Advertisements

ಕುಕ್ಕೆ ಸುಬ್ರಮಣ್ಯದಲ್ಲಿ ಆರು ಹೆಡೆ ಸರ್ಪ ಇರೋದು ನಿಜವೇ? ಅಸಲಿ ಸತ್ಯ ಇದೆ ನೋಡಿ..

Adyathma

ವಾಸುದೇವನು ಗರುಡ ರಾಜನಿಂದ ತಪ್ಪಿಸಿಕೊಂಡು ಕುಕ್ಕೆಯಲ್ಲಿ ಬಂದು ನೆಲೆಸಿದ್ದು ನಿಮಗೆಲ್ಲಾ ಗೊತ್ತಿದೆ. ನಾಗದೇವ ಹಾಗೂ ಸುಬ್ರಮಣ್ಯ ಸ್ವಾಮಿ 6 ಹೆಡೆ ಸರ್ಪವಾಗಿ ಇಂದಿಗೂ ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ಪ್ರತೀತಿಯಿದೆ. ಹಾಗಾದರೆ ಯಾವಾಗ ದರ್ಶನ ಕೊಡುತ್ತಾರೆ ಎಂದು ನಾವು ನಿಮಗೆ ತಿಳಿಸುತ್ತೇವೆ ಈ ಲೇಖನವನ್ನು ಪೂರ್ಣವಾಗಿ ಓದಿ.
ಕುಮಾರಧಾರಾ ನದಿಯ ದಡದಲ್ಲಿ ಕಂಡುಬರುವ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯ. ಗರುಡ ರಾಜ ನಿಂದ ತಪ್ಪಿಸಿಕೊಂಡು ಬಂದು ವಾಸುಕಿಯು ಇಲ್ಲಿಯ ಗುಹೆಯಲ್ಲಿ ತಪಸ್ಸು ಆಚರಿಸಿದ್ದರು. ಮುಂದೆ ಶನ್ಮುಖ ಹಾಗೂ ಗಣೇಶರು ಇಲ್ಲಿಗೆ ಆಗಮಿಸಿ ತಾರಕ ಅಸುರರನ್ನು ಸಂಹರಿಸಿದ್ದು ಕೂಡ ಇದೇ ಕುಮಾರಪರ್ವತದಲ್ಲಿ. ಈ ವಿಜಯದ ನಂತರ ಕುಮಾರಸ್ವಾಮಿ ಹಾಗೂ ದೇವಸೇನ ವಿವಾಹವಾಗಿದ್ದು ಕೂಡ ಇದೇ ಸ್ಥಳದಲ್ಲಿ ಈ ಕಾರಣಕ್ಕೆ ಈ ಕ್ಷೇತ್ರಕ್ಕೆ ಅಪಾರ ದೈವೀಶಕ್ತಿ ದೊರೆತಿದೆ ಎಂದು ಪ್ರತೀತಿ ಇದೆ.
ಷಣ್ಮುಖ ನಿಗೆ ಶರವಣಭವ ಎಂದು ಕರೆಯುತ್ತಾರೆ.

[widget id=”custom_html-3″]

Advertisements

ಏಕೆಂದರೆ ಆತನಿಗೆ ಆರು ಮುಖಗಳು ಇರುವುದು. ಶ -ಎಂದರೆ ಲಕ್ಷ್ಮೀ, ರ -ಎಂದರೆ ಅಗ್ನಿ ಬೀಜ, ವ – ಎಂದರೆ ಅಮೃತ ಬೀಜ, ಣ – ಎಂದರೆ ಯಕ್ಷ ಬೀಜ, ಭ – ಅರುಣ ಬೀಜ, ವ – ಎಂದರೆ ಪುಣ್ಯ ಬೀಜ ಹೀಗೆ ಆರು ಅಂಶಗಳಿಂದ ಹುಟ್ಟಿದ್ದರಿಂದ ಶರವಣಭವ ಎಂದು ಕರೆಯುವರು. ಬಿಳಿ, ಕಪ್ಪು, ಕೆಂಪು,ಹಳದಿ, ಚಿತ್ರವರ್ಣ, ಕಂದು ಬಣ್ಣದ 6 ಮುಖಗಳ ಆದರೆ, ಖಡ್ಗ,ಪಾಶ,ಅಂಕುಶ, ತ್ರಿಶೂಲ, ಧನಸ್ಸುಗಳು ಇವನ ಆಯುಧಗಳಾಗಿವೆ. ಈತನ ಜನನದ ಬಗ್ಗೆ ತಿಳಿಯುವುದಾದರೆ ಅದೊಂದು ರೋಚಕ ಕಥೆಯಾಗಿದೆ. ಹೌದು… ಶಿವ ಮತ್ತು ಪಾರ್ವತಿ ವಿವಾಹದ ನಂತರ ಶಿವನ ತೇಜಸ್ಸು ಭೂಮಿಗೆ ಬೀಳುತ್ತದೆ. ಭೂದೇವಿ ಅದನ್ನು ಭರಿಸಲಾಗದೆ ಅಗ್ನಿ ದೇವನಿಗೆ ನೀಡುತ್ತಾಳೆ. ಅಗ್ನಿ ದೇವನಿಗೆ ಅದನ್ನು ಹಿಡಿಯಲಾಗದೆ ಗಂಗೆಗೆ ನೀಡುತ್ತಾನೆ ಗಂಗೆಯು ಕೂಡ ಅದನ್ನು ಹಿಡಿಯಲಾಗದೆ ಶರವಣ ಮುನಿ ದೇವನಿಗೆ ನೀಡುತ್ತಾರಂತೆ. ಆಗ ಷಣ್ಮುಖ ಜನನವಾಯಿತು ನಂತರ ಇವನಿಗೆ ಶರವಣಭವ ಎಂದು ಹೆಸರು ಬಂತು. ಈತ ಜನಿಸಿದ ಸಂದರ್ಭ ಚಂಪಾ ಸೃಷ್ಟಿ ಮತ್ತು ಶರವಣ ಸೃಷ್ಟಿ ಎಂದು ಕುಕ್ಕೆಯಲ್ಲಿ ಈ ದಿನವನ್ನು ಅತಿ ವಿಜೃಂಭಣೆಯಿಂದ ಸಂಭ್ರಮ ಸಡಗರದಿಂದ ಆಚರಿಸುವರು.

[widget id=”custom_html-3″]

ಷಣ್ಮುಖನಿಗೆ ಅತ್ತಾಗ ಆರು ಜನ ಕೃತಿಕಾ ದೇವತೆಗಳು ಬರುತ್ತಿದ್ದರಂತೆ. ಅವರಿಂದ ಒಂದೊಂದು ಶಕ್ತಿಯನ್ನು ಪಡೆದ ದೇವಸೇನ ಷಣ್ಮುಖ ತಾರಕಾಸುರನನ್ನು ಸಂ’ಹ’ರಿಸುತ್ತಾನೆ. ಅಂದು ಮಾರ್ಗಶಿರ ಶುಕ್ಲ ಪಕ್ಷದ ಷಷ್ಠಿ ಇತ್ತು. ಚಂಪಾ ಎಂಬ ವಿಶೇಷ ಯೋಗವಿದ್ದು ಇದು ವಿಶೇಷ ದಿನವಾಗಿದೆ. ಆದ್ದರಿಂದಲೇ ಅಂದಿನಿಂದ ಇಂದಿನವರೆಗೂ ಚಂಪಾಷಷ್ಠಿಯಂದು ಷಣ್ಮುಖನಿಗೆ ವಿಶೇಷ ಪೂಜೆ-ಪುನಸ್ಕಾರಗಳು ಸಲ್ಲುತ್ತವೆ. ಈ ದಿನ ಕುಕ್ಕೆಯಲ್ಲಿ ಆಶ್ಲೇಷಬಲಿ ಮತ್ತು ಸರ್ಪದೋಷ ಪರಿಹಾರ ಎಂಬ ಎರಡು ವಿಶೇಷ ಪೂಜೆಗಳು ಈ ದಿನದಂದು ನಡೆಯುತ್ತದೆ. ಪೂಜೆಗಳಿಂದ ಸಂತೃಪ್ತನಾದ ಸುಬ್ರಹ್ಮಣ್ಯ ದೇವನು ಆರು ಹೆಡೆ ಸರ್ಪವಾಗಿ ಕುಮಾರಪರ್ವತದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಅವರ ಸರ್ಪದೋ’ಷ ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ.
ಈ ದಿನದಂದು ಕುಕ್ಕೆಯಲ್ಲಿ ಹಾಗೂ ವಿವಿಧ ಪುಣ್ಯಸ್ಥಳಗಳಲ್ಲಿ ಸರ್ಪದೋ’ಷ ನಿವಾರಣಾ ಮಹಾಪೂಜೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ತಮ್ಮ ಪಾಪಗಳನ್ನು ಸಹ ನಿವಾರಿಸಿಕೊಳ್ಳುತ್ತಾ ರೆ. ನೀವು ಕೂಡ ಸರ್ಪ ದೋ’ಷ ನಿವಾರಣೆಗಾಗಿ ಹಾಗೂ ಸುಬ್ರಹ್ಮಣ್ಯಸ್ವಾಮಿಯ ವಿಶೇಷ ದರ್ಶನ ಪಡೆಯಲು ಕುಕ್ಕೆಗೆ ಒಮ್ಮೆ ಭೇಟಿ ನೀಡಿ ಪುನೀತರಾಗಿರಿ..

[widget id=”custom_html-3″]