Advertisements

ಬಿಗ್ ಬಾಸ್ ಶುಭ ಪೂಂಜಾ ಜೀವನದಲ್ಲಿ ಅನುಭವಿಸಿದ ಕಷ್ಟಗಳು ಎಂತಹದ್ದು ಗೊತ್ತಾ? ನಟಿ ಶುಭ ಪೂಂಜಾ ಮದುವೆ ಸತ್ಯ ಬಯಲು..

Cinema Entertainment

ನಮಸ್ತೆ ಸ್ನೇಹಿತರೆ, ಮೊಗ್ಗಿ‌ನ ಮನಸ್ಸು ಬೆಡಗಿ ಶುಭ ಪೂಂಜಾ ಅಂದರೆ ಸಾಕು ಒಂದಿಷ್ಟು ಹಸಿ ಬಿಸಿ ದೃಶ್ಯಗಳು  ಇಲ್ಲವೇ ಇನ್ನೊಂದಷ್ಟು ವಿವಾದಗಳೆ ನೆನಪಾಗುತ್ತದೆ.. ಆದರೆ ಬಿಗ್ ಬಾಸ್ ಕಾರ್ಯಕ್ರಮ ನೋಡಿದ ನಂತರ ಆಕೆಯ ಮೇಲಿದ್ದ ಅಭಿಪ್ರಾಯ ಕೆಲವರಲ್ಲಿ ಬದಲಾಗಿದೆ. ಶುಭ ಪುಂಜಾ ಅವರು ಕೆಲವು ಚಿತ್ರಗಳಲ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರಬಹುದು.. ಆದರೆ ಆಕೆಯ ಮನಸ್ಸು ಬಹಳ ಸ್ವಚ್ಚವಾದದ್ದು ಮತ್ತು ಆಕೆಯ ನಡತೆ ಪುಟ್ಟ ಮಗುವಿನ ರೀತಿ ಇರುತ್ತದೆ. ಚಂಡ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಮಂಗಳೂರು ಬೆಡಗಿ ಶುಭ ಪೂಂಜಾ ಹಲವು ಒಳ್ಳೆ ಸಿನಿಮಾಗಳಲ್ಲಿ ನಟಿಸಿದ್ದು ಇವರಿಗೂ ಕನ್ನಡ ಮತ್ತು ತಮಿಳಿನಲ್ಲಿ ಸುಮಾರು 40 ಕ್ಕು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ..

Advertisements

ಶುಭ ಪೂಂಜಾ ಅವರಿಗೆ ದುನಿಯಾ ವಿಜಯ್ ಅವರ ಜೊತೆ ಸಂಬಂಧ ಇದೆ ಎನ್ನುವ ಮಾತು ಹಿಂದೆಲ್ಲಾ ಸಾಕಷ್ಟು ಸುದ್ದಿಯಾಗಿದ್ದವು. ಅವರಿಬ್ಬರೂ ಮದುವೆ ಆಗಿದ್ದಾರೆ ಸಾಕ್ಷಿ ಎಂಬಂತೆ ಕೆಲವು ಪೋಟೋಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.. ಇದಾದ ನಂತರ ಶುಭ ಪೂಂಜಾ ಅವರು ಕೊಂಚ ಕಾಲ ಸುದ್ದಿಯಲ್ಲಿ ಇರಲಿಲ್ಲ. ಆಮೇಲೆ ಅವರು ಮತ್ತೆ ಸುದ್ದಿಯಾಗಿದ್ದೂ ಹಾಟ್ ಪೊಟೊಶೂಟ್ ಮೂಲಕ.. ಬಹಳ ಪ್ರಚೋದನಕಾರಿ ಬಂಗಿಗಳಲ್ಲಿ ಇದ್ದ ಈ ಪೊಟೊಗಳು ಮೊಗ್ಗಿನ ಮನಸ್ಸು ಹುಡುಗಿಯ ಇಮೇಜನ್ನ ಕೊಂಚ ಬದಲಿಸಿದವು..

ಒಂದು ವರ್ಷದ ಹಿಂದೆ ಶುಭ ಪೂಂಜಾ ಅವರು ಬ್ಯುಸಿನೆಸ್ ಮ್ಯಾನ್ ಜೊತೆಗೆ ಡೇಟಿಂಗ್ ಮಾಡುತ್ತಾ ಲವ್ ನಲ್ಲಿ ಬಿದ್ದಿರುವ ವಿಚಾರ ಬಯಲಾಯಿತು. ಸ್ವಲ್ಪ ದಿನದಲ್ಲಿ ನಾವಿಬ್ಬರು ಮದುವೆ ಆಗುತ್ತೇವೆ ಅಂತ ಶುಭ ಪೂಂಜಾ ಅವರು ಹೇಳಿಕೊಂಡಿದ್ದರು.. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ಶುಭಾ ಅವರು ಮನೆಯಿಂದ ಎಲಿಮಿನೇಟ್ ಆಗಿ ಹೋದ ನಂತರ ಮದುವೆ ಆಗುವುದಾಗಿ ತಿಳಿಸಿದ್ದಾರೆ.