ್ವಲ್ಪ ಗ್ಯಾಪ್ ತೆಗೆದುಕೊಂಡ ಪ್ರಣೀತ್ ದೊಡ್ಡ ಮಟ್ಟದಲ್ಲಿ ಏನಾದರು ಮಾಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿದ್ರು. ಮಾಡೆಲಿಂಗ್ ಕೂಡ ಮಾಡಿದ್ರು. ಆಗ ನಾನು ಕೂಡ ಅಭಿನಯ ಮಾಡಬಹುದು ಎಂಬ ಧೈರ್ಯ ಅವರಿಗೆ ಬಂದಾಗಿತ್ತು. ಇದೆಲ್ಲಾ ಆಗುವದೊರಳಗೆ ಒಂದು ವರ್ಷ ಕಳೆದೇ ಹೋಗಿತ್ತು. ಬಳಿಕ ಎಂಜಿನಿಯರಿಂಗ್ ಮುಗಿಸಿದ ಪ್ರಣೀತ್ ರವರಿಗೆ ವಿಪ್ರೋ ಕಂಪನಿಯಲ್ಲಿ ಜಾಬ್ ಕೂಡ ಸಿಕ್ಕಿತು. ಇನ್ನು ತಮ್ಮ ಕೆಲಸದ ಜೊತೆಗೆ ಅಭಿನಯ ಕೂಡ ಮಾಡುತ್ತಿದ್ದರು. ಜೊತೆಗೆ ಮನೆಯಲ್ಲಿ ಏನೂ ಹೇಳದೆಯೇ ಎಂ ಟಿವಿ ಶೋ ಒಂದರಲ್ಲಿ ಆಕ್ಟಿಂಗ್ ಕೂಡ ಮಾಡಿದ್ರು. ಹೇಗೋ ಇದು ಅವರ ತಂದೆಗೆ ಗೊತ್ತಾಗಿದ್ದು, ಅವರ ತಂದೆ ಕೂಡ ನಿನಗೆ ಆಕ್ಟಿಂಗ್ ಮಾಡೋದಕ್ಕೆ ಅಷ್ಟೊಂದು ಆಸೆ ಇದ್ದಾರೆ ಅದನ್ನೇ ಮಾಡು ಎಂದರಂತೆ. ಒಳ್ಳೆಯ ಹೆಸರನ್ನ ಮಾಡು ಎಂದು ಸಪೋರ್ಟ್ ಮಾಡಿದರಂತೆ.

ಇನ್ನು ತನ್ನ ತಂದೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ತಡ ಅವಕಾಶಗಳಿಗಾಗಿ ಕಾಯುತ್ತಿದ್ದರು ಪ್ರಣೀತ್. ಇನ್ನು ಇದೆ ವೇಳೆ ಚಿತ್ರದ ಒಂದು ಶೂಟಿಂಗ್ ಗೆ ಪ್ರಣೀತ್ ಅವರಿಗೆ ಹೈದರಾಬಾದ್ ನಿಂದ ಆಫರ್ ಕೂಡ ಬರುತ್ತದೆ. ಅದೂ ಕೇವಲ 500ರುಪಾಯಿಗೆ. ಇನ್ನು ನೀವೇ ನಂಬಲೇಬೇಕು. ಆಕ್ಟಿಂಗ್ ಮಾಡೋದಕ್ಕೆ ಅವಕಾಶ ಸಿಕ್ಕಿತು ಎಂದು ಬಹಳ ಸಂತೋಷದಿಂದ ತಮ್ಮ ಮಿತ್ರರೊಂದಿಗೆ ಈ ವಿಷಯವನ್ನ ಹಂಚಿಕೊಂಡ ಪ್ರಣೀತ್ ೫೦೦ರೂಪಾಯಿಯ ಆಕ್ಟಿಂಗ್ ಮಾಡೋದೋಕೋಸ್ಕರ ಸಾವಿರಾರು ರೂಪಾಯಿ ಸಂಬಳ ಬರುತ್ತಿದ್ದ ಕೆಲಸವನ್ನೇ ಬಿಟ್ಟು ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್ ಗೆ ಹೊರಟು ಬಿಡುತ್ತಾರೆ. ಇನ್ನು ಈ ಚಿಕ್ಕ ಪಾತ್ರ ಮಾಡಿ ಪ್ರಣೀತ್ ಹಿಂದಿರುಗಿ ಬಂದ ಮೇಲೆ ತುಂಬಾ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸಿದ್ರು. ಸಾವಿರಾರು ಸಂಬಳ ಬರುತ್ತಿದ್ದ ಕೆಲಸ ಕೂಡ ಕೈತಪ್ಪಿಹೋಗಿತ್ತು.

ಇನ್ನು ತನ್ನ ಸಮಸ್ಯೆಗಳ ಬಗ್ಗೆ ಮನೆಯವರಿಗೂ ಕೂಡ ಏನನ್ನು ಹೇಳದೆ ಇದಕ್ಕೂ ಮುಂಚೆ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿದ್ದ ಪ್ರಣೀತ್ ವಠಾರಕ್ಕೆ ಶಿಫ್ಟ್ ಆಗುತ್ತಾರೆ. ಬಳಿಕ ಏನೆಲ್ಲಾ ಕಷ್ಟಗಳನ್ನ ನಟ ಪ್ರಣೀತ್ ಭಟ್ ಅನುಭವಿಸಿದ್ರು. ನಟನೆಯ ಅವಕಾಶಗಳು ಸಿಕ್ಕಿದ್ದೆಗೆ ? ಇವರಿಗೆ ಮಹಾಭಾರತದ ಶಕುನಿಯ ಪಾತ್ರ ಸಿಕ್ಕಿದ್ದೆಗೆ ? ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮೇಲೆ ಲಿಂಕ್ ಮಾಡಿರುವ ವಿಡಿಯೋ ನೋಡಿ..ಶಕುನಿ ಪಾತ್ರದಾರಿ ಪ್ರಣೀತ್ ಭಟ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ..