Advertisements

ಭಂಗಿ ಹಿಡಿದು ಕುಳಿತರು ಶೃತಿ ! ಶೃತಿ ಅವರ ಮತ್ತೊಂದು ಇನ್ನಿಂಗ್ಸ್ ಪ್ರಾರಂಭ.

Cinema

ಶೃತಿ ಅವರು ಮೊದಲಿಗೆ ಚಿತ್ರಗಳಲ್ಲಿ ಅಳುಮುಂಜಿ ಪಾತ್ರದಲ್ಲಿ ನಟನೆ ಮಾಡುತ್ತ, ಕನ್ನಡಿಗರ ಮನದಲ್ಲಿ ವಿಶೇಷ ಭಾವನೆಯನ್ನು ಹುಟ್ಟುಹಾಕಿದ್ದರು ಕನ್ನಡಿಗರ ಮನೆಯ ಮಗಳಾಗಿದ್ದರು. ಅವರ ಚಿತ್ರದ ಒಂದೊಂದು ಪಾತ್ರಗಳು ಸಹ ನೋಡುವವರ ಮನಸಲ್ಲಿ ವಿಶೇಷವಾದ ಭಾವನೆಯನ್ನು ಮೂಡಿಸಿದ್ದರು. ನಂತರ ತಮ್ಮ ಸಾಂಸಾರಿಕ ಜೀವನ ಮುರಿದ ನಂತರ ರಾಜಕೀಯ ಹಾಗೂ ತಮ್ಮ ಮಗಳ ಜೊತೆ ಜೀವನವನ್ನು ಸಾಗಿಸುತ್ತಿದ್ದ ಶೃತಿ ಅವರು ಈಗ ಮತ್ತೆ ಬೆಳ್ಳಿ ಪರದೆಯಲ್ಲಿ ಮಿಂಚಲು ಬಂದಿದ್ದಾರೆ. ಇದುವರೆಗೂ ಈ ಪಾತ್ರದಲ್ಲಿ ನಟಿಸದ ನಟಿ ಈಗ ಅಚ್ಚರಿಯಾಗುವ ರೀತಿ ಎಂಟ್ರಿಕೊಟ್ಟಿದ್ದಾರೆ. ಹೌದು ಭಜರಂಗಿ 2 ನಲ್ಲಿ ಭಂಗಿ ಹಿಡಿದು ಕುಳಿತು ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .

Advertisements

ಭಜರಂಗಿ 2 ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾದ ಟ್ರೆಂಡ್ ಅನ್ನು ಸೃಷ್ಠಿ ಮಾಡಿದೆ. ಇದರ ಟೀಸರ್ ಶಿವಣ್ಣನ ಜನ್ಮದಿನದಂದು ರಿಲೀಸ್ ಆಗಿತ್ತು. ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಶಿವಣ್ಣನನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇನ್ನೂ ಭಜರಂಗಿ 2 ನಟನಾಗಿ ಅಭಿನಯಿಸಿರುವ ಶಿವಣ್ಣ ಉತ್ಸಾಹದಿಂದ ಮಾತನಾಡಿದ್ದು, ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಮಾತನಾಡಿರುವ ಶಿವಣ್ಣನವರು ಭಜರಂಗಿ ಪಾರ್ಟ್ ಒನ್ ಹಿಟ್ ಕಂಡ ನಂತರ ಭಜರಂಗಿ 2 ಭಾಗವನ್ನು ಸಿನಿಮಾ ಮಾಡಲು ನಿರ್ಧಾರಮಾಡಿ ತಯಾರಿಸಿದವು. ಈ ಮಟ್ಟಕ್ಕೆ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ತಮ್ಮ ಖುಷಿಯನ್ನು ಅಂಚಿಕೊಂಡಿದ್ದಾರೆ. ಹಾಗೆ ನನ್ನ ಹುಟ್ಟು ಹಬ್ಬಕ್ಕೆ ಇದು ದೊಡ್ಡ ಕೊಡುಗೆಯಾಗಿದೆ. ಪರಭಾಷೆಗಳಲ್ಲೂ ಸಹ ಈ ಚಿತ್ರಕ್ಕೆ ಬಹು ಬೇಡಿಕೆ ಬಂದಿದೆ. ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾಹಕ್ಕೆ ಎಲ್ಲರಿಗೂ ಧನ್ಯವಾದಗಳು ತಿಳಿಸಿದ್ದಾರೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು. ಎ ಹರ್ಷ ಅವರು ನಿರ್ದೇಶನದ ಈ ಚಿತ್ರದಲ್ಲಿ ಶೃತಿ, ಭಾವನಾ, ಲೋಕಿ, ಚೆಲುವರಾಜ್ ಮೊದಲಾದ ದೊಡ್ಡ ತಾರೆಯರ ಬಳಗವೇ ಇದೆ.

ಇನ್ನೂ ಈ ಭಜರಂಗಿ 2 ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ನಂತರ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಈ ಸಿನಿಮಾ ಬಗ್ಗೆ ಪ್ರಶಂಸೆಯನ್ನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳ ಕಲಾವಿದರು, ನಿರ್ದೇಶಕರು, ತಂತ್ರಜ್ಞರು, ಚಿತ್ರೋದ್ಯಮಿಗಳು ಹಾಗೂ ಬಾಲಿವುಡ್ ಕಡೆಯಿಂದಲೂ ಸಹ ಪ್ರಶಂಸೆಯನ್ನು ಸುರಿಸಿದ್ದಾರೆ. ಈ 2 ನಿಮಿಷ ಕಡಿಮೆ ಸಮಯದ ಟೀಸರ್ ನಲ್ಲಿ ಶ್ಲೋಕ ಡ್ರಾಮಾ, ಅದ್ದೂರಿಯಾದ ಆಕ್ಷನ್ ಗಳು, ಪಾತ್ರಗಳನ್ನ ನೋಡಿ ಸಿನಿಮಾ ಇನ್ನೆಗಿರಬಹುದು ಎಂದು ಪ್ರೇಕ್ಷಕರಲ್ಲಿ ಮೂಡಿದೆ.