Advertisements

ರಾಜ ರಾಣಿಯರು ಗುಪ್ತವಾಗಿ ಸ್ನಾನಮಾಡುತ್ತಿದ್ದ ಶೃಂಗಾರ ಬಾವಿಯ ರಹಸ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ! ನೋಡಿ..

Kannada Mahiti

ಹಿಂದೆ ಪುರಾತನ ಕಾಲದಲ್ಲಿ ಭಾವಗಳಿಗೂ ಒಂದು ಇತಿಹಾಸವಿತ್ತು.ಪ್ರತಿ ಮನೆಯ ಹಿತ್ತಲಲ್ಲಿ ಒಂದು ಬಾವಿ ಇರುತ್ತಿತ್ತು. ಹಾಗೆ ಅರಮನೆಯಲ್ಲಿಯು ರಾಣಿಯರ ಸ್ನಾನಕ್ಕೆ ಒಂದು ವಿಶೇಷವಾದ ಬಾವಿಯನ್ನು ಕಟ್ಟಿಸುತ್ತಿದ್ದರು. ಇದರ ಕಟ್ಟಡವು ನೋಡಲು ಸುಂದರವಾಗಿರುತ್ತಿದ್ದವು.ಈ ಶೃಂಗಾರ ಬಾವಿಗಳು ಅನೇಕ ರಹಸ್ಯವನ್ನು ಒಳಗೊಂಡಿವೆ. ಅವೆನೆಂದು ನಾವು ನಿಮಗೆ ತಿಳಿಸುತ್ತೇವೆ.
ಇದೊಂದು ಸುಂದರ ಕೆತ್ತನೆ ವಿಶೇಷ ವಾಸ್ತುಶಿಲ್ಪದ ಮೂರ್ತಿಗಳಿಂದ ರಚಿಸಲ್ಪಟ್ಟ ಬಾವಿ. ಇದನ್ನು ಶೃಂಗಾರ ಬಾವಿ ಎಂದೇ ಕರೆಯುತ್ತಾರೆ. ಇದು ತೆಲಂಗಾಣ ರಾಜ್ಯದ ವರಂಗಲ್ ನಲ್ಲಿದೆ. ಇದನ್ನು ಅಂದಿನ ಕಾಕತಿಯ ಮಹಾರಾಜರು ಕಟ್ಟಿಸಿದ್ದಾರೆ. ಈ ಬಾವಿ ಆದೇಷ್ಟೋ ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇದು ಮೂರು ಅಂತಸ್ತಿನ ಕಟ್ಟದಗಳಿಂದ ಕೂಡಿದೆ. ಇದನ್ನು ನೋಡಲು ಹೋಗುತ್ತಿದ್ದರೆ ಟೈಮ ಮಶೀನ್ ನಲ್ಲಿ ತೆರಳುತ್ತಿದ್ದ ಅನುಭವವಾಗುತ್ತದೆ.

Advertisements

ಈ ಬಾವಿಯಲ್ಲಿ ಕಾಕತಿಯ ರಾಣಿ ರುದ್ರಮ್ಮದೇವಿ ಮತ್ತು ಮಹಾರಾಣಿಯರು ಸ್ನಾನ ಮಾಡುತ್ತಿದ್ದರು ಎನ್ನಲಾಗಿದೆ. ಇದರ ರಹಸ್ಯವೆಂದರೆ, ಇ ಶೃಂಗಾರ ಬಾವಿಯಿಂದ ಸಾವಿರ ಸ್ತಂಭಗಳ ಗುಡಿಗೆ ಹೋಗಲು ಸುರಂಗಮಾರ್ಗ ವಿತ್ತು. ಕಾಕತೀಯ ಮಹಾರಾಜರು ಸು. 360 ಬಾವಿಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಮೂರು ಅಂತಸ್ತಿನ ಶೃಂಗಾರ ಬಾವಿಗಳು ವಿಶೇಷವಾಗಿದ್ದವು. ಈ ಬಾವಿಯ ನೀರನ್ನು ಪರಶಿವನ ಅಭಿಷೇಕಕ್ಕೆ ಮಾತ್ರ ಬಳಸಲಾಗುತ್ತಿತ್ತು. ಇದರಲ್ಲಿ ಸ್ನಾನ ಮಾಡುವ ಹಾಗೆ ಇರಲಿಲ್ಲ. ರಾಜ ರಾಣಿಯರು ಮಾತ್ರ ತಮ್ಮ ಶೃಂಗಾರ ಬಾವಿಯಲ್ಲಿ ಮುಳುಗಿ ಸ್ನಾನ ಮಾಡಿ ಸಾವಿರ ಸ್ತಂಭ ದೇವಸ್ಥಾನಕ್ಕೆ ಸುರಂಗದ ಮೂಲಕ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.


ಈ ಬಾವಿಯ ಸುತ್ತಲೂ ಸುಂದರ ನರ್ತಕಿಯರ ನಾಟ್ಯ ಬಂಗಿಗಳ ಮೂರ್ತಿಗಳು ನೋಡುಗರ ಗಮನ ಸೆಳೆಯುತ್ತವೆ. ಒಂದು ವೇಳೆ ಶತ್ರುಗಳು ಮೊದಲು ಮಹಡಿಗೆ ಬಂದಿದ್ದರೆ, ಅದು ಮೊದಲ ಮಹಡಿಯಲ್ಲಿದ್ದ ರಾಜ-ರಾಣಿಗೆ ತಿಳಿಯುತ್ತಿತ್ತು. ಅವರ ಪ್ರತಿಬಿಂಬ ನೀರಿನಲ್ಲಿ ಬೀಳುತ್ತಿದ್ದರಿಂದ ಬೇಗನೆ ಶತ್ರುವಿನ ಸುಳಿವು ಸಿಗುತ್ತಿತ್ತು. ಅವರ ಹೆಜ್ಜೆಗುರುತಿನ ಸದ್ದು ನೀರಿನ ಅಲೆಗಳಿಂದ ತಿಳಿಯುತ್ತಿತ್ತು. ಶೃಂಗಾರ ಬಾವಿಗಳಲ್ಲಿ 9 ಅಂತಸ್ತಿನ ಬಾವಿಗಳು ಇವೆ. ಮೊದಲ ಅಂತಸ್ತಿನಲ್ಲಿ 9 ಸ್ತಂಭಗಳು, ಎರಡನೇ ಅಂತಸ್ತಿನಲ್ಲಿ ನಾಲ್ಕು ಸ್ತಂಭಗಳು, ಮೂರನೇ ಅಂತಸ್ತಿನಲ್ಲಿ ಎರಡು ಸ್ಥಂಬಗಳು ಇವೆ. ಒಂದು ವೇಳೆ ರಾಣಿಯರು ಸ್ನಾನ ಮಾಡುವುದನ್ನು ಯಾರಾದ್ರೂ ನೋಡಲು ಬಂದ್ರೆ, ದೊರದಿಂದಲೇ ಅವರನ್ನು ಪತ್ತೆಹಚ್ಚಬಹುದಾಗಿತ್ತು. ಇತ್ತೀಚೆಗೆ ಇದರ ಅನ್ವೇಷಣೆಗೆ ಎಂದು ಅಮೆರಿಕ ವಿಜ್ಞಾನಿಗಳು ಮತ್ತು ಪುರಾತತ್ವ ಇಲಾಖೆಗಳು ಭೇಟಿ ನೀಡಿವೆ. ಈ ಬಾವಿಯ ನೀರು ವರ್ಷದ 12 ತಿಂಗಳು ಬತ್ತದೆ ಸಂಪೂರ್ಣ ಭರ್ತಿಯಾಗುತ್ತದೆ. ಈ ಸ್ಥಳ ಹೈದರಾಬಾದಿನಿಂದ ಕೇವಲ 146 ಕಿಲೋಮೀಟರ್ ದೂರದಲ್ಲಿದೆ. ಬಳ್ಳಾರಿಯಿಂದ 516 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಹೋಗಲು ರೈಲು, ಬಸ್, ಖಾಸಗಿ ವಾಹನಗಳ ಸೌಕಾರ್ಯವಿದೆ.