Advertisements

ಶೃಂಗೇರಿ ದೇವಸ್ಥಾನ ಹುಟ್ಟಲು ಕಾರಣವೇನು ಗೊತ್ತಾ? ಇಲ್ಲಿರುವ ಹಾವು ಮತ್ತು ಗರ್ಬಿಣಿ ಕಪ್ಪೆ ನಡುವೇ ನಡೆದ ನಿಗೂಢ ರಹಸ್ಯ..

Temples

ಸುತ್ತಲೂ ಹಸಿರಿನ ಹೊದಿಕೆ, ಸನಿಹದಲ್ಲಿಯೇ ಹರಿಯುತ್ತಿರುವ ತುಂಗೆ, ಹರಿದು ಬರುವ ಸಾವಿರ ಭಕ್ತರ ದಂಡು ಅವುಗಳೆಲ್ಲವುಗಳ ಮಧ್ಯೆ ನಗುವ ಬೀರುತ ಕುಳಿತಿರುವ ಬ್ರಹ್ಮ ಸ್ವರೂಪಿ ಶೃಂಗೇರಿ ಶಾರದಾಂಬೆ. ವ್ಹಾ.. ಆ ದೃಶ್ಯಗಳೇ ಸುಂದರ ಮನಮೋಹಕ, ರಮಣೀಯ. ಪ್ರಕೃತಿ ಸೌಂದರ್ಯದ ಮಧ್ಯೆಯೇ ಇರುವ ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆಯ ದೇವಾಲಯಕ್ಕೆ ಶೃಂಗೇರಿ ಎಂಬ ಹೆಸರು ಯಾಕೆ ಬಂತು ಗೊತ್ತಾ? ಅಷ್ಟಕ್ಕೂ ಶೃಂಗೇರಿಯಲ್ಲಿಯೇ ಯಾಕೆ ಶಾರದೆ ನೆಲೆಸಿದ್ದಾಳೆ.. ಇವುಗಳೆಲ್ಲವುಗಳನ್ನು ಹೇಳ್ತೀವಿ.. ಶೃಂಗೇರಿ ಶಾರದೆಯ ದೇವಾಲಯವನ್ನು ಪ್ರತಿಷ್ಟಾಪಿಸಿದವರು ಶ್ರೀ ಆದಿ ಶಂಕರಾಚಾರ್ಯರು. ದೇಶ ಸಂಚಾರ ಮಾಡ್ತಿದ್ದ ಆದಿ ಶಂಕರರು..

[widget id=”custom_html-3″]

Advertisements

ಶೃಂಗೇರಿಯ ತುಂಗೆಯ ತಟದಲ್ಲಿ ಹೋಗುವಾಗ ಒಂದು ಅಚ್ಚರಿಯಾದ ಸಂಗತಿಯನ್ನು ಕಣ್ಣಾರೆಕಂಡು ದಿ’ಗ್ಬ್ರಾಂ’ತರಾಗ್ತಾರಂತೆ. ನದಿ ತಟದಲ್ಲಿ ನಡೆದುಕೊಂಡು ಹೋಗುವಾಗ ಒಬ್ಬರಿಗೊಬ್ಬರನ್ನು ಕಂಡರೇ ಆಗದ ಹಾವು ಕಪ್ಪೆಯ ದೃಶ್ಯವನ್ನು ಕಾಣ್ತಾರಂತೆ. ಪ್ರಸವ ವೇದನೆಯಲ್ಲಿ ಬಳಲುತ್ತಿದ್ದ ಕಪ್ಪೆಗೆ ಹಾವೊಂದು ಹೆಡೆ ಬಿ’ಚ್ಚಿ ರಕ್ಷಣೆ ನೀಡುತ್ತಿತ್ತಂತೆ. ಎಂತಹ ಅಧ್ಬುತ ದೃಶ್ಯ ನೋಡಿ. ಆ’ಶ್ಚರ್ಯ ಆಗುತ್ತಲ್ವಾ? ಬದ್ದ ವೈ’ರಿ’ಗಳಾದ ಕಪ್ಪೆ ಹಾವು ಹೆಂಗಪ್ಪಾ ಈ ರೀತಿಯ ದೃಶ್ಯದಲ್ಲಿ ಆದಿಶಂಕರರ ಕಣ್ಣಿಗೆ ಬಿತ್ತು ಅಂತ. ಅದಕ್ಕೆ ಶಂಕರಾಚಾರ್ಯರು ನಿರ್ಧರಿಸ್ತಾರೆ, ಇದು ಸಾಮಾನ್ಯವಾದ ಸ್ಥಳವಲ್ಲ, ಯಾವುದೋ ಪುಣ್ಯಕ್ಷೇತ್ರವೇ ಇದು ಅಂತ. ಈ ಹಿನ್ನಲೆ ಇಲ್ಲಿಯೇ ಶಾರದೆಯನ್ನು ಆದಿ ಶಂಕರರು ಪ್ರತಿಷ್ಟಾಪನೆ ಮಾಡುತ್ತಾರೆ..

[widget id=”custom_html-3″]

ಇಂದಿಗೂ ಸಹ ತುಂಗೆಯ ತಟದಲ್ಲಿ ಹಾವು ಮತ್ತು ಕಪ್ಪೆಯ ಸ್ನೇಹಮಯವಾದ ಶಿಲ್ಪವನ್ನು ಕಾಣಬಹುದು. ಇನ್ನು ಶೃಂಗೇರಿಗೆ ಶೃಂಗೇರಿ ಎಂಬ ಹೆಸರು ಹೇಗೆ ಬಂತು ಅಂತ ನೋಡೋದಾದ್ರೆ, ಹಿಂದೆಲ್ಲ ಶೃಂಗೇರಿಯಲ್ಲಿ ಋಷ್ಯ ಶೃಂ’ಗರು ವಾಸಿಸುತ್ತಿದ್ದರಂತೆ, ಅವರೆಲ್ಲ ಇಲ್ಲಿಯೇ ಬೀಡುಬಿಟ್ಟು ತಪಸ್ಸು ಮಾಡುತ್ತಿದ್ದರಂತೆ, ಶೃಂ’ಗ ಎಂದರೆ ಕೊಂ’ಬು ಎಂದರ್ಥ, ಋಷ್ಯ ಶೃಂ’ಗರಿಗೆಲ್ಲ ಕೊಂ”ಬಿದ್ದ ಕಾರಣ ಈ ಸ್ಥಳವನ್ನು ಶೃಂಗೇರಿ ಅಂತ ಕರೆಯುತ್ತಾರೆ ಎಂದು ಕೆಲವು ಪುರಾಣ ಹೇಳುತ್ತೆ.

[widget id=”custom_html-3″]

ಇನ್ನು ಕೆಲವು ಪುರಾಣ ಹೇಳುವ ಪ್ರಕಾರ, ಶೃಂಗೇರಿಯಲ್ಲಿರುವ ಗಿರಿಗಳು ಗೋವಿನ ಕೋಡನ್ನು ಹೋಲುವ ಕಾರಣ ಈ ಸ್ಥಳವನ್ನು ಶೃಂಗೇರಿ ಅಂತ ಕರೆಯುತ್ತಾರೆ ಅಂತ ಒಂದಷ್ಟು ವರದಿಗಳು ಹೇಳುತ್ತವೆ, ವಿಚಾರ ಏನೇಯಿರಲಿ ಶೃಂಗೇರಿಯನ್ನು ನೋಡಲು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಕೇರಳ, ತಮಿಳುನಾಡು, ಹಾಗೂ ಬೇರೆ ಬೇರೆ ಹೊರ ರಾಜ್ಯಗಳಿಂದ ಸಹ ಬರುತ್ತಾರೆ. ದೇವಿಯ ಸನ್ನಿಧಿಗೆ ಬಂದು ಓಂ ಅಂತ ಮಗುವಿನ ಕೈಯಿಂದ ಬರೆಸಿಕೊಂಡು ಸಹ ಹೋಗ್ತಾರೆ. ಐತಿಹಾಸಿಕ ಹಿನ್ನಲೆಯುಳ್ಳ ಭಕ್ತರು ಅತ್ಯಂತ ನಂಬುವಂತಹ ದೇವತೆಯೇ ಶೃಂಗೇರಿ ಶಾರದಾಂಬೆ..