Advertisements

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಸಂಗತಿಗಳು..

Cinema

ನಮಸ್ತೆ ಸ್ನೇಹಿತರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜುಲೈ 12, 1962 ರಲ್ಲಿ ಚೆನ್ನೈನಲ್ಲಿ ಜನಿಸಿದರು.. ಡಾ. ರಾಜ್ ಕುಮಾರ್ ಅವರು ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗ ನಲ್ಲೂರು ಪುಟ್ಟಸ್ವಾಮಿ ಜ್ಞಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ‌ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಡಿಸಿಕೊಂಡ ಶಿವರಾಜ್ ಕುಮಾರ್ ಅವರು ಕ್ರೀಡಾ ಚಟುವಟಿಕೆಗಳಲ್ಲಿಯೂ ಕೂಡ ಹೆಸರು ಮಾಡಿದ್ದಾರೆ.. ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ ಕುಮಾರ್ ಅವರು 1986 ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಇದಾದ ನಂತರದಲ್ಲಿ ರಥಸಪ್ತಮಿ ಹಾಗು ಮನ ಮೆಚ್ಚಿದ ಹುಡುಗಿ ಚಿತ್ರಗಳು ಕೂಡ ಶತದಿನೋತ್ಸವ ಕಂಡವು..

Advertisements

ತಾವು ನಟಿಸಿದ ಮೂರು ಚಿತ್ರಗಳು ಕೂಡ ಸತತವಾಗಿ ಶತದಿನೋತ್ಸವ ಕಂಡ ಕಾರಣ ಶಿವರಾಜ್ ಕುಮಾರ್ ಅವರು ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು. ಇನ್ನೂ ಈ ಚಿತ್ರಗಳ ನಂತರ ರಣರಂಗ ಚಿತ್ರ ಯಶಸ್ಸನ್ನು ಕಂಡಿದ್ದು ಬಿಟ್ಟರೆ ಆ ಸಮಯದಲ್ಲಿ ಬೇರೆ ಯಾವ ಚಿತ್ರಗಳು ಕೂಡ ಶಿವಣ್ಣನಿಗೆ ಅಷ್ಟೊಂದು ಯಶಸ್ಸನ್ನು ತಂದುಕೊಡಲಿಲ್ಲ.. ನಂತರ ಇವರಿಗೆ ನಿಜಕ್ಕೂ ಬ್ರೇಕ್ ಕೊಟ್ಟ ಚಿತ್ರ ಓಂ. ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಬಂದ ಓಂ ಚಿತ್ರ ಭೂಗತ ಲೋಕದ ಕತೆಯನ್ನು ಆಧರಿಸಿದ ಚಿತ್ರವಾಗಿತ್ತು.. 1995 ರಲ್ಲಿ ಈ ಚಿತ್ರ ತೆರೆಕಂಡಿತ್ತು.. ಇದಾದ ನಂತರದಲ್ಲಿ ಜನುಮದ ಜೋಡಿ ನಮ್ಮೂರ ಮಂದಾರ ಹೂವೆ ಎಕೆಪಾರ್ಟಿ ಸೆವೆನ್..

ಜೋಗಿ ಮುಂತಾದ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬರ್ಜರಿ ಯಶಸ್ಸನ್ನು ಕಂಡವು. ಇನ್ನೂ ಶಿವಣ್ಣ ನೂರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.. ಇನ್ನೂ ಶಿವಣ್ಣ ಅವರು ಆಸೆಗೊಬ್ಬ ಮೀಸೆಗೊಬ್ಬ, ಅಂಡಮಾನ್, ಸಾರ್ವಭೌಮ ಇನ್ನೂ ಮುಂತಾದ ಕೆಲವು ಚಿತ್ರಗಳಲ್ಲಿ ಗಾಯನ ಕೂಡ ಮಾಡಿದ್ದಾರೆ. ಇನ್ನೂ ಶಿವಣ್ಣ ಅವರಿಗೆ ಓಂ, ಹೃದಯ ಹೃದಯ, ಚಿಗುರಿದ ಕನಸು, ಜೋಗಿ ಚಿತ್ರಗಳಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ದೊರಕಿದೆ.. ಇದಲ್ಲದೇ ಆರ್ಯಭಟ ಪ್ರಶಸ್ತಿ, ಪಿಲಂ ಪೇರ್ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.