Advertisements

ಉಪೇಂದ್ರ ಜೊತೆ ನಟಿಸಿದ್ದ ಈ ಅವಳಿ ಜೋಡಿ ಈಗೆಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತಾ ? ಈಗ ಇವರ ಜೀವನ ಹೇಗಿದೆ ನೋಡಿ..

Inspire

ಸ್ನೇಹಿತರೇ, 2002ರಲ್ಲಿ ವಿಭಿನ್ನಾ ಕಥಾ ಹಂದರ ಹೊಂದಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೆಚ್2ಓ ಚಿತ್ರ ಬಂದಿದ್ದು ಆ ಸಿನಿಮಾವನ್ನ ನೀವೆಲ್ಲರೂ ನೋಡಿರುತ್ತೀರಾ..ಇನ್ನು ಇದೇ ಚಿತ್ರದಲ್ಲಿ ಒಂದೇ ದೇಹ ಹೊಂದಿದ್ದ ಎರಡು ತಲೆ, ನಾಲ್ಕು ಕೈ ಹಾಗೂ ಎರಡು ಕಾಲುಗಳಿದ್ದ ಸಯಾಮಿ ಅವಳಿ ಸಹೋದರಿಯರ ಪಾತ್ರವನ್ನ ನೀವು ನೋಡಿದ್ದೀರಿ..ಹಾಗಾದ್ರೆ, ಈ ಅವಳಿ ಸಹೋದರಿಯರು ಈಗೆಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಎಂಬುದನ್ನ ನೋಡೋಣ ಬನ್ನಿ..ಹೌದು, ಈಗಂತೂ ಈ ಜಗತ್ತಿನಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಹೊರಗೆ ಕಾಣುವ ದೇಹದ ಸೌಂದರ್ಯಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಬಹುತೇಕರು ಇತರರೊಂದಿಗೆ ತಮ್ಮನ್ನ ಹೋಲಿಸಿಕೊಂಡು ಜೀವನವಿಡೀ ಕೊ’ರುಗುತ್ತಿರುತ್ತಾರೆ. ಆದರೆ ನಾವೂ ಯಾವತ್ತೂ ಕೂಡ ದೇವರು ನಮಗೆ ಕೊಟ್ಟಿರುವ ಸೌಕರ್ಯಗಳ ಬಗೆ ಖುಷಿ ಪಡೋದಿಲ್ಲ. ಆದರೆ ಈ ಅವಳಿ ಸಹೋದರಿಯರನ್ನ ನೋಡಿದ್ರೆ, ಸರಿಪಡಿಸಲಾಗದ ಅಂಗವೈಕಲ್ಯತೆಯನ್ನ ಹುಟ್ಟುತ್ತಲೇ ಪಡೆದಿದ್ದಾರೆ. ಅದೇನೇ ಇದ್ದರೂ ದಿಟ್ಟತನದಿಂದ ಬದುಕುತ್ತಿರುವ ಇವರ ಜೀವನ ಮಾತ್ರ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

Advertisements

ಈ ಅವಳಿ ಸಹೋದರಿಯ ಹೆಸರು ಗಂಗಾ ಮುಂಡಲ್ ಮತ್ತು ಜಮುನಾ ಮುಂಡಲ್ ಎಂದು. ೧೯೬೯ರಲ್ಲಿ, ಪಚ್ಛಿಮ ಬಂಗಾಳದ ಬಸಿರಾತ್ ಎಂಬಲ್ಲಿ ಇವರ ಜನವಾಗುತ್ತದೆ. ಆದರೆ ಇವರು ಹುಟ್ಟುತ್ತಲೇ ಪರಸ್ಪರ ಅಂಟಿಕೊಂಡೇ ಹುಟ್ಟುತ್ತಾರೆ. ಹೀಗೆ ಬೆಳೆದ ಈ ಅವಳಿ ಸಹೋದರಿಯರ ಜೋಡಿ ಮುಂದೆ ಸರ್ಕಸ್ ಸೇರಿಂದಂತೆ ಅನೇಕ ಮನರಂಜನಾ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಾರೆ. ಇನ್ನು ಇವರ ಮೂಲ ಹೆಸರು ಆಯೆರಾ ಹಾಗೂ ಜಯೆರಾ ರತುನ್ ಎಂದು. ಗಂಗಾ ಮತ್ತು ಯಮುನಾ ನದಿಗಳ ಸಂಗಮದಂತೆ ಇವರ ದೇಹ ಕೂಡ ಅಂಟಿಕೊಂಡಿದ್ದರಿಂದ ಇವರಿಗೆ ಗಂಗಾ ಮತ್ತು ಜಮುನಾ ಹೆಸರು ಬಂದಿದೆ. ಸರ್ಕಸ್ ಗಳಲ್ಲಿ ಇವರ ಕಸರತ್ತುಗಳನ್ನ ನೋಡಿ ಇವರಿಗೆ ಸ್ಪೈಡರ್ ಗರ್ಲ್ಸ್ ಎಂಬ ಹೆಸರು ಕೂಡ ಇಡಲಾಯಿತು. ತಮ್ಮ ಜನನನಿಂದಲೇ ಅಂಟಿಕೊಂಡು ಬೆಳೆದ ಈ ಸಹೋದರಿಯರು ಯಾವತ್ತು ಕೂಡ ಸಮಾಜದಲ್ಲಿ ಬಂದ ಟೀಕೆ ಅವಮಾನಗಳಿಗೆ ಕುಸಿಯಲಿಲ್ಲ. ಬದಲಿಗೆ ಆತ್ಮವಿಶ್ವಾಸದಿಂದ ಜೀವನ ಮಾಡಲು ಶುರು ಮಾಡಿದ್ರು.

ಆದರೆ ಇವರು ಹುಟ್ಟಿದ ಊರಿನಲ್ಲಿ ಈ ಜೋಡಿ ಯಾವುದೇ ಟೀಕೆಗಳಿಗೆ ಒಳಗಾಗಲಿಲ್ಲ. ಬದಲಿಗೆ ಅಲ್ಲಿನ ಜನರು ಈ ಅವಳಿ ಸಹೋದರಿಯರನ್ನ ಕಾಳಿ ದೇವಿಯ ಅವತಾರ ಎಂದು ಭಾವಿಸಿದ್ರು.ಈ ಸಹೋದರಿಯರ ತಂದೆ ಬೆಳೆತಾಲ್ ಮಂಡಲ್, ಅವರು ತುಂಬಾ ಬಡವರಾಗಿದ್ದು ದುಡಿಯಲು ಸ್ವಂತ ಭೂಮಿ ಕೂಡ ಇರಲಿಲ್ಲ. ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದ ಆತನ ಅದೃಷ್ಟ, ಈ ಅವಳಿ ಸಹೋದರಿಯರ ಜನನದಿಂದ ಬದಲಾಗಿಹೋಯಿತು. ಈ ಸಹೋದರಿಯರಿಗೆ ಏಳೆಂಟು ವರ್ಷ ಆಗುತ್ತಿದ್ದಂತೆ ಅವರನ್ನ ನೋಡಲು ಬರುತ್ತಿದ್ದ ಜನ ಹಿಂತಿರುಗಿ ಹೋಗುವಾಗ ದೇವರ ಕಾಣಿಕೆಯೆಂದು ಅವರಿಗೆ ತೋಚಿದಷ್ಟು ಹಣವನ್ನ ಕೊಟ್ಟು ಹೋಗುತ್ತಿದ್ದರು. ಹೀಗೆ ಇವರ ಹೆಸರು ಸುತ್ತ ಮುತ್ತಲಿನ ಊರುಗಳಲ್ಲಿ ಪ್ರಸಿದ್ಧಿ ಪಡೆಯಿತು. ಜಾತ್ರೆ ಸಮಾರಂಭಗಳಲ್ಲಿ ಈ ಜೋಡಿಯನ್ನ ಪ್ರದರ್ಶನಕ್ಕೆ ಇಟ್ಟು ಇವರನ್ನ ನೋಡಲು ಬರುವವರಿಗೆ ಟಿಕೆಟ್ ಕೂಡ ನಿಗದಿಪಡಿಸಲಾಗಿತ್ತು. ಹೀಗೆ ವರ್ಷಗಳು ಕಳೆಯುತ್ತಿದ್ದಂತೆ ಇವರನ್ನ ನೋಡಲು ಬರುವವರಿಗೆ ತಲಾ ೧೦ ರೂಪಾಯಿಯಂತೆ ಟಿಕೆಟ್ ದರವನ್ನ ಹೆಚ್ಚು ಮಾಡುತ್ತಾ ಹೋದರು.

ಇನ್ನು ನಗರದಲ್ಲಿದ್ದ ಈ ಅವಳಿ ಸಹೋದರಿಯರ ಅಂಕಲ್ ಒಬ್ಬರು, ಜನರಿಗೆ ಅವರ ಮೇಲಿದ್ದ ಕುತೂಹಲವನ್ನ ಕಂಡು ಇವರನ್ನ ನಗರಗಳಲ್ಲಿ ನಡೆಯುವ ಜಾತ್ರೆಗಳಿಗೆ ಕರೆದೊಯ್ಯುವಂತೆ ಅವರ ತಂದೆಗೆ ಸಲಹೆ ನೀಡುತ್ತಾರೆ. ಮುಂದೆ ತಾವೇ ಸ್ವತಃ ಶೋಗಳನ್ನ ಮಾಡಲು ನಿರ್ಧಾರ ಮಾಡುತ್ತಾರೆ. ಬಳಿಕ ಟೌನ್ ಗಳಲ್ಲಿ ಈ ಸಹೋದರಿಯರನ್ನ ನೋಡಲು ಬರುವವರಿಗೆ ತಲಾ 10 ರೂಪಾಯಿಯಂತೇ ಟಿಕೆಟ್ ದರವನ್ನ ನಿಗದಿ ಮಾಡುತ್ತಾರೆ. ಕೆಲವರು ಭಾವಿಸುವಂತೆ ಇವರು ಶಾಪ ಗ್ರಸ್ಥ ಮಕ್ಕಳು ಅಲ್ಲ, ಅಥ್ವಾ ದೇವರ ಅವತಾರವೂ ಅಲ್ಲ. ಬದಲಿಗೆ ಈ ಅವಳಿ ಸಹೋದರಿಯರು ಕೂಡ ನಮ್ಮ ನಿಮ್ಮಂತಯೇ ಮನುಷ್ಯರು. ಅವರಿಗೂ ಕೂಡ ಎಲ್ಲರಿಗೂ ಇರುವಂತೆಯೇ ಆಸೆ ಆಕಾಂಕ್ಷೆಗಳು, ವಯಸ್ಸಿನ ಸಹಜ ಬಯಕೆಗಳು ಎಲ್ಲವೂ ಇರುತ್ತೆ. ಹೀಗೆ ೪೦ ವರ್ಷಗಳ ಕಾಲ ಸರ್ಕಸ್ ಸೇರಿದಂತೆ ಹಲವಾರು ಶೋಗಳಲ್ಲಿ ಪ್ರದರ್ಶನಗಳನ್ನ ಕೊಡುತ್ತಾ ಜೀವನ ನಡೆಸುತ್ತಾರೆ. ಹೀಗೆ ಈ ಅವಳಿ ಸಹೋದರಿಯರು ಉತ್ತುಂಗದಲ್ಲಿದ್ದಾಗ ಒಂದು ಶೋನಿಂದ ಏಳು ಸಾವಿರದವರೆಗೆ ಗಳಿಕೆ ಮಾಡುತ್ತಿದ್ದರು. ಈಗ ಹೇಳಿ ಸ್ನೇಹಿತರೆ ಸ್ವಂತ ದುಡಿಮೆಯಿಂದ ಬದುಕುತ್ತಿರುವ ಇವರು ಅಂಗವಿಕಲರೇ ಅಂತಾ..

ಇನ್ನು ಸಹಜವೆಂಬಂತೆ ತಮಗೂ ಕೂಡ ಒಬ್ಬ ಸಂಗಾತಿ ಬೇಕು ಎಂಬ ಬಯಕೆ ಇವರಲ್ಲಿ ಮೂಡುತ್ತದೆ. ಆದರೆ ನಾವಿರುವ ಈ ಸ್ಥಿತಿಯಲ್ಲಿ ಇದು ಸಾಧ್ಯವಾ, ನಮ್ಮನ್ನ ಯಾರು ತಾನೇ ಮದುವೆಯಾಗಲು ಸಾಧ್ಯ ಎಂಬ ಹತಾಶೆ ಅವರಲ್ಲಿ ಮೂಡಿದ್ದು ಉಂಟು. ಆದರೆ ಇವರ ಜೀವನದಲ್ಲಿ ಮುಂದೊಂದು ದಿನ ಈ ಬಯಕೆ ನೆರವೇರಿತು. ಹೌದು, ಗಧಾಧರ್ ಎಂಬ ಸಹೃದಯಿ ಇವರ ಬಾಳಿಗೆ ಆಸರೆಯಾಗಿ ನಿಲ್ಲುತ್ತಾರೆ. ಇವರು ಜಾರ್ಖಂಡ್ ನಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರು. ಅವಳಿ ಸಹೋದರಿಯರನ್ನ ಶೋಗಳಲ್ಲಿ ನೋಡಿದ್ದ ೪೦ ವರ್ಷ ವಯಸ್ಸಿನ ಗಧಾಧರ್ ಅವರು, ಇವರೂ ಕೂಡ ನಮ್ಮಂತಯೇ ಮನುಷ್ಯರು, ಅವರ ಬಳಿಗೆ ನಾನು ಬೆಳಕಾಗಬೇಕು ಎಂದು ಯೋಚಿಸಿ ಅವರನ್ನ ಪ್ರೀತಿಸಿ ಮದುವೆಯಾಗುತ್ತಾರೆ. ಇನ್ನು ಪ್ರೀತಿಯ ಫಲವೆಂಬಂತೆ ೧೯೯೩ರಲ್ಲಿ ಇವರಿಗೆ ಮಗುವೊಂದು ಜನಿಸಿದ್ದು, ಬಳಿಕ ಕೆಲವೇ ಸಮಯದಲ್ಲಿ ತೀ’ರಿಹೋಗುತ್ತದೆ. ಅದೇನೇ ಇದ್ದರೂ ಈ ಅವಳಿ ಸಹೋದರಿಯರ ಜೋಡಿ ಇಂದು ಗಧಾಧರ್ ಅವರ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಸ್ನೇಹಿತರೇ, ಇಂತಹವರ ಜೀವನದ ಮಾದರಿ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗುವುದರಲ್ಲಿ ತಪ್ಪಿಲ್ಲ ಅಲ್ಲವೇ..