ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ಈಗಾಗಲೇ ಆರಂಭಗೊಂಡಿದ್ದು, ಮೂರು ದಿನಗಳು ಕಳೆದಿವೆ. ಇನ್ನು ಬಿಗ್ ಮನೆಯ ಸ್ಪರ್ಧಿಗಳು ಕೂಡ ಆಗಲೇ ತಮ್ಮ ವೈಯುಕ್ತಿಕ ಜೀವನದ ಸ್ವಾರಸ್ಯಕರ ಸಂಗತಿಗಳು, ನೋವು ನಲಿವುಗಳನ್ನ ತಮ್ಮ ಇತರ ಸ್ಪರ್ಧಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ ಸಿನಿಮಾ ರಂಗದ ಚಾಮಯ್ಯ ಮೇಷ್ಟ್ರು ಹಿರಿಯ ನಟ ಅಶ್ವಥ್ ಅವರ ಮಗ ನಟ ಶಂಕರ್ ಅಶ್ವಥ್ ಅವರು ಕೂಡ ತಮ್ಮ ತಂದೆಯ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.

ಹೌದು, ಸ್ಪರ್ಧಿಯೊಬ್ಬರು ಹಿರಿಯ ನಟ ಅಶ್ವಥ್ ಅವರು ನಟಿಸಿದ್ದ ನಾಗರಹಾವು ಚಿತ್ರದ ಡೈಲಾಗ್ ಒಂದನ್ನ ಹೇಳಲು ಶಂಕರ್ ಅಶ್ವಥ್ ಅವರನ್ನ ಕೇಳುತ್ತಾರೆ. ಆದರೆ ಆ ಡೈಲಾಗ್ ನನಗೆ ನೆನಪಿಲ್ಲ ಎಂದು ಹೇಳಿದ ಶಂಕರ್ ಅಶ್ವಥ್ ಅವರು ಇದೆ ವೇಳೆ ತಮ್ಮ ತಂದೆಯನ್ನ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಾರೆ. ತಮ್ಮ ತಂದೆ, ಅವರ ಕೊನೆಯ ದಿನಗಳಲ್ಲಿ ಅನುಭವಿಸಿದ ಸಂಕಷ್ಟದ ದಿನಗಳನ್ನ ಇತರೆ ಸ್ಪರ್ಧಿಗಳ ಜೊತೆ ಹಂಚಿಕೊಂಡು ಕಣ್ಣೀರು ಸುರಿಸುತ್ತಾರೆ. ನಾನು ಖ್ಯಾತ ನಟನ ಮಗನಾಗಿರುವ ಕಾರಣದಿಂದ ಯಾರೊಬ್ಬರ ವಿರುದ್ದವೂ ಕೆ’ಟ್ಟದಾಗಿ ಬ’ಯ್ಯೋದಕ್ಕೆ ಆಗೋದಿಲ್ಲ. ಧೂ’ಮಪಾನ ಮಾಡುವ ಆಗಿಲ್ಲ..

ಹಾಗೆಲ್ಲಾ ಏನಾದ್ರು ಮಾಡಿದ್ರೆ ಖ್ಯಾತ ನಟ ಅಶ್ವಥ್ ಅವರ ಮಗ ಹೀಗೆಲ್ಲಾ ಮಾಡುತ್ತಾನಾ ಎಂದು ನನ್ನನ್ನ ಟೀಕೆ ಮಾಡುತ್ತಾರೆ ಎಂದು ಶಂಕರ್ ಅಶ್ವಥ್ ಕಣ್ಣೀರು ಸುರಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಶುರುವಾಗಿ ಕೆಲ ದಿನಗಳು ಮಾತ್ರ ಕಳೆದಿದ್ದು ಅದಾಗಲೇ, ಸ್ಪರ್ಧಿಗಳ ತಮ್ಮ ವೈಯುಕ್ತಿಕ ಜೀವನದ ಬಗೆಗಿನ ಸಂಗತಿಗಳನ್ನ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಾರೆ ಜೊತೆಗೆ ನಗಿಸುತ್ತಿದ್ದಾರೆ ಕೂಡ. ಇನ್ನು ಬಿಗ್ ಮನೆಯಲ್ಲಿ ಎಂದಿನಂತೆ ಟಾಸ್ಕ್ ಗಳು ಶುರುವಾಗಿದ್ದು ಕಿ’ತ್ತಾಟ, ಕಿರಿಕ್ ಗಳು ಕೂಡ ಶುರುವಾಗಿವೆ.