Advertisements

ನಟಿ ಶೃತಿ ಅವರ ತಂದೆ ಯಾಕೆ ಎರಡು ಮದುವೆಯಾದ್ರು ಗೊತ್ತಾ? ಶೃತಿ ಹಾಗು ಶರಣ್ ಯಾರ ಮಕ್ಕಳು.. ಐವತ್ತು ವರ್ಷದ ನಂತರ ಸತ್ಯ ಬಯಲು!

Cinema

ಜಮೀನ್ದಾರು ಸಿನಿಮಾ ಯಾರೆಲ್ಲ ನೋಡಿದ್ದೀರಾ. ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಜಮೀನ್ದಾರು ಸಿನಿಮಾ ಎಷ್ಟು ಪೇಮಸ್ ಅಲ್ವಾ.. ದಾದಾ ನಟನೆಯಿಂದ ಹಿಡಿದು ಚಿತ್ರದ ಪ್ರತೀ ಪಾತ್ರವೂ ಸಹ ವಿಶೇಷವಾಗಿತ್ತು.. ಸಿನಿಮಾದ ಸ್ಟೋರಿ ಲೈನೇ ಹಾಗಿದೆ. ಸಿನಿಮಾದ ಕಥಾ ಹಂದರವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತೆ. ನಿಮಗೆಲ್ಲ ಗೊತ್ತಿರಬಹುದು ಶ್ರೀನಿವಾಸ್ ಅವರು ನಿಜವಾದ ತಾಯಿ ಯಾರು ಅಂತ ವಿಷ್ಣುಗೆ ಹೇಳಿರೋದಿಲ್ಲ, ವಿಷ್ಣುವರ್ಧನ್ ಕೂಡ ಸಿನಿಮಾದಲ್ಲಿ ಎರಡು ಮದುವೆಯಾಗಿದ್ದು, ಯಾರು ತಾಯಿ ಅಂತ ಮಕ್ಕಳಿಗೆ ಹೇಳುವುದಿಲ್ಲ.. ಈ ಸಿನಿಮಾ ಸಖತ್ ಆಗಿದೆ ಅಂದವರ ಪೈಕಿಯೇ,, ಸಿನಿಮಾ ಅಷ್ಟೇ ನಿಜ ಜೀವನದಲ್ಲಿ ಹೀಗೆ ಆಗಲಿಕ್ಕೆ ಸಾಧ್ಯವಿಲ್ಲ ಅಂತೆಲ್ಲ ಹೇಳಿದವರು ಇದ್ದಾರೆ.

Advertisements

ಆದ್ರೆ ಅವರೆಲ್ಲರಿಗೂ ಸೆಡ್ಡು ಹಿಡಿಯುವ ರೀತಿ ಈ ಕತೆಯಿದೆ. ಅದು ಸಿನಿಮಾ ನಾಯಕಿಯ ಕತೆ.. ಎಸ್ ನಟಿ ಶೃತಿ ಅವರ ಬದುಕಲ್ಲಿ ಹೀಗೆ ಆಗಿದೆ. ನಿಮಗೆಲ್ಲ ಗೊತ್ತಿರಬಹುದು, ಶೃತಿ ಹಾಗೂ ಶರಣ್ ಇಬ್ಬರು ಸಹ ಅಣ್ಣ ತಂಗಿ.. ಆದ್ರೆ ಈ ಇಬ್ಬರ ತಾಯಿ ಯಾರು ಅನ್ನೋದು ಅವ್ರಿಗೆ ಗೊತ್ತಿಲ್ಲ. ಹೌದು ಇವರಿಬ್ಬರ ತಂದೆ ಕೃಷ್ಣಾ ಹಾಗೂ ರುಕ್ಮಿಣಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ನಾಟಕ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕೃಷ್ಣ ಒಂದು ದಿನ ದಿಢೀರ್ ಅಂತ ಮನೆಕಾಲಿ ಮಾಡಿ ಹೋದ್ರು. ಪ್ರೀತಿ ಪ್ರೇಮದ ಹೆಸರಲ್ಲಿ ಮೋಸ ಮಾಡಿದ್ರು ಅಂತ ರುಕ್ಮಿಣಿ ಅವ್ರು ವ್ಯಥೆ ಪಡ್ತಾಯಿದ್ರು. ಆದ್ರೆ ದಿಢೀರ್ ಅಂತ ಒಂದು ಸಲ ಕೃಷ್ಣ ಅವರ ಬಗ್ಗೆ ಗೊತ್ತಾಗ್ತದೆ. ಹೀಗೆ ಮದುವೆ ಪ್ರಸ್ತಾಪವನ್ನು ಅವರ ಮುಂದೆ ರುಕ್ಮಿಣಿಯವರು ಇಡುತ್ತಾರೆ, ಆದ್ರೆ ರುಕ್ಮಿಣಿ ಅಣ್ಣಂಗೆ ಕೃಷ್ಣಾ ಬೇರೆ ಜಾತಿಯವರದ್ದಾರಿಂದ ಮದುವೆ ಮಾಡಿಕೊಡೋದು ಇಷ್ಟ ಇರಲಿಲ್ಲ, ಹೀಗಾಗಿ ಅವರು ಈ ಮದುವೆಯನ್ನು ತಿರಸ್ಕರಿಸಿದ್ರು.

ಇನ್ನು ರುಕ್ಮಿಣಿಯವರು ಮಾತ್ರ ಇಲ್ಲ ನಾನು ಕೃಷ್ಣನನ್ನೇ ಮದುವೆಯಾಗ್ತೀನಿ ಅಂತ ಹಠ ಹಿಡಿದಿದ್ರು. ಪರಿಣಮ ರುಕ್ಮಿಣಿ ಅಣ್ಣ ಮನೆ ಬಿಟ್ಟು ಹೋದ್ರು. ಬಳಿಕ ಮದುವೆಗೆ ಇನ್ನೇನು ಒಂದು ವಾರ ಇದೆ ಅನ್ನೋವಾಗ ರುಕ್ಮಿಣಿಯವರು ನನ್ನ ಜೊತೆ ರಾಧೆಯನ್ನು ಮದುವೆಯಾಗಬೇಕು ಅಂದಿದ್ದಾರೆ. ನನ್ನಕ್ಕ ಅಂದ್ರೆ ನಂಗೆ ತುಂಬಾ ಇಷ್ಟ ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ, ಅವರನ್ನು ಮದುವೆ ಆಗಿ ಅಂತ ಹಠ ಹಿಡಿದಿದ್ರು. ಪರಿಣಾಮ ಕೃಷ್ಣ ಸಹ ರಾಧೆ ರುಕ್ಮಿಣಿ ಇಬ್ಬರನ್ನು ಮದುವೆ ಆಗಿದ್ರು. ಆದ್ರೆ ಇಲ್ಲಿಯವರೆಗೆ ಸಹ ಶೃತಿ ಹಾಗೂ ಶರಣ್ ಯಾರ ಮಕ್ಕಳು ? ಯಾರು ಅವರ ತಾಯಿ ಎಂಬ ಕ್ಲಾರಿಟಿ ಇನ್ನು ಸಿಕ್ಕಿಲ್ಲ. ಆ ಗುಟ್ಟನ್ನು ಇನ್ನು ಬಿಟ್ಟುಕೊಟ್ಟಿಲ್ಲ