Advertisements

ಹೊಸ ಜೀವನ ಶುರು ಮಾಡುತ್ತಿರುವ ಬಿಗ್ ಬಸ್ ಖ್ಯಾತಿ ಶಮಂತ್ ಮತ್ತು ಧನುಶ್ರೀ..

Cinema

ಶಮಂತ್ ಹಾಗೂ ಧನುಶ್ರೀಯ ಹೊಸ ಜರ್ನಿ ಆರಂಭ ಬಿಗ್ ಬಾಸ್ ಶೋ ಕೆಲವರ ಜೀವನ ದಾರಿಯನ್ನೆ ಬದಲಾಯಿಸಿದೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಕೆಲವರ ಜೀವನ ಉತ್ತುಂಗಕ್ಕೆ ಏರಿದರೇ, ಇನ್ನು ಕೆಲವರ ಜೀವನ ಸಾಧನೆಯತ್ತ ಸಾಗಿದೆ. ಇನ್ನು ಕೆಲವರು ಧಾರಾವಾಹಿಯಲ್ಲಿ ನಟಿಸುವತ್ತ ಸಾಗಿದೆ. ಇನ್ನು ಕೆಲವರು ಮದುವೆಯಾಗಿ ಹ್ಯಾಪಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 8 ಮುಗಿದ ಕೆಲ ತಿಂಗಳುಗಳೇ ಕಳೆದಿವೆ. ಮಂಜು ಪಾವಗಡ, ದಿವ್ಯ ಸುರೇಶ್ ಕೆಲ ಕಾರ್ಯಕ್ರಮಗಳಲ್ಲಿ ಆಗಾಗ ಕಾಣಿಸಿಕೊಂಡು ಇದೀಗ ಅವರವರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶೋನಲ್ಲಿ ತನ್ನ ತಂಗಿಯಾಗಿ ನಟಿಸಿದ್ದರು. ಆದ್ರೆ, ಶೋ ದಿಂದ ಹೊರ ಬಂದ ಮೇಲೆ ದಂಪತಿಯಾಗಿ ಹೊಸ ಜೀವನ ನಡೆಸುತ್ತಿದ್ದಾರೆ. ಇದೀಗ ಹೊಸ ವಿಷಯ ಏನಪ್ಪಾ ಅಂದ್ರೆ, ಈ ಶೋನಲ್ಲಿ ಭಾಗವಹಿಸಿದ ಮತ್ತಿಬ್ಬರು ಹೊಸಜೀವನ ಆರಂಭಿಸಿದ್ದಾರೆ.

[widget id=”custom_html-3″]

Advertisements

ಬಿಗ್ ಬಾಸ್ ಮನೆ ಕೆಲವರಿಗೆ ಜೀವನದ ಪಾಠವನ್ನು ಹೇಳಿಕೊಟ್ಟರೇ, ಇನ್ನು ಕೆಲವರಿಗೆ ಜೀವನ ಸಂಗಾತಿಯನ್ನು ಆಯ್ದುಕೊಳ್ಳಲು ಅನುಕೂಲವಾಗಿದೆ ಎನ್ನಬಹುದು. ಈಗ ಒಂದಾಗುತ್ತಿರುವ ಜೋಡಿ ಯಾವುದು ಗೊತ್ತೆ? ಸಿನಿಮಾಗೆ ಡೆಟ್ಸ್ ಬೇಕು ಎಂದು ಮ್ಯಾನೇಜರ್ ಬಳಿ ಬಿಲ್ಡಪ್ ಪಡೆಯುತ್ತಾ ಟ್ರೋಲಾದ ಧನುಶ್ರೀ ಹಾಗೂ ಬಿಗ್ ಬಾಸ್ ಖ್ಯಾತಿಯ ಶಮಂತ. ಇತ್ತೀಚಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಧನುಶ್ರೀ ಮತ್ತು ಶಮಂತ್ ಹೊಸ ಶೋನಲ್ಲಿ ಮತ್ತೆ ಒಂದಾಗಿ ನಟಿಸಲಿದ್ದಾರೆ. ಖಾಸಗಿ ವಾಹಿನಿಯಾದ ಸುವರ್ಣ ವಾಹಿನಿಯ ಗಾನ ಬಜಾನ ಶೋ ಇದೀಗ ಮತ್ತೆ ಆರಂಭವಾಗುತ್ತಿದೆ. ನಿರೂಪಕ ನಿರಂಜನ್ ಕಾರ್ಯಕ್ರಮ ನಡೆಸಿಕೊಟ್ಟರೇ, ಶಮಂತ್ ಹಾಗೂ ದನುಶ್ರೀ ಒಟ್ಟಾಗಿ ಈ ಶೋನಲ್ಲಿ ಕಾಣಿಸಲಿದ್ದಾರೆ. ಬಿಗ್ ಬಾಸ್ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಈ ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಸಂತೋಷದ ಸಂಗತಿಯಾಗಿದೆ.

[widget id=”custom_html-3″]

ಪದೇಪದೇ ಅಭಿಮಾನಿಗಳಿಂದ ಟ್ರೊಲ್ ಗೆ ಒಳಗಾಗುತ್ತಿರುವ ಧನುಶ್ರೀ ಹಾಗೂ ಎಲ್ಲರ ಅಭಿಮಾನಗಳಿಸಿದ ಶಮಂತ್ ಇಬ್ಬರು ಒಟ್ಟಾಗಿ ಕಿರುತೆರೆ ಜರ್ನಿ ಆರಂಭಿಸಿದ್ದಾರೆ. ಅವರಿಬ್ಬರನ್ನು ಕಂಡ ಕೆಲವರು ಖುಷಿಪಟ್ಟರೆ. ಇನ್ನು ಕೆಲವರು ಧನುಶ್ರೀ ಅವರ ಕಾಲು ಎಳೆಯುತ್ತಿದ್ದಾರೆ. ಹೌದು ಇವರಿಬ್ಬರ ಕಿರುತೆರೆಯ ಜರ್ನಿಯನ್ನು ಕಂಡು ಕೆಲವರು ಎಲ್ಲ ಬಿಟ್ಟು ರೀಲ್ಸ್ ಮಾಡುವ ಧನುಶ್ರೀ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಮತ್ತೆ ಮತ್ತೆ ಕೆಲವರು ಇವರಿಬ್ಬರ ಈ ಜರ್ನಿಗೆ ಶುಭಕೋರಿ ಹಾರೈಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದು ಪ್ರತಿಯೊಬ್ಬರು ತಮ್ಮ ಬದುಕನ್ನೇ ಹೊಸದಾಗಿಯೇ ರೂಪಿಸಿಕೊಂಡಿದ್ದಾರೆ. ಅವರಲ್ಲಿ ಧನುಶ್ರೀ ಮತ್ತು ಶಮಂತ್ ಈ ರೀತಿಯ ಹೊಸ ಜರ್ನಿ ಆರಂಭಿಸಿದ್ದಾರೆ.

[widget id=”custom_html-3″]