Advertisements

ಶಿವಗಂಗೆಯ ಭಯಾನಕ ರಹಸ್ಯಗಳು ಬಗ್ಗೆ ನಿಮಗೆ ಗೊತ್ತಾ? ತಿಳಿದುಕೊಳ್ಳಿ..

Temples

ಪ್ರಿಯ ಓದುಗರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬೆಣ್ಣೆಯಿಂದ ತುಪ್ಪ ಬರುವುದು ಗೊತ್ತು. ಆದರೆ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ. ಹಾಗಾದ್ರೆ ಯಾವುದು ಈ ಶಿವಲಿಂಗ?ಎಲ್ಲಿದೆ ಪುಣ್ಯಕ್ಷೇತ್ರ? ಇದರ ರಹಸ್ಯ ಮತ್ತು ವಿಸ್ಮಯಗಳು ಏನು? ಈ ರೀತಿಯ ನಿಮ್ಮ ಹಲವಾರು ಕುತೂಹಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇದನ್ನು ಪೂರ್ಣವಾಗಿ ಓದಿ.
ಹಲವಾರು ವಿಸ್ಮಯ ಮತ್ತು ರಹಸ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ಈ ಪುಣ್ಯಕ್ಷೇತ್ರವೇ ಶಿವಗಂಗೆ ಬೆಟ್ಟ. ಈ ಬೆಟ್ಟ ಇರುವುದು ಒಂದೇ. ಆದ್ರೆ, ಇದು ಒಂದೊಂದು ದಿಕ್ಕಿನಲ್ಲಿ ನಿಂತು ನೋಡಿದರೆ ಬೇರೆ ಬೇರೆ ರೀತಿಯ ರೂಪದಲ್ಲಿ ಕಾಣುತ್ತದೆ.
ಹೌದು….ಓದುಗರೆ ಪೂರ್ವದಿಂದ ನಂದಿ ರೂಪದಲ್ಲಿ, ಪಶ್ಚಿಮದಿಂದ ಲಿಂಗದ ರೂಪದಲ್ಲಿ, ಉತ್ತರ ದಿಕ್ಕಿನಿಂದ ನೋಡಿದರೆ ಸರ್ಪ ರೂಪವಾಗಿ, ಹಾಗೆ ದಕ್ಷಿಣ ದಿಕ್ಕಿನಿಂದ ನೋಡಿದರೆ ಗಣೇಶನ ರೂಪವಾಗಿ ಈ ಬೆಟ್ಟ ಕಾಣುತ್ತದೆ. ಇಂತಹ ವಿಸ್ಮಯಗಳನ್ನು ಒಳಗೊಂಡ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ.

Advertisements

ಬೆಂಗಳೂರಿನಿಂದ ಒಂದು ಗಂಟೆಯ ಅವಧಿಯಲ್ಲಿ ಬೆಂಗಳೂರು ಟು ತುಮಕೂರು ಮಾರ್ಗದಲ್ಲಿ ಚಲಿಸಿದರೆ ಬೆಟ್ಟದ ದರ್ಶನವಾಗುತ್ತದೆ. ವಾಹನ ಸೌಲಭ್ಯ ಸಹ ಈ ಕ್ಷೇತ್ರಕ್ಕೆ ಲಭ್ಯವಿದೆ. ಇನ್ನು ಈ ಕ್ಷೇತ್ರಕ್ಕೆ ಪುರಾಣ ಇತಿಹಾಸ ಇದೆ. ಕಾಣದ ಎಂಬ ಋಷಿಯು ಈ ಪ್ರದೇಶದಲ್ಲಿ ನೀರಿಗಾಗಿ ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡಿದನು. ಆಗ ಶಿವ ಇವರ ಭಕ್ತಿಗೆ ಒಲಿದು ತನ್ನ ಜಡೆಯನ್ನು ಬಿಚ್ಚಿ ಗಂಗೆಯನ್ನು ಧರೆಗಿಳಿಸಿದನಂತೆ. ಅಂದಿನಿಂದ ಈ ಸ್ಥಳಕ್ಕೆ ಶಿವಗಂಗೆ ಎಂದು ಹೆಸರು ಬಂದಿದೆ ಎಂದು ಪುರಾಣ ಇತಿಹಾಸಗಳು ಹೇಳುತ್ತವೆ. ಹಾಗೆ ಇತಿಹಾಸದ ಪ್ರಕಾರ ಹೊಯ್ಸಳರ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾಂತಲಾ ಸಂತಾನ ಭಾಗ್ಯವಿಲ್ಲ ಎಂದು ಮನನೊಂದು ಈ ಬೆಟ್ಟದ ತುದಿಯಿಂದ ಹಾರಿ ಆತ್ಮಹತ್ಯಾ ಮಾಡಿಕೊಂಡಳು ಎನ್ನಲಾಗಿದೆ.ಈ ಘಟನೆಯ ಪ್ರತೀಕವಾಗಿ ಈ ಬೆಟ್ಟದ ತುದಿಯನ್ನು “ಶಾಂತಲಾ ಡ್ರಾಪ್” ಎಂದು ಕರೆಯಲಾಗುತ್ತಿದೆ.

ಮುಂದೆ ಇದನ್ನು ಕೆಂಪೇಗೌಡರಿಂದ ಈ ಬೆಟ್ಟ ಪುನರುಜ್ಜೀವನಗೊಂಡಿತು. ಆಗ ಕೇಪೇಗೌಡರು ಈ ಬೆಟ್ಟದಲ್ಲಿಯೇ ತಮ್ಮ ಸಂಪಾದನೆಯ ಅಪಾರ ಸಂಪತ್ತನ್ನು ಶೇಖರಿಸಿದ್ದರು ಎನ್ನಲಾಗಿದೆ. ಇನ್ನು ಈ ಬೆಟ್ಟದ ತುದಿಯಲ್ಲಿರುವ ಸೋಮೇಶ್ವರ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗವಿದೆ. ಶಿವಲಿಂಗಕ್ಕೆ ಪೂಜಾರಿಗಳು ತುಪ್ಪವನ್ನು ಹಚ್ಚಿ ಕೈಯಾಡಿಸಿದರೆ ಅದು ಬೆಣ್ಣೆಯಾಗುತ್ತದೆ. ಇದೇ ಬೆಣ್ಣೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಪೂಜಾರಿಗಳು ನೀಡುತ್ತಾರೆ ಇದಕ್ಕೆ ರೋಗ ನಿವಾರಿಸುವ ಶಕ್ತಿ ಇದೆ ಎಂದು ಇಲ್ಲಿಯ ಪೂಜಾರಿಗಳು ಹೇಳುತ್ತಾರೆ. ಹಾಗೆ ಈ ಬೆಟ್ಟದಲ್ಲಿರುವ ಸುರಂಗ ಮಾರ್ಗವು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ ತಲುಪುತ್ತದೆ ಅಂತೆ ಗಾಳಿ ಮತ್ತು ಬೆಳಕಿನ ಸೌಲಭ್ಯ ಇಲ್ಲದಿರುವುದರಿಂದ ಇಲ್ಲಿ ಹಾವು,ಬಾವಲಿಗಳು, ನಿಶಾಚರ ಗಳು ವಾಸವಾಗಿರುವ ಕಾರಣ ಇಲ್ಲಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಇದನ್ನು ದೂರಿನಿಂದ ನೋಡಬಹುದಷ್ಟೆ. ಬೆಟ್ಟದ ಇನ್ನೊಂದು ವಿಶೇಷವೇನೆಂದರೆ, ಬೆಟ್ಟದಲ್ಲಿ ಒಂದು ಒರಳು ಕಲ್ಲಿನ ಆಕಾರದಲ್ಲಿ ನೀರಿನ ಗುಂಡಿ ಇದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಮನಸ್ಸಿನ ಆಸೆಯನ್ನು ಹೊತ್ತು ಕೈ ಹಾಕುತ್ತಾರೆ. ಭಕ್ತರ ಕೈಗೆ ನೀರು ಸಿಕ್ಕರೆ ಅವರ ಆಸೆ ಪೂರೈಸುತ್ತದೆ. ಒಂದು ವೇಳೆ ನೀರು ಸಿಗದಿದ್ದರೆ ಅವರ ಆಸೆ ಈಡೇರುವುದಿಲ್ಲ ಎಂದು ಅರ್ಥ. ಇದು ಎಷ್ಟು ಭಕ್ತರಿಂದ ಈಗಲೂ ನಿಜವಾಗುತ್ತಲಿದೆ. ಇದು ಈ ಪುಣ್ಯಕ್ಷೇತ್ರದ 15 ಘಟನೆಯೂ ಹೌದು. ಇನ್ನೊಂದು ವಿಸ್ಮಯ ಎಂದರೆ ಗುಂಡಿಗೆ ಒಳಗೆ ವರ್ಷದ 12 ತಿಂಗಳು ಸಹ ನೀರು ಇರುತ್ತದೆ. ಆದ್ರೆ ಅವರ ಆಸೆ ಕನಸುಗಳು ಈಡೇರದಿದ್ದಾಗ ಭಕ್ತರು ಎಷ್ಟೆ ಆಳಕ್ಕೆ ಕೈ ಹಾಕಿದರು ನೀರು ನಿಲುಕುವುದಿಲ್ಲ. ಅದೇ ಆರು ವರ್ಷದ ಮಗು ಕೈ ಎದ್ದಿದರೆ ನೀರು ಮೇಲೆ ಸಿಗುತ್ತದೆ. ಇದೆ ಈ ಗುಂಡಿಯ ವಿಸ್ಮಯ. ಹಾಗೆ ಈ ಬೆಟ್ಟದ ತುದಿಯಲ್ಲಿ ದ್ವಾದಶ ಜ್ಯೋತಿರ್ಲಿಂಗ, ಶಿವ-ಪಾರ್ವತಿ ಮತ್ತು ನಂದಿ ವಿಗ್ರಹಗಳು ಇವೆ. ಬೆಟ್ಟ ಹತ್ತಲು ಕಟದರು ಭಕ್ತರ ಸಂಖ್ಯೆ ಅಪಾರವಾಗಿದೆ. ಹಲವಾರು ರಹಸ್ಯ ಕುತೂಹಲಗಳು ವಿಸ್ಮಯಗಳನ್ನು ಒಳಗೊಂಡ ಈ ಶಿವಗಂಗೆ ಬೆಟ್ಟಕ್ಕೆ ನೀವು ಒಮ್ಮೆ ಭೇಟಿ ಕೊಡಿ..