Advertisements

ನಟಿ ಶ್ರುತಿ ಅವರ ಮಗಳು ತಮ್ಮ ಜಮೀನಿನಲ್ಲಿ ಗುದ್ದಲಿ ಪೂಜೆ ಮಾಡುತ್ತಿರುವ ವಿಡಿಯೋ.. ನೋಡಿ..

Cinema

ಹೆಣ್ಣು ಹೊನ್ನು ಮಣ್ಣು ತಾನಾಗಿಯೇ ಮನುಷ್ಯನಿಗೆ ಒಲಿದು ಬರಬೇಕು ಅಂತ ಕ್ಯಾಪ್ಶನ್ ಹಾಕಿದ ಕನ್ನಡದ ಹೆಸರಾಂತ ನಟಿ ಶ್ರುತಿ.. ಅಷ್ಟಕ್ಕೂ ಶ್ರುತಿ ಯಾಕೆ ಹೀಗೆ ಹೇಳಿದ್ರು? ಶ್ರುತಿ ನಟನಾ ಬದುಕು ಆರಂಭಿಸುವ ಮುನ್ನ ಅವರ ಹೆಸರೇನು? ಆರಂಭಿಸಿದ ಮೇಲೂ ಬೇರೆ ಹೆಸರು ಇಟ್ಟುಕೊಂಡಿದ್ರು ಶ್ರುತಿ ಅವ್ರು.. ಗಿರಿಜಾ ಆಗಿದ್ದ ಶ್ರುತಿ ಸೆಪ್ಟೆಂಬರ್ 18, 1975 ರಂದು ಹಾಸನ ಜಿಲ್ಲೆಯಲ್ಲಿ ಜನಿಸುತ್ತಾರೆ. ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಇವರ ಹೆಸರು ಪ್ರಿಯದರ್ಶಿನಿ ಆಗಿ ಬದಲಾಯಿತು. ಇದು ಇವರ ಚೊಚ್ಚಲ ಸಿನಿಮಾ ಕೂಡ ಹೌದು ಈ ಸಿನಿಮಾದಲ್ಲಿ ಅಪಾರ ಹೆಸರನ್ನು ಶ್ರುತಿ ಮಾಡಿದ್ರು.. ಬಳಿಕ ಶ್ರುತಿ ಮತ್ತೆ ಹೆಸರು ಬದಲಾಯಿಸಿಕೊಂಡರು. ಆಸೆಗೊಬ್ಬ ಮೀಸೆಗೊಬ್ಬ ಚಿತ್ರದ ಬಳಿಕ 1990 ರಲ್ಲಿ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದಲ್ಲಿ ಬಣ್ಣ ಹಚ್ಚುತ್ತಾರೆ.. ಈ ಚಿತ್ರ ಶ್ರುತಿ ಅವ್ರಿಗೆ ಒಳ್ಳೆ ಹೆಸರು ಹಾಗೂ ಅಧ್ಬುತ ಕಲಾವಿದೆ ಎಂಬ ಬಿರುದು ತಂದುಕೊಡ್ತು.. ಈ ಮೂಲಕ ಇವರ ಹೆಸರು ಶ್ರುತಿ ಅಂದಿನಿಂದ ಇಂದಿನವರೆಗೆ ಕನ್ನಡ ಚಿತ್ರರಂಗದಲ್ಲಿ ಶೃತಿಯಾಗಿಯೆ ಉಳಿದುಕೊಂಡಿದೆ..

[widget id=”custom_html-3″]

Advertisements

ಶ್ರುತಿ ಸಿನಿಮಾದ ಬಳಿಕ ಅನೇಕ ಹಿಟ್ ಸಿನಿಮಾವನ್ನು ಶ್ರುತಿ ಅವ್ರು ಕೊಟ್ಟಿದ್ದಾರೆ.. ಗೌರಿ ಗಣೇಶ, ಸಿಬಿಐ ಶಿವ, ಬೊಂಬಾಟ್ ಹೆಂಡ್ತಿ, ಚಿತ್ರಲೇಖ, ಅಳಿಮಯ್ಯ, ಶ್ರೀ ದುರ್ಗಾಪೂಜೆ, ಮೌನ ಸಂಗ್ರಾಮ, ತುಂಬಿದ ಮನೆ, ಊರ್ವಶಿ, ಗೌರಿ ಗಣೇಶ, ಸಿಬಿಐ ಶಿವ, ಬೊಂಬಾಟ್ ಹೆಂಡ್ತಿ, ಚಿತ್ರಲೇಖ, ಅಳಿಮಯ್ಯ, ಶ್ರೀ ದುರ್ಗಾಪೂಜೆ, ಮೌನ ಸಂಗ್ರಾಮ, ತುಂಬಿದ ಮನೆ, ಊರ್ವಶಿ, ಸತ್ಯ, ಜ್ವಾಲೆ’ ತವರಿನ ತೇರು ನಮ್ಮೂರ ಹುಡುಗ, ಗಟ್ಟಿಮೇಳ, ಜೇನುಗೂಡು, ಮುತ್ತು, ಅಕ್ಕತಂಗಿ, ಪುಟ್ಟಕ್ಕನ ಹೈವೆ, ಕಲ್ಪನಾ, ಬಚ್ಚನ್, ದಂಡುಪಾಳ್ಯ 2, ದಂಡುಪಾಳ್ಯ 3 ಮುಂತಾದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಇತ್ತೀಚಿಗಷ್ಟೇ ರತ್ನನ್ ಪ್ರಪಂಚ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿ ಪ್ರೇಕ್ಷಕ ಪ್ರಭುಗಳ ಕಣ್ಣು ಒದ್ದೆ ಮಾಡಿಸಿದ್ದಾರೆ..

[widget id=”custom_html-3″]

ಇನ್ನು ಈಗ ಶ್ರುತಿ ಅವ್ರು ಜಮೀನಿನಲ್ಲಿ ಗುದ್ದಲಿ ಪೂಜೆ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ತಮ್ಮ ಮಗಳು ಗೌರಿ ಮತ್ತು ಕುಟುಂಬದ ಸದಸ್ಯರ ಜೊತೆಗೆ ತಮ್ಮ ಜಮೀನಿನಲ್ಲಿ ಗುದ್ದಲಿ ಪೂಜೆಯನ್ನು ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರುತಿ ಅವರು ಗುದ್ದಲಿ ಪೂಜೆ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದರ ಕೆಳಗೆ ಹೆಣ್ಣು ಹೊನ್ನು ಮಣ್ಣು ತಾನಾಗಿಯೇ ಮನುಷ್ಯನಿಗೆ ಒಲಿದು ಬರಬೇಕು ಎಂದು ಕೂಡ ಬರೆದು ಕೊಂಡಿರುವುದು.. ಅದೇನೇ ಇರಲಿ ಶೃತಿ ಅವರ ಮಗಳು ಕೂಡ ಈಗ ಬೆಳೆದು ನಿಂತಿದ್ದಾರೆ.. ಶ್ರುತಿ ಅವರ ಏಕೈಕ ಪುತ್ರಿ ಗೌರಿ ಅವರು ಕೂಡ ಸಾಕಷ್ಟು ಕನ್ನಡದ ಹಾಡುಗಳಿಗೆ ಧ್ವನಿಯನ್ನು ನೀಡಿದ್ದಾರೆ..

[widget id=”custom_html-3″]