Advertisements

ಶಿವರಾಜ್ ಕುಮಾರ್ ಮನೆಯ ಗೃಹ ಪ್ರವೇಶದ ಅಪರೂಪದ ವಿಡಿಯೋ..

Cinema

ಡಾ. ರಾಜಕುಮಾರ್ ಅವರು ಬೆಂಗಳೂರಿಗೆ ಬಂದ ಮೇಲೆ ಆಗಿನ ಕಾಲದಲ್ಲಿ ಕಟ್ಟಿದ ಮನೆಯನ್ನು 11 ಲಕ್ಷಕ್ಕೆ ಕೊಂಡಿದ್ದರು. ಮುಂದಿನ ದಿನಗಳಲ್ಲಿ ರಾಜಕುಮಾರ್ ಅವರ ಕುಟುಂಬ ಬೆಳೆಯುತ್ತ ಹೋದಂತೆ ಮನೆ ಚಿಕ್ಕದಾಯಿತು.. ಶಿವಣ್ಣ ನ ಕುಟುಂಬ, ರಾಘಣ್ಣನ ಕುಟುಂಬ ಹಾಗೂ ಪುನೀತ್ ರಾಜಕುಮಾರ್ ಅವರ ವಿವಾಹವಾದ ಮೇಲೆ ಈ ಮನೆ ತುಂಬಾನೇ ಚಿಕ್ಕದಾಯಿತು. ಶಿವಣ್ಣ ತಮ್ಮ ಮಾವ ಬಹುಮಾನವಾಗಿ ಕೊಟ್ಟಿದ್ದ ಸೈಟ್ನಲ್ಲಿ ತನ್ನ ಅಭಿರುಚಿಗೆ ತಕ್ಕಂತೆ ಮನೆಯೊಂದನ್ನು ಕಟ್ಟಿಸಿಕೊಂಡರು. ಇದರ ಗೃಹಪ್ರವೇಶ ಹೇಗಿತ್ತು ಎಂದು ಮೆಲುಕು ಹಾಕೋಣ ಬನ್ನಿ. ರಾಜಕುಮಾರ್ ಕುಟುಂಬದಲ್ಲಿ ಮೊದಲಿಗೆ ಮನೆ ಕಟ್ಟಿಸಿ ಕೊಂಡವರು ಶಿವಣ್ಣ. ಇವರ ಮಾವ ಅಂದ್ರೆ ಪತ್ನಿ ಗೀತಾರ ತಂದೆ ಉಡುಗೊರೆಯಾಗಿ ಬೆಂಗಳೂರಿನ ಹೆಬ್ಬಾಳ ಯಲಹಂಕ ರಸ್ತೆಯಲ್ಲಿ ಒಂದು ಸೈಟ್ ನೀಡಿದ್ದರು.

[widget id=”custom_html-3″]

Advertisements

ಈ ಜಾಗದಲ್ಲಿ ಶಿವಣ್ಣ ತನ್ನ ಅಭಿರುಚಿಗೆ ತಕ್ಕಂತೆ ಬ್ರಹತ್ ಮನೆಯನ್ನು ನಿರ್ಮಿಸಿದರು. ಮನೆಗೆ ಸುಂದರ ಗ್ರಾನೈಟ್ಸ್ ಗಳನ್ನು ಬಳಸಿದ್ದಾರೆ. ಇವು ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಸುಸಜ್ಜಿತ, ಬ್ರಹತ್ ಮನೆಯನ್ನು ಮೊದಲು ನಿರ್ಮಿಸಿಕೊಂಡವರಲ್ಲಿ ಶಿವಣ್ಣನೇ ಮೊದಲು. ಇನ್ನೂ ಈ ಮನೆಯ ಗೃಹಪ್ರವೇಶ 2007ರಲ್ಲಿ ಅಕ್ಟೋಬರ್ 18ರಂದು ಅದ್ದೂರಿಯಾಗಿ ನೆರವೇರಿತು. ತಂದೆ ನಿ’ಧ’ನಾನಂತರ ಅದ್ದೂರಿಯಾಗಿ ನೆರವೇರಿದ ಸಂಭ್ರಮ ಎಂದರೆ ಶಿವಣ್ಣನ ಮನೆಯ ಗೃಹಪ್ರವೇಶ ವಾಗಿದೆ. ಈ ಸುಂದರ ಕ್ಷಣದಲ್ಲಿ ರಾಘಣ್ಣನ ಕುಟುಂಬ, ಪುನೀತ್ ರಾಜಕುಮಾರ್ ಕುಟುಂಬ ಹಾಗೂ ಸಹೋದರಿಯರು, ಪಾರ್ವತಮ್ಮ ಎಲ್ಲರೂ ಅತೀವ ಸಂತಸ ಸಡಗರ ದಿಂದ ಒಟ್ಟಾಗಿದ್ದ ಸಮಯವದು. ಸಂತೋಷದಿಂದ ಎಲ್ಲರೂ ಒಂದೆಡೆ ಸೇರಿದ ಈ ಕ್ಷಣಗಳು ಇದೀಗ ನೆನಪು ಮಾತ್ರ.

[widget id=”custom_html-3″]

ಗೀತಾ ಶಿವಣ್ಣ ಪೂಜೆ ಮಾಡಿದಾಗ ರಾಘಣ್ಣ ಭಕ್ತಿಯಿಂದ ಹಾಡಿದ ಮಧುರ ಕ್ಷಣಗಳನ್ನು ಶಿವಣ್ಣ ಈಗಲೂ ಮೆಲಕು ಹಾಕತಾರಂತೆ. ಈ ಸುಂದರ ಸವಿ ಗಳಿಗೆಯಲ್ಲಿ ಪುನೀತ್ ರಾಜಕುಮಾರ್ ಸ್ನೇಹಿತರೊಂದಿಗೆ ಕುಟುಂಬದೊಂದಿಗೆ ಅತಿ ಸಂತೋಷದಿಂದ ಮನೆಯನ್ನೆಲ್ಲ ಸುತ್ತು ಹೊಡೆದಿದ್ದರು. ಅಣ್ಣಾ ಹೊಸ ಮನೆ ಕಟ್ಟಿಸಿದಾಗ ಪುನೀತ್ ಹೆಚ್ಚು ಸಂತೋಷದಿಂದ ಓಡ್ದಿದ್ದರು. ಮಕ್ಕಳು ಮತ್ತು ಮೊಮ್ಮಕ್ಕಳ ಅಂದಿಗೆ ತಾಯಿ ಪಾರ್ವತಮ್ಮ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂಭ್ರಮಕ್ಕೆ ಆಪ್ತರು, ಕನ್ನಡದ ಸಿನಿ ತಾರೆಯರು, ಕಲಾವಿದರು, ಸಂಬಂಧಿಗಳು, ಗುರು ಹಿರಿಯರು ಭಾಗವಹಿಸಿ ಶುಭ ಕೋರಿದ್ದರು. ಈ ಸುಮಧುರ ಮಧುರ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ಕಾಣಬಹುದಾಗಿದೆ..

[widget id=”custom_html-3″]