Advertisements

ಈ ಕೆಲಸ ಮಾಡುವ ಭಾರತದ ಎಕೈಕ ಮಹಿಳೆ! ನೀವು ಎಂದು ನೋಡಿರಲು ಸಾಧ್ಯವಿಲ್ಲ, ಈಕೆ ಮಾಡುವ ಕೆಲಸ ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ..

Inspire Kannada Mahiti

ನಮಸ್ತೆ ಸ್ನೇಹಿತರೆ, ಹಳೆಯ ಕಾಲದಿಂದಲೂ ಮಹಿಳೆಯರು ಎಂದರೆ ಗೃಹಿಣಿ ಮತ್ತು ಮನೆ ಕೆಲಸ ಮಾಡುವುದಕ್ಕೆ ಮಾತ್ರ ಸೀಮಿತ ಎಂದು ಭಾವಿಸುತ್ತಿದ್ದರು.. ಆದರೆ ಕಾಲ ಬದಲಾಂದತೆ ಮಹಿಳೆಯರು ಕೂಡ ಪುರುಷರ ಎಲ್ಲಾ ಕೆಲಸಗಳನ್ನು ಮಾಡಲು ಶುರು ಮಾಡಿದರು. ಆಟೋ ಚಾಲಕಿ, ಬಸ್ ಡ್ರೈವರ್ ನಿಂದ ಇಡಿದು ದೇಶದ ರಾಷ್ಟ್ರಪತಿ ಯವರೆಗೂ ಮಹಿಳೆಯರು ಎಲ್ಲಾ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ ನಾವು ತಿಳಿಸಿಕೊಡುವ ಈ ಮಹಿಳೆ ಮಾಡುತ್ತಿರುವ ಕೆಲಸ  ಭಾರತದಲ್ಲಿ ಈಕೆಯೇ ಪ್ರಪ್ರಥಮ ಮಹಿಳೆ.. ಮಹಿಳೆಯರು ಈ ಕೆಲಸವನ್ನು ಮಾಡಿರುವುದನ್ನು ನೀವು ನೋಡಿರುವುದು ಇಲ್ಲಾ ಕೇಳಿರುವುದು ಇಲ್ಲಾ. ಇದೊಂದು ಆಶ್ಚರ್ಯ ಚಕಿತವಾದ ನಿಜ ಜೀವನದ ಕಥೆ.. ಇವರ ಹೆಸರು ಶಾಂತಿ ದೇವಿ.

Advertisements

ಒಂದು ಸರ್ವೆಯ ಪ್ರಕಾರ ಇಡೀ ಭಾರತ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಟ್ರಕ್ ಮೆಕಾನಿಕ್ ಈ ಶಾಂತಿ ದೇವಿ.‌. ಇಡೀ ಏಷ್ಯಾದ ಅತಿ ದೊಡ್ಡ ಟ್ರಕ್ ಪಾರ್ಕಿಂಗ್ ಏರಿಯಾದ ಸಂಜಯ್ ಗಾಂಧಿ ಟ್ರಾನ್ಸ್ ಪೋರ್ಟ್ ನಲ್ಲಿ ಈ ಶಾಂತಿ ದೇವಿ ಕೆಲಸ ಮಾಡುತ್ತಿದ್ದಾರೆ. ಡೆಲ್ಲಿಯ ಸಂಜಯ್ ಗಾಂಧಿ ಟ್ರಾನ್ಸ್ ಪೋರ್ಟ್ ನಲ್ಲಿ ಸರಿಸುಮಾರು 70 ಸಾವಿರಕ್ಕೂ ಅಧಿಕ ಲಾರಿಗಳು ನಿಲ್ಲುತ್ತವೆ.‌. 20 ವರ್ಷಗಳ ಹಿಂದೆ ಟೀ ಅಂಗಡಿ ಇಟ್ಟುಕೊಂಡಿದ್ದ ಈ ಶಾಂತಿ ದೇವಿ ತಮ್ಮ ಗಂಡ ಅಲ್ಲಿಯೇ ಟ್ರಕ್ ರಿಪೇರಿ ಮತ್ತು ಲಾರಿಗಳಿಗೆ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದರು. ಮೊದ ಮೊದಲು ಗಂಡನಿಗೆ ಸಹಾಯ ಮಾಡುತ್ತಿದ್ದ ಶಾಂತಿ ದೇವಿ ಟೀ ಅಂಗಡಿಯನ್ನು ಮುಚ್ಚಿ ತಾನು ಕೂಡ ಲಾರಿಗಳಿಗೆ ರಿಪೇರಿ ಮತ್ತು ಪಂಕ್ಚರ್ ಆಕುವ ಕೆಲಸ ರೂಡಿ ಮಾಡಿಕೊಂಡರು..

ಈ ಕೆಲಸದಲ್ಲಿ ಶಾಂತಿ ದೇವಿಗೆ ಡಿಗ್ರಿ ಇಲ್ಲದಿರಬಹುದು. ಆದರೆ ಪ್ರೊಫೆಷನಲ್ ಆಗಿ ಸರಿಸಾಟಿಯಾಗಿ ಕೆಲಸ ಮಾಡುತ್ತಾರೆ.. 55 ವರ್ಷದ ಈ ಶಾಂತಿ ದೇವಿ ಪ್ರತಿದಿನ 15 ರಿಂದ 20 ಲಾರಿಗಳ ಟೈಯರ್ ಪಂಕ್ಚರ್ ಗಳನ್ನು ಬದಲಿಸುತ್ತಾರೆ. ಡೆಲ್ಲಿ ಯೂನಿವರ್ಸಿಟಿಯಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಹುರಿದುಂಬಿಸುವುದಕ್ಕೆ ಗೆಸ್ಟ್ ಲಚ್ಚರ್ ಆಗಿ ಬರುತ್ತಾರೆ.. ಶಾಂತಿ ದೇವಿ ಪ್ರಕಾರ ಗಂಡಸು ಮಾಡುವ ಪ್ರತೀ ಕೆಲಸವನ್ನು ಹೆಂಗಸರು ಸಹ ಮಾಡಬಹುದು. ಎಷ್ಟೋ ಮಹಿಳೆಯರಿಗೆ ಆದರ್ಶವಾಗಿ ನಿಂತಿರುವ ಶಾಂತಿ ದೇವಿ ನಮ್ಮ ಭಾರತ ದೇಶದ ಮಹಿಳೆ ಅಂತ ಹೇಳಿಕೊಳ್ಳೋದಕ್ಕೆ ನಮಗೆ ಹೆಮ್ಮೆ ಆಗುತ್ತದೆ.. ಈ ವಯಸ್ಸಿನಲ್ಲೂ ಕೂಡ ಶಾಂತಿ ದೇವಿಯ ಕೆಲಸಕ್ಕೆ ಒಂದು ಹ್ಯಾಟ್ಸಪ್ ಹೇಳಲೇಬೇಕು.