Advertisements

ಬ್ಯೂಟಿಫುಲ್‌ ನಟಿಗೆ ಕೂಡಿಬಂತು ಕಂಕಣ ಭಾಗ್ಯ – ಆ ಹ್ಯಾಂಡ್ಸಂ ಹುಡುಗ ಯಾರು ಗೊತ್ತಾ ?

Cinema

ಕೊರೋನಾ ಲಾಕ್ ಡೌನ್ ನಡುವೆಯೇ ಸ್ಯಾಂಡಲ್ ವುಡ್ ನಟ ನಟಿಯರು ಒಬ್ಬರಾದಮೇಲೆ ಒಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ತನ್ನ ವಿಭಿನ್ನ ಪಾತ್ರಗಳ ಮೂಲಕ ವೀಕ್ಷಕರನ್ನ ರಂಜಿಸಿರುವ ನಟಿ ಶುಭಾ ಪೂಂಜಾ ಸಪ್ತಪದಿ ತುಳಿಯುತ್ತಿದ್ದಾರೆ. ಹೌದು, ಜಾಕ್ ಪಾಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶುಭಾ ಈಗ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Advertisements

ಬ್ಯೂಟಿಫುಲ್ ನಟಿ ಶುಭ ಪೂಂಜಾ ಮದುವೆಯಾಗುತ್ತಿರುವ ಹ್ಯಾಂಡಸಮ್ ಹುಡುಗ ಸುಮಂತ್ ಅಂತ. ಮಂಗಳೂರಿನ ಮೂಲದವರಾಗಿರುವ ಸುಮಂತ್ ಮಹಾಬಲ ಅವರು ಉದ್ಯಮಿಯಾಗಿದ್ದು, ಜಯ ಕರ್ನಾಟಕ ಸಂಘಟನೆಯ ಕರ್ನಾಟಕ ದಕ್ಷಿಣ ಭಾಗದ ಉಪಾಧ್ಯಕ್ಷರಾಗಿದ್ದಾರೆ.

ಇನ್ನು ೩೦ ವರ್ಷದ ಶುಭಾ ಮತ್ತು ಸುಮಂತ್ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಈಗ ಎರಡು ಕುಟುಂಬದವರ ಕಡೆಯಿಂದ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ವೈವಾಹಿಕ ಜೀವನಕ್ಕಷ್ಟೇ ಕಾಲಿಡುತ್ತಿದ್ದಾರೆ.

೨೦೦೫ರಲ್ಲಿ ಜಾಕ್ ಪಾಟ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಶುಭ ಪೂಂಜಾ ಸುಮಾರು ೨೦ಕ್ಕೂ ಹೆಚ್ಚು ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಇನ್ನು ಡಿಸೆಂಬರ್ ನಲ್ಲಿ ಮದ್ವೆಯಾಗಲು ಪ್ಲಾನ್ ಮಾಡಿರುವ ಈ ಜೋಡಿ, ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.