Advertisements

ಹಸಿವು ತಾಳಲಾರದೆ ಆಹಾರದ ಕಿಟ್ ಗಳನ್ನ ಲೂಟಿ ಮಾಡಿದ ವಲಸೆ ಕಾರ್ಮಿಕರು ! ಇಲ್ಲಿದೆ ಶಾಕಿಂಗ್ ವಿಡಿಯೋ

News

ಕೊರೋನಾ ಹಿನ್ನಲೆಯಲ್ಲ ಲಾಕ್ ಡೌನ್ ಆಗಿರುವ ಕಾರಣ, ಕೆಲಸವಿಲ್ಲದೇ ವಲಸೆ ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ತಮ್ಮ ಊರುಗಳಿಗೆ ಹೋಗದೆ ಇದ್ದರೆ ಒಂದೊತ್ತಿನ ಊಟಕ್ಕೂ ಸಂಕಷ್ಟ ಎದುರಾಗಲಿದ್ದು, ವಲಸೆ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಮ್ಮ ತಮ್ಮ ಊರುಗಳಿಗೆ ಹೋಗಲು ಮುಂದಾಗಿರುವ ವಲಸೆ ಕಾರ್ಮಿಕರಿಗೆ ಸರ್ಕಾರ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿದೆ.

Advertisements

ಇನ್ನು ಸಾವಿರಾರು ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಶ್ರಮಿಕ್ ರೈಲಿನಲ್ಲಿ ತೆರಳುತ್ತಿದ್ದು, ಮುಂಬೈನ ಕಲ್ಯಾಣ್ ನಿಂದ ಹೊರಟಿದ್ದ ಶ್ರಮಿಕ್ ರೈಲಿನ ಪ್ರಯಾಣಿಕರಿಗೆ ಆಹಾರ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದರೂ ಅದಕ್ಕೆ ಬೇಕಾದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಶ್ರಮಿಕ್ ರೈಲಿನ ಪ್ರಯಾಣಿಕರು ಹೊಟ್ಟೆಗೆ ಆಹಾರವಿಲ್ಲದೆ ಹಸಿವಿನಿಂದ ಕೆಂಗೆಟ್ಟು ಹೋಗಿದ್ದರು.

ಇನ್ನು ಶ್ರಮಿಕ್ ರೈಲಿ ಸೋಮವಾರ ಮಧ್ಯಪ್ರದೇಶದ ಇಟಾರ್ಸಿ ರೈಲು ನಿಲ್ದಾಣಕ್ಕೆ ತಲುಪಿದ್ದಂತೆ, ಅಲ್ಲಿಯ ಪ್ಲಾಟ್ ಫಾರ್ಮ್ ಮೇಲೆ ತಳ್ಳುಗಾಡಿಗಳಲ್ಲಿ ಇರಿಸಿದ್ದ ಆಹಾರ ಪದಾರ್ಥಗಳನ್ನ ಕಂಡ ವಲಸೆ ಕಾರ್ಮಿಕರು ತಕ್ಷಣವೇ ಮುಗಿಬಿದ್ದು, ತೆಗೆದುಕೊಂಡಿದ್ದಾರೆ. ಜೊತೆಗೆ ಆಹಾರ ಪದಾರ್ಥಗಳನ್ನ ತೆಗೆದುಕೊಳ್ಳುವ ವೇಳೆ ತಾ ಮುಂದು ನಾ ಮುಂದು ಎಂಬಂತೆ ಕಿತ್ತಾಡಿಕೊಳ್ಳುವ ದೃಶ್ಯಗಳು ಈ ವಿಡಿಯೋದಲ್ಲಿ ಕಂಡುಬಂದಿದ್ದು ಇದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.