Advertisements

ಕುರಿ ಕಾಯುತ್ತಿದ್ದ ಈ ಹುಡುಗಿ ಆ ದೇಶದ ಭಾಷೆ ಕಲಿತು ಅದೇ ದೇಶದ ಮಂತ್ರಿ ಕೂಡ ಆದ್ರು ! ಹೇಗೆ ಗೊತ್ತಾ ?

Inspire

ಸಾಧಿಸುವ ಛಲವಿದ್ದರೆ, ಬದುಕಿನಲ್ಲಿ ಏನೇ ಬಂದರೂ ಎದುರಿಸಿ ಗೆಲ್ಲುತ್ತೇನೆ ಎಂಬ ಧೃಡ ಮನಸ್ಸಿದ್ದರೆ ಯಾರೂ ಬೇಕಾದರೂ ದೊಡ್ಡ ಸ್ಥಾನಕ್ಕೆ ಹೋಗಬಹುದು ಎಂಬುದಕ್ಕೆ ಕುರಿ ಕಾಯುತ್ತಿದ್ದ ಈ ಯುವತಿ ನೈಜ ನಿದರ್ಶನವಾಗಿದ್ದಾರೆ. ವಲಸೆಗಾರರಾಗಿ ಬಂದು ತನ್ನ ಮಾತೃಭಾಷೆಯಲ್ಲದ ಆ ದೇಶದ ಭಾಷೆ ಕಲಿತು, ಅದೇ ದೇಶದ ಮಂತ್ರಿಯಾಗುವುದು ಎಂದರೆ ! ಇದೆಲ್ಲಾ ನಾವು ಅಂದುಕೊಂಡಷ್ಟು ಸುಲಭವಲ್ಲ. ಇದು ಯಾವುದೋ ಸಿನಿಮಾ ಕತೆಯಂತೂ ಅಲ್ಲ. ಯುವತಿಯೊಬ್ಬಳ ನಿಜ ಜೀವನದಲ್ಲಿ ನಡೆದ ಕತೆ. ಪ್ರತಿಯೊಬ್ಬರಿಗೂ ಸ್ಫೂರ್ತಿಯಂತಿದೆ ಆ ಯುವತಿಯ ಕತೆ.

Advertisements

ಹೌದು, ಆ ಯುವತಿಯ ಹೆಸರೇ ನಜತ್ ವಲ್ಲವುಡ್-ಬೆಲ್ಕಾಸೆಮ್. ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿಯಾಗಿದ್ದರು ಈ ಕುರಿ ಕಾಯುತ್ತಿದ್ದ ಹುಡುಗಿ. ಫ್ರಾನ್ಸ್ ದೇಶದ ಮೊದಲ ಮೊದಲ ಮಹಿಳಾ ಶಿಕ್ಷಣ ಮಂತ್ರಿ ಎಂಬ ಖ್ಯಾತಿ ಕೂಡ ಇವರಿಗಿದೆ. ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ ಬಾಲಕಿ ಚಿಕ್ಕ ವಯಸ್ಸಿನಲ್ಲೇ ತುಂಬಾ ಸಂಕಷ್ಟದ ಪರಿಸ್ಥಿತಿಗನ್ನ ಎದುರಿಸಿದ್ದಾರೆ. ತಂದೆ ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದವರು. ಹಾಗಾಗಿ ಕುಟುಂಬಕ್ಕೆ ತನ್ನಿಂದ ಏನಾದರೂ ಸಹಾಯವಾಗಬೇಕು ಎಂದು ಬಾಲಕಿ ನಜತ್ ಕುರಿ ಕಾಯುವ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದರು. ಇನ್ನು ಚಿಕ್ಕವಯಸ್ಸಿನಲ್ಲಿದ್ದಾಗಲೇ ನಜತ್ ಅವರ ಕುಟುಂಬ ಫ್ರಾನ್ಸ್ ದೇಶಕ್ಕೆ ವಲಸೆ ಬಂದರು.

ಭಾಷೆ ಗೊತ್ತಿಲ್ಲದ ದೇಶಕ್ಕೆ ಬಂದ ನಜತ್ ತನ್ನ ಸ್ವಂತ ಪರಿಶ್ರಮದಿಂದ ಫ್ರೆಂಚ್ ಭಾಷೆ ಕಲಿಯುತ್ತಾಳೆ. ಬಳಿಕ ಪ್ಯಾರಿಸ್ ಇನ್ಸ್ಟಿಟ್ಯೂಟ್ ಒಂದರಿಂದ ಪದವಿ ಪಡೆದುಕೊಳ್ಳುತ್ತಾಳೆ. ಬಳಿಕ ಫ್ರಾನ್ಸ್ ನ ಸೋಷಿಯಲಿಸ್ಟ್ ಪಕ್ಷಕ್ಕೆ ಸೇರ್ಪಡೆಗೊಂಡ ಈಕೆ ತನ್ನ ರಾಜಕೀಯ ಜೀವನ ಶುರು ಮಾಡುತ್ತಾಳೆ. ಹೀಗೆ ತನ್ನ ಸತತ ಪರಿಶ್ರಮದ ಫಲವಾಗಿ 2014ರಲ್ಲಿ ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿಯಾಗಿ ಆಯ್ಕೆಯಾಗಿ 2017ರವರೆಗೆ ಅಧಿಕಾರ ನಡೆಸುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಒಂದು ದೊಡ್ಡ ಸ್ಥಾನಕ್ಕೇರಿದ ನಜತ್ ವಲ್ಲವುಡ್ ಹೇಳೋದು ಹೀಗೆ..ನಾವು ಸುಮ್ಮನೆ ಪ್ರೇಕ್ಷಕರಾಗಿ ನೋಡುತ್ತಾ, ಭವಿಷ್ಯದ ಚಿಂತೆ ಮಾಡುವುದನ್ನ ಬಿಟ್ಟು ಅದನ್ನ ಬದಲಾಯಿಸುವ ಕೆಲಸ ಮಾಡಬೇಕು. ಹಾಗಾಗಿ ಯುವಜನತೆ ರಾಜಕೀಯದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.