Advertisements

ಶೃಂಗೇರಿ ಶಾರದೆ ಗರ್ಭಗುಡಿ ರಹಸ್ಯ! ಇದು ಎಷ್ಟೋ ಜನರಿಗೆ ಗೊತ್ತೇ ಇಲ್ಲ..

Temples

ನಮಸ್ಕಾರ ಸ್ನೇಹಿತರೆ ಅದು ಶ್ರೀಶಂಕರಾಚಾರ್ಯರು ಭಾರತದಲ್ಲಿ ಧರ್ಮಪ್ರಚಾರ ನಿಯಮಿತ್ತ ಭಾರತದ ಪ್ರವಾಸ ಮಾಡುವಂತಾ ಕಾಲ ದಕ್ಷಿಣದಲ್ಲಿ ಪೀಠ ಸ್ಥಾಪನೆಗೆ ಜಾಗ ಆರಿಸುತ್ತಿರುವಾಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಅಂದಿನ ಶೃಂಗಗಿರಿಗೆ ತಲುಪುತ್ತಾರೆ. ಆವತ್ತು ಭಾರಿ ಮಳೆಯಾಗುತ್ತಿರುವ ಸಮಯ ಅದು ಆ ಸಂದರ್ಭದಲ್ಲಿ ಅವರು ಅಲ್ಲಿ ಒಂದು ವಿಸ್ಮಯವನ್ನು ನೋಡುತ್ತಾರೆ.. ಹಾಗಾದರೆ ಆ ವಿಸ್ಮಯ ಯಾವುದು ಯಾಕೆ ಆ ವಿಸ್ಮಯವನ್ನು ನೋಡಿ ಇಲ್ಲೇ ತಮ್ಮ ಪೀಠವನ್ನು ಸ್ಥಾಪಿಸಲು ನಿರ್ಧರಿಸುತ್ತಾರೆ. ಅವರು ಸ್ಥಾಪಿಸಿದ ಶಾರದಾಂಬ ದೇವಿಯ ಗರ್ಭಗುಡಿಯ ರ’ಹ’ಸ್ಯಗಳ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ. ಶಾರದೆ ಎಂದರೆ ನಮಗೆ ನೆನಪಾಗುವುದು ಶೃಂಗೇರಿಯ ಶಾರದಾಂಬ, ಶೃಂಗೇರಿ ಶಾರದಾಂಬೆಯ ದೇಗುಲದ ಬಗ್ಗೆ ಕೇಳಿದವರಾರು ಚಂದದ ಕಲ್ಲಿನ ದೇವಾಲಯದಲ್ಲಿ ವಿದ್ಯಾಪತಿಯಾದ ಶಾರದಾಂಬೆ ಭಕ್ತಗಣಕ್ಕೆ ಹರಿಸುತ್ತಾ ಹೊಳೆಯುವ ಮೂಗುತ್ತಿಯಲ್ಲಿ ಮಂದಹಾಸ ಬೀರುತ್ತ ಕುಳಿತಿರುವುದನ್ನು ನೋಡುವುದೇ ಒಂದು ಪರಮಾನಂದ ಆಕೆಯ ಮಂದಸ್ಮಿತ ಮುಖಕ್ಕೆ ಭಕ್ತರ ಸಂಕಷ್ಟ ವನ್ನೆಲ್ಲಾ ಓಡಿಸಿ ಚಿಂತೆ ಮರೆಸುವ ಶಕ್ತಿ ಇದೆ ಪಕ್ಕದ ತುಂಗಾನದಿಯ ಮೀನುಗಳ ಸಾಮ್ರಾಜ್ಯ ಕಪ್ಪೆ ಶಂಕರ ನ ಗುಡಿ ಸುತ್ತಲೂ ಹಸಿರು ಹತ್ತಿರದಲ್ಲಿರುವ ಸಿರಿಮನೆ ಫಾಲ್ಸ್ ಎಲ್ಲವೂ ಸೇರಿ ಶೃಂಗೇರಿಯ ಸೊಬಗಿಗೆ ಮತ್ತಷ್ಟು ಬಣ್ಣವನ್ನು ತರುತ್ತದೆ.

[widget id=”custom_html-3″]

Advertisements

ಈ ಪ್ರಸಿದ್ಧ ಶಾರದಾಂಬ ದೇಗುಲ ತುಂಗಾ ನದಿಯ ದಡದಲ್ಲಿದ್ದು ಎಂಟನೆಯ ಶತಮಾನದಲ್ಲಿ ನಿರ್ಮಾಣಗೊಂಡಿದೆ.
ಶ್ರೀ ಆದಿ ಶಂಕರಾಚಾರ್ಯರು ದೇಶದಾದ್ಯಂತ ಧರ್ಮ ಸಂಚಾರದಲ್ಲಿ ತೊಡಗಿದ್ದಾಗ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಟ್ಟ ದೇವಾಲಯಗಳನ್ನು ಕಟ್ಟಿಸುತ್ತಾರೆ ಬದ್ರಿನಾಥ ದಲ್ಲಿರುವ ಜ್ಯೋತಿ ಪೀಠ ಪಶ್ಚಿಮದಲ್ಲಿ ದ್ವಾರಕೆಯ ಶಾರದಾಪೀಠ ಪೂರ್ವದಲ್ಲಿ ಗೋವರ್ಧನ ಪೀಠ ಹಾಗು ದಕ್ಷಿಣದಲ್ಲಿ ನಮ್ಮ ಕರ್ನಾಟಕದಲ್ಲಿ ಇರುವಂತಹ ಶೃಂಗೇರಿಯ ಶಾರದಾ ಪೀಠ ಶಂಕರಾಚಾರ್ಯರು ಇಲ್ಲಿಗೆ ಬಂದಾಗ ಹಾವು ಒಂದು ಬೋರ್ಗರೆವ ಮಳೆಯಲ್ಲಿ ಗರ್ಭಿಣಿ ಕಪ್ಪೆಯನ್ನು ರಕ್ಷಿಸಲು ತನ್ನ ಹೆಡೆಯನ್ನು ಅಡ್ಡವಾಗಿ ಹಿಡಿದು ನೋಡಿ ಅವರು ಆಶ್ಚರ್ಯಕ್ಕೆ ಒಳಗಾಗುತ್ತಾರೆ ಈ ಸಾಮಾನ್ಯವಾಗಿ ಹಾವುಗಳು ಕಪ್ಪೆಗಳನ್ನು ತಿನ್ನುತ್ತವೆ.. ಆದರೆ ಶೃಂಗೇರಿಯಲ್ಲಿ ಈ ವೈ ಚಿತ್ರಕ್ಕೆ ಬೆರಗಾಗಿ ಇಲ್ಲಿಯೇ ದೇವಸ್ಥಾನ ಆಗು ಪೀಠವನ್ನು ನಿರ್ಮಿಸಲು ನಿರ್ಧರಿಸುತ್ತಾರೆ. ಈಗಲೂ ಕೂಡ ಇಲ್ಲಿ ಹಾವು ಕಪ್ಪೆಗೆ ರಕ್ಷಣೆ ನೀಡುತ್ತಿರುವ ಆಕೃತಿ ಇದೆ. ಇದನ್ನು ಕಪ್ಪೆ ಗುಡಿ ಶಂಕರ ಎಂದೆ ಕರೆಯುತ್ತಾರೆ.

[widget id=”custom_html-3″]

ವಿಜಯನಗರ ಸಾಮ್ರಾಜ್ಯಕ್ಕೆ ಕಾರಣರಾದ ಅಂತಹ ವಿದ್ಯಾರಣ್ಯರು ಶೃಂಗೇರಿಯ ಪೀಠಾಧಿಪತಿಗಳು ಆಗಿದ್ದರು. ವಿಜಯನಗರ ಅರಸರು ಇಲ್ಲಿನ ಗುರುವನ್ನು ರಾಜಧಾನಿಗೆ ಬರಮಾಡಿಕೊಂಡು ಅವರ ಆಶೀರ್ವಾದ ಅನುಗ್ರಹ ಪಡೆದು ಮುಂದೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ ಅಕ್ಕ ಬುಕ್ಕರು, ಇದೇ ಕಾರಣ ವಿಜಯನಗರ ಸಾಮ್ರಾಜ್ಯದ ರಾಜರು ಈ ಮಠಕ್ಕೆ ಅನೇಕ ಉಂಬಳಿಗಳನ್ನು ನೀಡಿದರು ಅಗ್ರಹಾರಗಳನ್ನು ಕಟ್ಟಿಸಿದರು ಕೆಳದಿಯ ಅರಸರು ಮೈಸೂರು ಒಡೆಯರು ಮರಾಠರು ಎಲ್ಲರೂ ಸೇರಿ ಗೌರವವನ್ನು ಹೊಂದಿದ್ದರು. 1336 ರಲ್ಲಿ ನಿರ್ಮಾಣವಾದ ಶ್ರೀ ವಿದ್ಯಾಶಂಕರ ದೇವಾಲಯ ಅತಿ ಸುಂದರವಾದದ್ದು
ತುಂಗಾನದಿಯ ಮೊಗ್ಗಲಲ್ಲಿ ಎತ್ತರ ಜಗುಲಿ ಮೇಲೆ ನಿಂತಿರುವ ಈ ಭವ್ಯ ಶಿಲಾ ರಚನೆಯು ಚಾಲುಕ್ಯ ಹೊಯ್ಸಳ ವಿಜಯನಗರ ವಾಸ್ತುಶಿಲ್ಪಿಗಳ ಸುಂದರ ಸಮ್ಮಿಶ್ರಣ ಇದೆ. ನವರಂಗದಲ್ಲಿ 12 ಕಂಬಗಳಿವೆ ಇದನ್ನು ರಾಶಿ ಕಂಬಗಳೆಂದೆ ಕರೆಯುತ್ತಾರೆ ಒಂದೊಂದು ತಿಂಗಳಲ್ಲಿ ಒಂದೊಂದು ಕಂಬದ ಮೇಲೆ ಸೂರ್ಯ ಕಿರಣ ಬೀಳುವಂತೆ ಇವುಗಳನ್ನು ನಿರ್ಮಾಣ ಮಾಡಲಾಗಿದೆ.

[widget id=”custom_html-3″]

ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ್ದು ಗಂಧದ ಶಾರದೆ ದೇವಿಯ ವಿಗ್ರಹವನ್ನ ಆಗ ತಾಯಿ ಶಾರದೆ ನಿಂತಿದ್ದಳು 14 ನೆ ಶತಮಾನದಲ್ಲಿ ವಿದ್ಯಾರಣ್ಯರು ಚಿನ್ನದಿಂದ ಮಾಡಲ್ಪಟ್ಟ ಶಾರದಾ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸುತ್ತಾರೆ. ನವರಾತ್ರಿ ಒಂಬತ್ತು ದಿನಗಳ ಕಾಲ ಈ ದೇವಿಗೆ ವಿಶೇಷ ಪೂಜೆ ಅಲಂಕಾರಗಳು ಇಲ್ಲಿ ನಡೆಯುತ್ತವೆ. ಜಗನ್ಮಾತೆಯಾದ ಶಾರದಾಂಬೆಗೆ ಹಂಸವಾಹನ ವೃಷಭವಾಹನ ಮಯೂರವಾಹನ ಗರುಡವಾಹನ ಇಂದ್ರಾಣಿ ರಾಜರಾಜೇಶ್ವರಿ ಗಜಲಕ್ಷ್ಮಿ ಸಿಂಹವಾಹಿನಿ ಹೀಗೆ ದಿನಕ್ಕೊಂದು ಅಲಂಕಾರ ಇಲ್ಲಿ ಮಾಡಲಾಗುತ್ತದೆ.. ದಸರಾ ಸಂದರ್ಭದಲ್ಲಿ ಖಜಾನೆಯಲ್ಲಿರುವ ಎಲ್ಲ ನವರತ್ನ ಖಚಿತ ಆಭರಣಗಳನ್ನು ತಾಯಿ ಶಾರದೆಗೆ ತೊಡಿಸ ಲಾಗುತ್ತದೆ. ಮೈಸೂರು ಮಹಾರಾಜರು ಜಮಖಂಡಿಯ ದೊರೆಗಳು ಮೊದಲಾದವರು ತಾಯಿಗೆ ನೀಡಿರುವ ಆಭರಣಗಳನ್ನು ದೇವಿ ನವರಾತ್ರಿಯ ವೇಳೆ ಧರಿಸುತ್ತಾಳೆ. ಗಂಡುಬೇರುಂಡ ಪದಕ ಕಂಠೀಹಾರ ಪದಕ ಮಾಲೆ ಮೊದಲಾದ ಅತ್ಯಮೂಲ್ಯ ಆಭರಣಗಳನ್ನು ನೋಡುವ ಸುವರ್ಣ ಅವಕಾಶ ಸಾರ್ವಜನಿಕರಿಗೆ ಲಭಿಸುತ್ತದೆ.

[widget id=”custom_html-3″]

ಶಾರದ ಮಾತೆಯ ಶಿಲ್ಪ ಸುಂದರವಾಗಿದ್ದು ನಾಲ್ಕು ಭಾಗಗಳನ್ನು ಹೊಂದಿದೆ. ಮೇಲಿನ ಕೈಯಲ್ಲಿ ಅಕ್ಷರಮಾಲೆ ಹಾಗೂ ಮುಕ್ತ ಫಲಕ ಇದ್ದರೆ ಕೆಳಗಿನ ಕೈಯಲ್ಲಿ ಅಭಯ ಹಸ್ತವಿದ್ದು ಅದರಲ್ಲಿ ಪದ್ಮ ವಿದ್ದರ ಮತ್ತೊಂದು ಪುಸ್ತಕವಿದೆ. ಶಿವನು ಶಂಕರಾಚಾರ್ಯರಿಗೆ ಪೃತಕ್ಷನಾದಾಗ ಆಶೀರ್ವಾದ ರೂಪದಲ್ಲಿ ತನ್ನ ಸ್ಪಟಿಕ ಲಿಂಗವನ್ನು ನೀಡಿದ್ದನು ಎಂಬ ನಂಬಿಕೆ ಇದೆ.
ಈ ಸ್ಪಟಿಕದ ರಹಸ್ಯ ಇನ್ನು ಕೂಡ ಬಯಲಾಗಿಲ್ಲ ಈ ವಿಗ್ರಹವನ್ನು ಶೃಂಗೇರಿಯಲ್ಲಿ ಇಟ್ಟು ಶಂಕರರು ಪೂಜಿಸುತ್ತಿದ್ದರು. ಇಂದಿಗೂ ಕೂಡ ಈ ಚಂದ್ರಮೌಳೇಶ್ವರ ಲಿಂಗಕ್ಕೆ ಪ್ರತಿರಾತ್ರಿ ಎಂಟು ಮೂವತ್ತಕ್ಕೆ ತಪ್ಪದೇ ಪೂಜೆ ನಡೆಯುತ್ತದೆ. ಇಲ್ಲಿನ ಮುಖ್ಯ ದೇವಾಲಯವು ತಾಯಿ ಶಾರದಾಂಬೆಗೆ ಮೀಸಲಾಗಿದೆ. ಈಕೆ ಸರಸ್ವತಿಯ ಪ್ರತಿರೂಪವಾಗಿದ್ದು ಉಭಯ ಭಾರತಿ ಎಂದೆ ಪ್ರಸಿದ್ಧಳು
ಉಭಯ ಭಾರತಿಯನ್ನು ಪೂಜಿಸುವ ಮೂಲಕ ಜನರು ಬ್ರಹ್ಮ ವಿಷ್ಣು ಶಿವ ಮೂವರ ಆಶೀರ್ವಾದಕ್ಕೂ ಪಾತ್ರರಾಗುತ್ತಾರೆ ಎನ್ನುವ ನಂಬಿಕೆ ಇದೆ ಇದು ವಿದ್ಯಾದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನ ವಾಗಿದ್ದರಿಂದ ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ.

[widget id=”custom_html-3″]

ಎರಡರಿಂದ ಐದು ವರ್ಷದ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಓಂ ನಮಃ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ ವಿದ್ಯೆ ಚೆನ್ನಾಗಿ ನಡೆಯುತ್ತದೆ ಎಂಬ ನಂಬಿಕೆ ಇರುವುದರಿಂದ ಪೋಷಕರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಶೃಂಗೇರಿ ಶಾರದಾ ದರ್ಶನ ಪಡೆದರೆ ಸಕಲ ಸಂಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ಭಕ್ತರ ನಂಬಿಕೆಗೆ ಹಾಗೂ ನಿತ್ಯ ಸಾವಿರಾರು ಮಂದಿ ಇಲ್ಲಿ ಆಗಮಿಸುತ್ತಾರೆ. ಜೊತೆಗೆ ಅಲ್ಲೇ ಪಕ್ಕದಲ್ಲಿರುವ ತುಂಗಾ ನದಿ ಮತ್ತೊಂದು ವೈಶಿಷ್ಟ್ಯ ಇಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಜೊತೆಗೆ ನದಿಯಲ್ಲಿರುವ ಮೀನುಗಳನ್ನು ಕಣ್ತುಂಬಿಸಿಕೊಳ್ಳಲು ಜನಸಾಗರವೇ ಇಲ್ಲಿ ನೆರೆದಿರುತ್ತದೆ. ಸ್ನೇಹಿತರೆ ಒಂದುವೇಳೆ ಚಿಕ್ಕಮಗಳೂರು ಹೊರನಾಡು ಧರ್ಮಸ್ಥಳ ಕಳಸಕ್ಕೆ ಹೋದರೆ ದಯವಿಟ್ಟು ಶೃಂಗೇರಿಗೆ ಭೇಟಿ ಕೊಡಿ ಅಲ್ಲಿರುವ ಅದ್ಭುತ ಶಾರದಾಂಬೆಯ ಆ ಗರ್ಭಗುಡಿಯ ದರ್ಶನ ಪಡೆದು ಪುನೀತರಾಗಿ ಎಂದು ಕೂಡ ನಾವು ಹಾರೈಸುತ್ತೇವೆ..