Advertisements

ಲಾಕ್ ಡೌನ್ ವೇಳೆ ಮಗುವಿಗಾಗಿ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದ ಶ್ವೇತಾ ಚೆಂಗಪ್ಪ !

Entertainment

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನೇತೃತ್ವದಲ್ಲಿ ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ಕಾಮಿಡಿ ಶೋ ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರದಲ್ಲಿ ಅಭಿನಯಿಸಿ ಫೇಮಸ್ ಆಗಿದ್ದ ನಟಿ ಶ್ವೇತಾ ಚೆಂಗಪ್ಪ, ಈಗ ತನ್ನ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮುದ್ದಿನ ಮಗ ಜಿಯಾನ್ ಗೆ ಈಗಾಗಲೇ ಎಂಟು ತಿಂಗಳಾಗಿದ್ದು, ಮಗನ ಪಾಲನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಇನ್ನು ಕರೋನಾ ಎಫೆಕ್ಟ್ ಶ್ವೇತಾ ಚೆಂಗಪ್ಪನವರಿಗೂ ತಟ್ಟಿದ್ದು, ಲಾಕ್ ಡೌನ್ ಇರುವ ಕಾರಣ ತನ್ನ ಪುತ್ರನ ಆರೋಗ್ಯದ ದೃಷ್ಟಿಯಿಂದ ಸ್ವತಃ ಶ್ವೇತಾ ಚೆಂಗಪ್ಪನವರೇ ಕೆಲವು ನಿರ್ಧಾರಗಳನ್ನ ತೆಗೆದುಕೊಂಡಿದ್ದು, ತಾವು ಹೊರಗಡೆ ಹೋಗುವುದು ಹಾಗೂ ಹೊರಗಡೆಯಿಂದ ಮನೆಗೆ ಬರುವ ಸಂಬಂಧಿಕರಿಗೆ, ಅತಿಥಿಗಳಿಗೆ ಅವಕಾಶ ನೀಡಲಿಲ್ಲ. ಇನ್ನು ತನ್ನ ಮಗುವಿನ ಮೇಲೆ ಇರುವ ಕಾಳಜಿಯಿಂದ ಹೊರಗಡೆಯವರ ಜೊತೆ ಮಾತನಾಡುವುದನ್ನ ಕೂಡ ನಿಲ್ಲಿಸಿಬಿಟ್ಟಿದ್ದಾರೆ. ಇಷ್ಟೇ ಅಲ್ಲದೆ ಹೊರಗಡೆಯಿಂದಾ ಮನೆಗೆ ತರುವ ಯಾವುದೇ ವಸ್ತುಗಳನ್ನ ಸ್ಯಾನಿಟೈಸ್ ಮಾಡಿದ ಬಳಿಕವೇ ಅವುಗಳನ್ನ ಮನೆಯೊಳಗೇಇಡುತ್ತಿದ್ದಾರೆ.

ಇನ್ನು ಮನೆಯ ಶುಚಿತ್ವದಲ್ಲಿ ಬಹಳ ಕಾಳಜಿ ವಹಿಸಿರುವ ಶ್ವೇತಾ ಚೆಂಗಪ್ಪ ಒಂದಿಷ್ಟು ಕೊಳಕಾಗದಂತೆ ನೋಡಿಕೊಳ್ಳುತ್ತಿದ್ದಾರೆ. ತರಕಾರಿ, ಹಣ್ಣುಗಳನ್ನ ಶುಚಿಯಾಗಿ ತೊಳೆದ ನಂತರವೇ ಮನೆಯ ಒಳಗೆ ಇಡುತ್ತಿದ್ದಾರೆ. ತನ್ನ ಮಗನ ಆರೋಗ್ಯದ ಕಾಳಜಿಯಿಂದ ಮನೆಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ಚೆಂಗಪ್ಪನವರು ಮನೆಗೆ ಬರುವ ಕೆಲಸಗಾರರಿಗೂ ಕೂಡ ಬರುವುದು ಬೇಡ ಎಂದು ಹೇಳಿದ್ದಾರಂತೆ. ಹಾಗಾಗಿ ಮನೆಯ ಎಲ್ಲಾ ಕೆಲಸಗಳನ್ನ ತಾವೊಬ್ಬರೇ ಮಾಡುತ್ತಿದ್ದರಂತೆ.

ಇದರಿಂದ ಶ್ವೇತಾರವರಿಗೆ ಕೂರಲು ಕೂಡ ಸಮಯವಿಲ್ಲ, ಇಡೀ ದಿನ ಮನೆಯ ಕೆಲಸಗಳಲ್ಲೇ ಕಳೆದುಹೋಗುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಇನ್ನು ಲಾಕ್ ಡೌನ್ ಇರುವ ಈ ಸಮಯದಲ್ಲಿ ಮನೆಯಲ್ಲೇ ಕುಳಿತು ಸಿನಿಮಾಗಳನ್ನ ನೋಡಿಕೊಂಡು, ಆಟಗಳನ್ನ ಆಡಿಕೊಂಡು ಎಂಜಾಯ್ ಮಾಡುತ್ತಿರುವವರನ್ನ ನೋಡಿದ್ರೆ ನಂಗೆ ಹೊಟ್ಟೆ ಕಿಚ್ಚಾಗುತ್ತೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇದೆಲ್ಲಾ ತಮ್ಮ ಮಗನ ಆರೋಗ್ಯದ ಮೇಲಿರುವ ಕಾಳಜಿ ಎಂದು ಶ್ವೇತಾ ಚೆಂಗಪ್ಪ ಹೇಳಿದ್ದಾರೆ.