Advertisements

ಭುಜದ ಮೇಲೆ ಹೊತ್ತು 2 ಕಿಮೀ ನಡೆದ ಮಹಿಳಾ ಎಸ್ಐ ಮಾಡಿದ್ದೇನು ಗೊತ್ತಾ ! ಕರ್ತವ್ಯ ನಿಷ್ಠೆ ಅಂದ್ರೆ ಇದೆ ಅಲ್ವಾ..

Inspire

ನಮಸ್ತೇ ಸ್ನೇಹಿತರೇ, ಭ್ರಷ್ಟ ಅಧಿಕಾರಿಗಳ ನಡುವೆ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುವ ಬಹುತೇಕ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ. ಅದರಲ್ಲೂ ಪೋಲೀಸರ ಮಾನವೀಯತೆಗೆ ಸಾಕ್ಷಿಯಾದ ಎಷ್ಟೋ ನಿದರ್ಶನಗಳನ್ನ ನೋಡಿದ್ದೇವೆ. ಈಗ ಕರ್ತವ್ಯ ನಿಷ್ಠೆ ಎಂದರೆ ಹೀಗಿರಬೇಕು ಎಂಬುದನ್ನ ಮಾಡಿ ತೋರಿಸಿರುವ ಈ ಮಹಿಳಾ ಸಬ್ ಇನ್ಸಪೆಕ್ಟರ್ ಅವರ ಮಾನವೀಯತೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ಹೌದು, ಅನಾಥ ಶ’ವವೊಂದನ್ನ ತನ್ನ ಭುಜದ ಮೇಲೆ ಎತ್ತಿಕೊಂಡು ಹೋಗಿ ಅಂ’ತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಘಟನೆ ಪಕ್ಕದ ಆಂಧ್ರಪ್ರದೇಶದಲ್ಲಿ ನಡೆದಿದೆ.

ಹೌದು, ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಡೆದಿದೆ. ಸ್ಥಳೀಯ ಕಾನಿಗುಬ್ಬ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿರಿಷಾ ಅವರೇ ಮಾನವೀಯತೆ ಮೆರೆದ ಅಧಿಕಾರಿಯಾಗಿದ್ದಾರೆ. ಅವರ ಲಿಮಿಟ್ ನಲ್ಲಿ ಬರುವ ಆವಿಕೊತ್ತೂರು ಎಂಬ ಹಳ್ಳಿಯ ಜಮೀನೊಂದರಲ್ಲಿ ಅನಾಥವಾದ ಶ’ವವೊಂದು ಪತ್ತೆಯಾಗಿದ್ದು ಅದರ ಪರಿಶೀಲನೆಗೊಂದು ಎಸ್ಐ ಶಿರಿಷಾ ಹೋಗಿದ್ದರು. ಆದರೆ ಅದರ ಅಂ’ತ್ಯಕ್ರಿಯೆ ಮಾಡಲು ಆ ಊರಿನವರು ಯಾರು ಮುಂದೆ ಬರಲಿಲ್ಲ. ಆಗ ತಾವೇ ಅಂ’ತ್ಯಕ್ರಿಯೆ ಮಾಡಲು ಮುಂದಾಗಿದ್ದು ಅವರಿಗೆ ಸ್ಥಳೀಯ ವ್ಯಕ್ತಿಯೊಬ್ಬ ಒಬ್ಬ ಸಾತ್ ಕೊಟ್ಟಿದ್ದಾರೆ.

Advertisements

ಇನ್ನು ಆ ಜಮೀನಿನಿಂದ ಎರಡು ಕಿಮಿ ದೂರ ಆ ಅನಾಥ ಶ’ವವನ್ನ ತನ್ನ ಹೆಗಲ ಮೇಲಿಟ್ಟುಕೊಂಡು ನಡೆದುಕೊಂಡು ಹೊತ್ತಯ್ದ ಮಹಿಳಾ ಪೊಲೀಸ್ ಎಸ್ಐ ಶಿರಿಷಾ ಅವರು ಅಂ’ತ್ಯಕ್ರಿಯೆಯನ್ನ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಇದರ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಆಂದ್ರಪ್ರದೇಶದ ಡಿಜಿಪಿ ಸಾವಂಗ್ ಸೇರಿದಂತೆ ನೆಟ್ಟಿಗರು ಶಿರಿಷಾ ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೇ, ಮಾನವೀಯತೆ ಮೆರೆದ ಈ ಮಹಿಳಾ ಅಧಿಕಾರಿ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ..