Advertisements

ವರ್ಷಕ್ಕೊಮ್ಮೆ ನದಿಯ ಮರಳಿನಲ್ಲಿ ಗೋಚರಿಸುವ ನಿಗೂಢ ಶಿವಲಿಂಗ! ಎಲ್ಲಿ ಗೊತ್ತಾ?

Temples

ಪ್ರಿಯ ಓದುಗರೆ ಈ ಲಿಂಗ ಇರುವುದು ಮರಳಿನಲ್ಲಿ. ಈ ಜಾಗದ ಪಾತಾಳದಲ್ಲಿ ಇನ್ನು ಅನೇಕ ಶಿವಲಿಂಗಗಳಿವೆ. ಇದರಲ್ಲಿ ಒಂದು ಮಾತ್ರ ಫೆಬ್ರುವರಿ ತಿಂಗಳಲ್ಲಿ ಮರಳಿನ ಮಧ್ಯೆ ಕಾಣಿಸಿಕೊಂಡು, ಭಕ್ತಿ ಮತ್ತು ಮುಕ್ತಿಯನ್ನು ಕಲ್ಪಿಸುತ್ತದೆ. ಹಾಗಾದರೆ ಈ ದೇವಸ್ಥಾನ ಇರುವುದು ಎಲ್ಲಿ? ಯಾವುದು ಈ ಶಿವಲಿಂಗ? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ ಇದನ್ನು ಕೊನೆಯವರೆಗೂ ಓದಿ. ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ತಮ್ಮ ಭಕ್ತಿಯನ್ನು ಅರ್ಪಿಸಿ, ಮುಕ್ತಿಯನ್ನು ಕಾಣುತ್ತಾರೆ. ಆದಷ್ಟಕ್ಕು ಈ ದೇವಸ್ಥಾನ ಯಾವುದು ಅಂತೀರಾ?

[widget id=”custom_html-3″]

ಅದು ಇಲ್ಲಿದೆ ಎಂದರೆ, ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದಲ್ಲಿದೆ. ಈ ದೇವಸ್ಥಾನದ ವಿಶೇಷತೆಗಳು ಹಾಗೂ ಪವಾಡಗಳು ಅನೇಕ. ಶ್ರೀ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಎಂದೇ ಪ್ರಖ್ಯಾತಿ ಪಡೆದ ಪುಣ್ಯಕ್ಷೇತ್ರವೇ ಉಪ್ಪಿನಂಗಡಿಯ ಸಹಸ್ರಲಿಂಗ ದೇವಸ್ಥಾನ. ಇದು ಪ್ರಾಚೀನ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇದು ನೇತ್ರಾವತಿ ಕುಮಾರಧಾರಾ ನದಿಗಳ ಸಂಗಮದಲ್ಲಿರುವ ಪುಣ್ಯಕ್ಷೇತ್ರವಾಗಿದೆ. ಉತ್ತರದಲ್ಲಿ ಕಾಶಿವಿಶ್ವನಾಥ, ಮಹಾಕಾಳಿ, ವೀರಭದ್ರ ಸನ್ನಿಧಿ ಇದ್ದು ಅದು ಉತ್ತರಕಾಶಿ ಎಂದು ಕರೆಸಿಕೊಂಡಿದೆ. ಹಾಗೆ ದಕ್ಷಿಣ ಭಾಗದಲ್ಲಿರುವ ಸಹಸ್ರಲಿಂಗೇಶ್ವರ, ಮಹಾಕಾಳಿ, ಕಾಲಭೈರವನ ಸನ್ನಿಧಿ ಇದ್ದು ಇದನ್ನು ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ. ನೇತ್ರಾವತಿ, ಕುಮಾರಧಾರ ಮತ್ತು ಗುಪ್ತಗಾಮಿನಿಯಾಗಿ ಹರಿಯುವ ಸರಸ್ವತಿ ನದಿಗಳ ಸಂಗಮದಿಂದ ಇದನ್ನು “ಗಯಪ್ರದಾ” ಎಂದು ಕರೆಯುತ್ತಾರೆ. ಎರಡು ಕ್ಷೇತ್ರಗಳು ಕೂಡ ಅಷ್ಟೇ ಸಮಾನ ಪ್ರತೀತಿಯನ್ನು ಹೊಂದಿದೆ ಹಾಗೆ ನದಿಯ ಆಳದಲ್ಲಿ ಸಹಸ್ರಾರು ಲಿಂಗಗಳು ಇವೆ ಎಂದು ನಂಬಲಾಗಿದೆ.

[widget id=”custom_html-3″]

ಇದರಲ್ಲಿ ಒಂದು ಲಿಂಗ ಫೆಬ್ರವರಿಯಲ್ಲಿ ಮಾತ್ರ ಗೋಚರಿಸುತ್ತಿದ್ದು, ಭಕ್ತಿ ಮತ್ತು ಮುಕ್ತಿಯನ್ನು ಕಾಣಿಸುತ್ತದೆ. ಅಪಾರ ಕರ್ಮಾಧಿಗಳಿಗೆ ಈ ಪುಣ್ಯಕ್ಷೇತ್ರ ಸಾಕ್ಷಿಯಾಗಿದೆ. ಕರಾವಳಿಯ ನದಿಯ ದಡದಲ್ಲಿರುವ ಕಾಳಿದೇವಿ ಇಲ್ಲಿಯ ಜನರಿಂದ ಆರಾಧಿಸಿ ಕೊಳ್ಳುತ್ತಿದ್ದಾಳೆ. ಹಾಗೆ ಕಾಲಭೈರವ ದೇವಸ್ಥಾನವನ್ನು ಸಹ ಇಲ್ಲಿ ಕಾಣಬಹುದು. ಸಾಂಕ್ರಾಮಿಕ ರೋಗ ನಿವಾರಣೆಗಾಗಿ “ಮುಚ್ಚಿನೆಮಾ” ಎಂಬ ವಿಶೇಷ ಪೂಜೆಯನ್ನು ಕಾಳಿಕಾ ದೇವಿಗೆ ಅರ್ಪಿಸುವುದು ಇಲ್ಲಿ ಜನರ ರೂಢಿ. ಬಾಲಿವುಡ್ ಬೆಡಗಿ, ವಿಶ್ವಸುಂದರಿ ಐಶ್ವರ್ಯ ರೈ ಅವರ ಮನೆಯ ದೇವರು ಕೂಡ ಇದೇ ಆಗಿದೆ. ಆದ್ದರಿಂದ ಪ್ರತಿ ವರ್ಷ ಫೆಬ್ರವರಿಯಲ್ಲಿ ಇವರು ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ. ನೀವು ಮಂಗಳೂರಿಗೆ ಧರ್ಮಸ್ಥಳ ಹೋದರೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದರ್ಶನ ಪಡೆಯುವುದನ್ನು ಮರೆಯಬೇಡಿ..

[widget id=”custom_html-3″]