Advertisements

ಹೋಳಿಯನ್ನು ಸಂಭ್ರಮದಿಂದ ಆಚರಿಸಿದ ಕರುನಾಡ ಚಕ್ರವರ್ತಿ.. ಯಾರೆಲ್ಲಾ ಭಾಗಿಯಾಗಿದ್ದರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಹಿಂದೂ ಸಂಪ್ರದಾಯದಲ್ಲಿ ಬಹುತೇಕ ಎಲ್ಲಾ ಹಬ್ಬಗಳು ಕೂಡ ಪೌರಾಣಿಕ ಹಿನ್ನೆಲೆಯಿಂದ ಕೂಡಿವೆ. ಅಂತಹ ಹಬ್ಬಗಳಲ್ಲಿ ಹೋಳಿ ಹಬ್ಬವೂ ಕೂಡ ಒಂದು ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ಆಚರಿಸುವ ಹಲವಾರು ಹಬ್ಬಗಳು ವೈಜ್ಞಾನಿಕತೆಯಿಂದ ಕೂಡಿದ್ದು ನಮ್ಮ ಐಕ್ಯತೆಯ ಸಂಕೇತವಾಗಿವೆ.. ಇನ್ನೂ ಹೋಳಿ ಹಬ್ಬ ಕೂಡ ಐಕ್ಯತೆಯ ಸಂಕೇತವಾಗಿದ್ದು ಬಣ್ಣಗಳ ಹಬ್ಬ ಎಂದೇ ಪ್ರಸಿಧ್ಧವಾಗಿದೆ. ಪ್ರತಿವರ್ಷ ಯುಗಾದಿ ಹಬ್ಬಕ್ಕೆ ಮುಂಚೆ ಬರುವ ಈ ಹೋಳಿ ಹಬ್ಬ ಸಂತಸ ಸ್ಪೂರ್ತಿ ತರುವ ಹಬ್ಬವಾಗಿದೆ.. ತಮ್ಮ ಸ್ನೇಹಿತರಿಗೆ ಬಂದುಗಳಿಗೆ ಆತ್ಮೀಯರಿಗೆ ಪರಸ್ಪರ ಬಣ್ಣ ಅಚ್ಚಿಕೊಳ್ಳುವ ಮೂಲಕ ಈ ಹಬ್ಬವನ್ನು ಭಾರತೀಯರು ಅದ್ದೂರಿಯಾಗಿ ಆಚರಿಸುತ್ತಾರೆ.

Advertisements

ಇನ್ನೂ ಸೆಲೆಬ್ರಿಟಿಗಳು ಕೂಡ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.. ಎಲ್ಲರಿಗೂ ತಿಳಿದಂತೆ, ಕಳೆದ ವರ್ಷ ಕ’ರೋನ ಕಾರಣದಿಂದ ಹೋಳಿ ಹಬ್ಬಕ್ಕೆ ಸಂಪೂರ್ಣವಾಗಿ ಬ್ರೇಕ್ ಬಿದ್ದಿತ್ತು. ಆದರೆ ಈ ವರ್ಷ ಪ್ರತಿ ವರ್ಷದಂತೆ ಹೆಚ್ಚು ಆಡಂಬರದಿಂದ ಆಚರಿಸದೇ ಇದ್ದರೂ ಸರಳವಾಗಿ ಸಾಂಪ್ರದಾಯಕವಾಗಿ ಎಲ್ಲರೂ ಬಣ್ಣದ ಹಬ್ಬವನ್ನು ಆಚರಿಸಿದ್ದಾರೆ.. ಇನ್ನೂ ಸಿನಿಮಾ ರಂಗದ ಕೆಲವು ಸ್ಟಾರ್ ಗಳು ಕೂಡ ಹೋಳಿ ಹಬ್ಬವನ್ನು ಅದ್ದೂರಿಯಾಗಿ ತಮ್ಮ ಮನೆಗಳಲ್ಲಿ ಆಚರಿಸಿಕೊಂಡಿದ್ದಾರೆ.

ಅದರಂತೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ತಮ್ಮ ಕುಟುಂಬದವರ ಜೊತೆ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.. ತಮ್ಮ ಪತ್ನಿ ಗೀತಾ ಹಾಗೂ ತಮ್ಮ ಅಳಿಯ ಇಬ್ಬರು ಪುತ್ರಿಯರ ಜೊತೆ ಶಿವಣ್ಣ ಪರಸ್ಪರ ಬಣ್ಣ ಎರಚಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಇನ್ನೂ ಶಿವರಾಜ್ ಕುಮಾರ್ ಅವರು ತಮ್ಮ ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡಿರುವ ಪೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ..