Advertisements

ಶಂಕರ್ ನಾಗ್ ಮಗಳು ಈಗ ಎಲ್ಲಿದ್ದಾರೆ.. ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ?

Cinema Kannada Mahiti

ನಮಸ್ತೆ ಸ್ನೇಹಿತರೆ, ಶಂಕರ್ ನಾಗ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಚಾಣಾಕ್ಷ ನಟ ಹಾಗು ನಿರ್ದೇಶಕ.. ಚುರುಕಾದ ಪ್ರತಿಕ್ಷಣ ಹೊಸತನವನ್ನ ಆಲೋಚಿಸುತ್ತಿದ್ದ ಶಂಕರ್ ನಾಗ್ ಇವರೆಗೂ ಇದ್ದಿದ್ದರೆ ಕನ್ನಡ ಚಿತ್ರರಂಗ ಬೇರೊಂದು ಲೆವೆಲ್ ಗೆ ಹೋಗುತ್ತಿತ್ತು. ಶಂಕರ್ ನಾಗ್ ಈಗಲೂ ಕನ್ನಡಿಗರ ಮನದಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದಾರೆ.. ಆದರೆ ಅವರು ಮಗಳು ಕಾವ್ಯ ನಾಗ್ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಗೊತ್ತಾ? ಅಂದು ಸೆಪ್ಟೆಂಬರ್ 30, 1990 ರ ರಾತ್ರಿ ಶೂಟಿಂಗ್ ಮುಗಿಸಿಕೊಂಡು ಪತ್ನಿ ಅರುಂಧತಿ ನಾಗ್ ಹಾಗೂ ಐದು ವರ್ಷದ ಮಗಳು ಕಾವ್ಯ ಜೊತೆ ಶಂಕರ್ ನಾಗ್ ಕಾರಿನಲ್ಲಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾಗ ಒಂದು ಟ್ರಕ್ ಸುಂದರ ಕುಟುಂಬವನ್ನ ಛಿ’ದ್ರ ಛಿ’ದ್ರವಾಗಿ ಮಾಡಿತು.

Advertisements

ಆ ಅಪ’ಘಾ’ತದಲ್ಲಿ ಕನ್ನಡಿಗರ ಸ್ಟೈಲ್ ಕಿಂಗ್ ಶಂಕರ್ ನಾಗ್ ಇಹಲೋಕ ತ್ಯಜಿಸಿದರು.. ಅದೇ ಕಾರಿನಲ್ಲಿದ್ದ ಅರುಂಧತಿ ನಾಗ್ ಅವರಿಗೆ ಬೀ’ಕ’ರ ಗಾ’ಯ’ಗಳಾದವು. ಅದೃಷ್ಟಕ್ಕೆ ಐದು ವರ್ಷದ ಕಾವ್ಯ ಅವರಿಗೆ ಚಿಕ್ಕ ಪುಟ್ಟ ಗಾ’ಯ’ಗಳಾದವು.. ಈ ಘಟನೆಯಿಂದ ಅರುಂಧತಿ ನಾಗ್ ಅವರು ಒಂದು ವರ್ಷ ವೀಲ್ ಚೇರ್ ನಲ್ಲಿ ಕೂರುವಂತಾಯಿತು. ಈ ದು’ರಂತ ಘಟನೆಯ ದಿನಗಳನ್ನ ದಾಟಿ ಬರುವ ಹೊತ್ತಿಗೆ ಅರುಂಧತಿ ನಾಗ್ ಅವರ ಬಳಿ ಇದ್ದದ್ದು ಕೇವಲ 5 ಸಾವಿರ ರೂಪಾಯಿ.. ಆದರೂ ದೃತಿಗೆಡದ ಅರುಂಧತಿ ನಾಗ್ ರಂಗ ಭೂಮಿಯಲ್ಲಿ ತೊಡಗಿಸಿಕೊಂಡು ಎಲ್ಲವನ್ನ ಎದುರಿಸಿ ಪುಟ್ಟ ಮಗಳಿಗೆ ಯಾವುದೇ ತೊಂ’ದರೆಯಾಗದಂತೆ ಮುದ್ದಾಗಿ ಬೆಳೆಸಿದರು.

ವನ್ಯಜೀವಿ ವಿಭಾಗದಲ್ಲಿ ಎಮ್.ಎ ಮಾಡಿದ ಕಾವ್ಯ ನಾಗ್ ಮದುವೆಯಾಗಿ ಗಂಡನ ಜೊತೆ ವಿಯೆಟ್ನಾಂ ಗೆ ಹೋಗಿ ಮತ್ತೆ ಬೆಂಗಳೂರಿಗೆ ಬಂದು ಈಗ ತನ್ನದೇ ಆದ ಒಂದು ಸ್ವಂತ ಕಂಪನಿಯನ್ನ ತೆರೆದಿದ್ದಾರೆ.. ಹೊಸೂರಿನಲ್ಲಿರುವ ತಂದೆಯ ಜಮೀನಿನಲ್ಲಿ ಕೆ’ಮಿಕಲ್ ಮುಕ್ತ ಸೋಪು ಮತ್ತು ಆಯಿಲ್ ತಯಾರಿಸುವ ಕೊಕೊನೆಸ್ ಎಂಬ ಕಂಪನಿ ತೆರೆದಿರುವ ಕಾವ್ಯ ಅವರು ನೈಸರ್ಗಿಕ ಸೋಪ್ ಅನ್ನು ತಯಾರು ಮಾಡಿ ಮಾರುತ್ತಿದ್ದಾರೆ.. ಹೊಸ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ ಅಷ್ಟೇ ಅಲ್ಲದೇ ತಂದೆಯ ಅಲೋಚನೆಗಳನ್ನು ಮರೆಯದ ಕಾವ್ಯ ಅವರು ನೊಂದ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸುತ್ತಿದ್ದಾರೆ. ಕಾವ್ಯ ಅವರ ಈ ಒಂದು ಹೊಸ ಪ್ರಯತ್ನಕ್ಕೆ ನಿಮ್ಮದೊಂದು ಶುಭಾಶಯ ಇರಲಿ.