Advertisements

24 ವರ್ಷದ ಹುಡುಗಿ 44 ವಯಸ್ಸಿನ ವ್ಯಕ್ತಿ ಜೊತೆ ಮದುವೆ ಆಗೊದಕ್ಕೆ ನಿಜವಾದ ಕಾರಣ ಏನು ಗೊತ್ತಾ? ಅಸಲಿ ಕಥೆ ಇದೇ ನೋಡಿ..

Kannada Mahiti

ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು.. ಎಲ್ಲಾ ಎಲ್ಲೆ ಮೀರಿ ಸಾಗುವ ಪಯಣ ನಮ್ಮದು.. ಜರಿವಾ ಜನರೆದುರಿನಲ್ಲಿ ನಿನ್ನಾ ನೆರಳಾಗಿ ನಿಲ್ಲುವೆ.. ಅರೆ ಇದೇನಿದು ಜೊತೆ ಜೊತೆಯಲಿ ಟೈಟಲ್ ಸಾಂಗ್ ಅಲ್ವಾ ಅಂತ ನೀವು ಯೋಚಿಸಬಹುದು.. ನಿಮ್ಮ ಯೋಚನೆ ಸರಿಯಾಗಿದೆ.. ಇದು ಜೊತೆ ಜೊತೆಯಲಿ ಟೈಟಲ್ ಟ್ರ್ಯಾಕ್.. ಆದ್ರೆ ಈಗ್ಯಾಕೆ ಹೇಳ್ತಿದೀವಿ ಅನ್ನೋದಕ್ಕೆ ಈ ಸ್ಟೋರಿ ನೋಡಬೇಕು.. ಎಸ್.. ಮೊನ್ನೆ ಮೊನ್ನೆ ಅಷ್ಟೇ ಇಪ್ಪತ್ತೈದು ವರ್ಷದ ಮೇಘನಾ ನಲವತ್ತೈದು ವರ್ಷದ ಶಂಕ್ರಣ್ಣ ಎಂಬುವವರನ್ನು ಮದುವೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹರಿದಾಡಿತ್ತು.. ಇವರ ಮದುವೆಯ ಫೋಟೋಗಳು ಬಹಳಷ್ಟು ಸುದ್ದಿ ಮಾಡಿತ್ತು..

Advertisements

[widget id=”custom_html-3″]

ಅದರಲ್ಲೂ ಕನ್ನಡದ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿಯ ನಿಜ ಜೀವನದ ಸ್ಟೋರಿಯಂತೆ ಆಗಿದ್ದು ಮೇಘನಾ ತನಗಿಂತ ಇಪ್ಪತ್ತು ವರ್ಷ ದೊಡ್ಡವರನ್ನು ಮದುವೆಯಾಗಿದ್ದು ನಿಜ ಜೀವನದಲ್ಲಿ ಸಹ ಹೀಗೆ ಬದುಕಬಹುದು ಅಂತ ತೋರಿಸಿಕೊಟ್ಟಿದ್ದಾರೆ.. ಮಾದ್ಯಮಗಳ ಮುಂದೆ ಕೈ ಕೈ ಹಿಡಿದು ಮಾತನಾಡಿದ ಈ ಕಪಲ್ಸ್ ಕೆಲವು ನೋವಿನ ವಿಚಾರಗಳನ್ನು ಹೇಳಿಕೊಂಡಿದ್ದಾರೆ.. ಮೇಘನಾ ಅವರಿಗೆ ಈಗಾಗಲೇ ಮದುವೆ ಆಗಿತ್ತಂತೆ. ಆಕೆಯ ಗಂಡ ಒಂದು ವರ್ಷ ಸಂಸಾರ ಮಾಡಿ ಮೇಘನಾ ಅವರನ್ನು ಬಿಟ್ಟು ಹೋಗಿದ್ನಂತೆ.. ಅಲ್ಲದೇ ಆತ ಇನ್ನೋಬ್ಬಳ ಹಿಂದೆ ಪ್ರೀತಿ ಪ್ರೇಮ ಅಂತ ಹೋಗಿದ್ದಾನೆ ಎಂದು ಸಹ ಹೇಳಲಾಗುತ್ತಿದೆ..

[widget id=”custom_html-3″]

ಇದೇ ಕಾರಣಕ್ಕೆ ಒಂಟಿತನ ಹೋಗಲಾಡಿಸಲು ಏಕಾಂಗಿತನವನ್ನು ದೂರ ಮಾಡುವ ಸಲುವಾಗಿ ಮೇಘನಾ ಇನ್ನೊಂದು ಮದುವೆ ಆಗುವ ನಿರ್ಧಾರ ಮಾಡ್ತಾರೆ. ಈ ಕಾರಣಕ್ಕಾಗಿಯೇ ಗಂಡನ್ನು ಹುಡುಕುತ್ತಾ ಇರುತ್ತಾರೆ.. ಆದ್ರೆ ಎಷ್ಟೇ ಹುಡುಕಿದರೂ ಮೇಘನಾಗೆ ಮದುವೆಯಾಗಲು ವರ ಸಿಕ್ಕುವುದಿಲ್ಲ.. ಆ ಸಂದರ್ಭದಲ್ಲಿ ಇತ್ತ ಮದುವೆಯಾಗಲು ಶಂಕ್ರಣ್ಣ ಹೆಣ್ಣು ಹುಡುಕುತ್ತಾ ಇರೋ ವಿಚಾರ ಮೇಘನಾ ಅವರಿಗೆ ಗೊತ್ತಾಯಿತು.. ಆಗ ಮೇಘನಾ ಅವರೇ ಖುದ್ದಾಗಿ ಶಂಕ್ರಣ್ಣನ ಬಳಿ ಮದುವೆಯಾಗುವ ಪ್ರಪೋಸಲ್ ಇಡ್ತಾರೆ. ಮೇಘನಾ ಮಾತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಶಂಕ್ರಣ್ಣ ಮದುವೆಯಾಗ್ತಾರೆ.. ಆದ್ರೆ ಈ ಮದುವೆಗೆ ಮೇಘನಾ ಮನೆಯಲ್ಲಿ ವಿರೋಧವಿದ್ಯಂತೆ.. ನಮ್ಮನ್ನು ಒಪ್ಪಿಕೊಳ್ಳಿ ಅಂತ ಮೇಘನಾ ವಿನಂತಿಸಿದ್ದಾರೆ..