Advertisements

ನೆನ್ನೆ ತಾನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ ಕನ್ನಡ ಖ್ಯಾತ ನಟ ಇನ್ನಿಲ್ಲ. ಏನಾಗಿತ್ತು ಗೊತ್ತಾ? ಕಂಬನಿ ಮಿಡಿದ ಸ್ಯಾಂಡಲ್ ವುಡ್.

Cinema

ಸ್ನೇಹಿತರೆ ನೆನ್ನೆ ತಾನೆ ಹುಟ್ಟುಹಬ್ಬವನ್ನ ಆಚರಿಸಿಕೊಂಡ ನಟ ತಡರಾತ್ರಿ ನಿಧನರಾಗಿದ್ದಾರೆ. ಹೌದು ಸ್ನೇಹಿತರೆ ಕನ್ನಡದ ಹಿರಿಯ ಖ್ಯಾಟ ನಟ ಸಿದ್ಧರಾಜ್ ಕಲ್ಯಾಣಕರ್ ನೆನ್ನೆ ಕೊನೆಯುಸಿರೆಳೆದಿದ್ದಾರೆ. ಇನ್ನೂ ಸದ್ಯಕ್ಕೆ ಪ್ರೇಮಲೋಕ ಎಂಬ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದರು ಆದರೆ ನೆನ್ನೆ ಸೋಮವಾರ ಧಾರವಾಹಿಯ ಸೆಟ್ ನಲ್ಲಿ ತಮ್ಮ 60 ವರ್ಷದ ಜನ್ಮದಿನವನ್ನು ಆಚರಿಸಿದ್ದರು. ಇನ್ನೂ ಧಾರವಾಹಿಯ ತಂಡದವರು ನಟ ಸಿದ್ದರಾಜ್ ಕಲ್ಯಾಣಕರ್ ಹುಟ್ಟು ಹಬ್ಬವನ್ನು ಆಚರಿಸಿ ಸಂತೋಷದ ಗಳಿಗೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಸಹ ನಟ ಸಿದ್ಧರಾಜ್ ಅವರಿಗೆ ಶುಭಾಶಯಗಳನ್ನು ತಿಳಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

Advertisements

ನಟ ಸಿದ್ಧರಾಜ್ ಮೂಲತಃ ಹುಬ್ಬಳಿಯವರಾಗಿದ್ದು ಶ್ರೀ ಮಂಜುನಾಥ, ಸೂಪರ್, ಬುದ್ದಿವಂತ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅತಿ ಹೆಚ್ಚು ಧಾರವಾಹಿಗಳಲ್ಲಿಯೂ ಅಭಿನಯಸಿದ್ದಾರೆ ಇನ್ನೂ ಈಗ ಖಾಸಗಿ ವಾಹಿನಿಯಯಲ್ಲಿ ಪ್ರಸಾರವಾಗುವ ಗಿಣಿರಾಮ ಮತ್ತು ಪ್ರೇಮಲೋಕ ಧಾರವಾಹಿಗಳಲ್ಲಿ ಆಭಿನಯ ಮಾಡುತ್ತಿದ್ದರು. ಆದರೆ ನೆನ್ನೆಯಷ್ಟೇ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಕಲ್ಯಾಣಕರ್ ಸಿದ್ಧರಾಜ್ ಈ ದಿನ ತಮ್ಮ ಮಡದಿ ಹಾಗೂ ಮಗನನ್ನು ಅಗಲಿದ್ದಾರೆ‌.

ಸ್ಯಾಂಡಲ್ ವುಡ್ ನಟ ಸೃಜನ್ ಲೋಕೇಶ್ ನಿರ್ದೇಶಕ ಬಿ ಸುರೇಶ್ ಅವರು ಸೇರಿದಂತೆ ಹಲವಾರು ಕಿರುತೆರೆಯ ಗಣ್ಯರು ಮತ್ತು ಕಲಾವಿದರು ಸಿದ್ಧರಾಜ್ ಅವರ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಇನ್ನೂ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಸಿಧ್ದರಾಜ್ ಅಗಲಿಕೆಯ ಬಗ್ಗೆ ಪೇಸ್ಬುಕ್ ನಲ್ಲಿ ಪೊಟೊವನ್ನು ಪೋಸ್ಟ್ ಮಾಡುವ ಮೂಲಕ ಅವರ ಬಗ್ಗೆ ಬರೆದಿದ್ದಾರೆ. ಇದು ಅತ್ಯಂತ ದುರಿತ ಕಾಲ ಅನನ್ಯ ರೀತಿಯ ಕಲಾವಿದ, ತುಂಬಾ ಸಜ್ಜನ ಯಾರ ಬಗ್ಗೆಯೂ ಸಹ ಕೆಟ್ಟದಾಗಿ ಮಾತನಾಡಿದವರಲ್ಲ, ಯಾರ ಬಗ್ಗೆಯೂ ಕೋಪಮಾಡಿಕೊಂಡವರಲ್ಲ, ಇವರ ಮುಖದಲ್ಲಿ ಸದಾ ಮುಗುಳುನಗೆ, ಅಪರೂಪದ ಮನುಷ್ಯರಲ್ಲಿ ಇವರು ಒಬ್ಬರು ಎಂದಿದ್ದಾರೆ.

ವಿಧಿಯ ಆಟ ಬಲ್ಲವರು ಯಾರು. ಎಂತವರನ್ನು ಕರೆದುಕೊಂಡು ಹೋಗಿಬಿಡುತ್ತದೆ ಇದ್ದಷ್ಟು ಕಾಲ ಒಳ್ಳೆಯತನದಿಂದ ಇರಬೇಕಷ್ಟೇ. ಒಳ್ಳೆಯತನವೇ ಕೊನೆಗೆ ಉಳಿಯುವುದು. ಉದಾಹರಣೆಗೆ ಸಿದ್ಧರಾಜ್ ಕಲ್ಯಾಣಕುಮಾರ್ ಅವರು ಸಾಕ್ಷಿ. ಸಿದ್ಧರಾಜು ಅಬರ ಕುಟುಂಬಕ್ಕೆ ಆ ದೇವರು ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ . ಆ’ತ್ಮಕ್ಕೆ ಶಾಂತಿಸಿಗಲಿ.