ಕನ್ನಡದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ವಿನ್ನರ್ ಆಗಿರುವ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಹೋಗಿಬಂದ ಬಳಿಕ ಅವರ ಅಭಿಮಾನಿ ಬಳಗ ಹೆಚ್ಚಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಶೈನ್ ಕೆಲವೊಂದು ಫೋಟೋಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ಈಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಶೈನ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು ಹಲವಾರು ಪ್ರಶೆಗಳನ್ನ ಹುಟ್ಟುಹಾಕಿರುವ ಜೊತೆಗೆ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಕಾಫಿ ಶಾಪ್ ಒಂದರಲ್ಲಿ ಇಡಿದ ಈ ವಿಡಿಯೋ ಇದಾಗಿದ್ದು ಆ ವಿಡಿಯೋದಲ್ಲಿ ಶೈನ್ ಕುಳಿತಿರುವ ಟೇಬಲ್ ಮೇಲೆ ಪುಸ್ತಕದ ಜೊತೆಗೆ ಕಾಫಿ ಕಪ್ ಇರುವುದು ಕಾಣಬಹುದಾಗಿದೆ. ಇನ್ನು ಶೈನ್ ಅವರ ಮುಂದೆ ಹುಡುಗೋಯೊಬ್ಬರು ಕುಳಿತಿದ್ದು ಅವರು ಯಾರೆಂಬುದನ್ನ ವಿಡಿಯೋದಲ್ಲಿ ಮಾಯೇ ಮಾಚಲಾಗಿದೆ. ಇನ್ನು ವಿಡಿಯೋದಲ್ಲಿರುವಂತೆ ಆ ಹುಡುಗಿಯನ್ನೇ ನೋಡುತ್ತಾ ಮುಂದಕ್ಕೆ ಕೈ ಚಾಚುತ್ತಾರೆ ಶೈನ್ ಶೆಟ್ಟಿ. ಆಗ ಹುಡುಗಿ ಸಹ ಕೈ ಮುಂದಕ್ಕೆ ಕೊಟ್ಟಿದ್ದು ಆಕೆಯ ಕೈ ಹಿಡಿದ ಶೈನ್ ಆಕೆಯನ್ನೇ ನೋಡುತ್ತಿರುವ ಬ್ಯಾಕ್ಗ್ರೌಂಡ್ ನಲ್ಲಿ ರೊಮ್ಯಾಂಟಿಕ್ ಹಾಡು ಕೇಳಿಬರುತ್ತಿರುವ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಆ ವಿಡಿಯೋಗೆ ಹಳೆ ಪುಸ್ತಕ ಹೊಸ ನವಿಲುಗರಿ ಎಂದು ಕ್ಯಾಪ್ಷನ್ ಕೊಟ್ಟಿದ್ದು, ಏನೂ ಒಂದು ವಿಶೇಷ ಇದೆ ಕಾಯಿರಿ ಎಂದು ಬೇಡುಕೊಂಡಿದ್ದಾರೆ. ಇನ್ನು ಈ ವಿಡಿಯೋ ನೋಡಿರುವ ಅವರ ಅಭಿಮಾನಿಗಳು ಶೈನ್ ಇನ್ನೇನು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ, ಇನ್ನು ಅವರು ಮದುವೆಯಾಗುವ ಹುಡುಗಿ ಕೂಡ ಇರಬಹುದು ಎಂದು ಅವರಿಗೆನಿಸಿದ ಹಾಗೆ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಶೈನ್ ಶೆಟ್ಟಿ ತಮಗೆ ಮೊದಲೇ ಪರಿಚಯ ಇರುವ ಹುಡುಗಿಯನ್ನ ಮದುವೆಯಾಗುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯಗಳನ್ನ ತಿಳಿಸಿದ್ದಾರೆ. ಆದರೆ ಶೈನ್ ಮಾತ್ರ ಎಲ್ಲದರ ಬಗ್ಗೆ ರಹಸ್ಯವಾಗಿಟ್ಟಿದ್ದಾರೆ.
ಇನ್ನು ಅಭಿಮಾನಿಗಳಲ್ಲಂತೂ ಶೈನ್ ಶೆಟ್ಟಿ ಮದುವೆಯಾಗುತ್ತಿರುವ ಹುಡುಗಿ ಯಾರು ಎಂಬುದರ ಬಗ್ಗೆ ಕುತೂಹಲದಿಂದ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಮಧ್ಯೆ ಏನೋ ಇದೆ ಎಂಬ ಸುದ್ದಿಗಳು ವೈರಲ್ ಆಗಿದ್ದವು. ಹಾಗಾಗಿ ಶೈನ್ ಮದುವೆಯಾಗಿತ್ತಿರುವ ಹುಡುಗಿ ದೀಪಿಕಾ ದಾಸ್ ಇರಬಹುದಾ ಅಂತಲೂ ಕಾಮೆಂಟ್ ಗಳನ್ನ ಮಾಡಿದ್ದಾರೆ.