Advertisements

ಸಿದ್ದರಾಮಯ್ಯ ಹೆಂಡತಿ, 2 ಮಕ್ಕಳು, ಸೊಸೆ ಮೊಮ್ಮಕ್ಕಳನ್ನು ಮೊದಲ ಬಾರಿಗೆ ನೋಡಿ! ಸಿದ್ದರಾಮಯ್ಯ ಲೈಪ್ ಸ್ಟೋರಿ..

Kannada Mahiti

ಸಿದ್ಧರಾಮಯ್ಯ ಅಂದ ತಕ್ಷಣ ಅದೆಷ್ಟೋ ಹಸಿದ ಹೊಟ್ಟೆಗಳ ತುಂಬಿಸಿದ ಅನ್ನದಾತ ನೆನಪಾಗುತ್ತಾರೆ. ಸದ್ಯ ವಿಧಾನಸಭಾ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡ್ತಾ ಇರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು? ಸಿದ್ದು ನಡೆದು ಬಂದ ಹಾದಿ, ಪರ್ಸನಲ್ ಲೈಫ್‌ನ ಕತೆಯನ್ನು ಎಳೆ ಎಳೆಯಾಗಿ ಹೇಳ್ತೀವಿ ಕೇಳಿ.. 1948 ಅಗಸ್ಟ್ ತಿಂಗಳಲ್ಲಿ ಮೈಸೂರು ಜಿಲ್ಲೆಯ ಸಿದ್ದರಾಮನಗುಂಡಿಯಲ್ಲಿ ಸಿದ್ದರಾಮಯ್ಯ ಅವರು ಜನಿಸುತ್ತಾರೆ. ಸಿದ್ದರಾಮೇಗೌಡ, ಬೋರಮ್ಮ ದಂಪತಿಗಳ ಮುದ್ದಿನ ಮಗನೇ ಸಿದ್ದರಾಮಯ್ಯ. ಬಾಲ್ಯದಿಂದಲೇ ಕಲೆಯನ್ನ ಕರಗತ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಜಾನಪದ ನೃತ್ಯ, ವೀರಗಾಸೆ, ಡೊಳ್ಳುಕುಣಿತ, ಕಂಸಾಳೆಯಲ್ಲಿ ನೈಪುಣ್ಯತೆ ಪಡೆದುಕೊಂಡಿದ್ರು.

[widget id=”custom_html-3″]

Advertisements

ಇನ್ನೊಂದು ಆಸಕ್ತಿದಾಯಕ ವಿಷಯ ಎಂದರೆ ಸಿದ್ದರಾಮಯ್ಯ ಅವರು 9 ವರ್ಷಗಳ ಕಾಲ ಶಾಲೆಗೆ ಹೋಗಲೇ ಇಲ್ಲ. ನೇರವಾಗಿ 10ನೇ ವಯಸ್ಸಿಗೆ 5ನೇತರಗತಿಗೆ ಶಾಲೆಗೆ ಸೇರಿಕೊಳ್ಳುತ್ತಾರೆ. ಆದರೂ ಓದುದರಲ್ಲಿ ಹಿಂದೆಯೇನೂ ಉಳಿಯಲಿಲ್ಲ. ಬಿಎಸ್ಸಿಯಲ್ಲಿ ಪದವಿ ಪಡೆದು, ನಂತರ ಎಲ್‌ಎಲ್‌ಬಿ ಸಹ ಮಾಡುತ್ತಾರೆ. ನಂತರ ಚಿಕ್ಕ ಬೋರಯ್ಯ ಎಂಬುವವರ ಜೊತೆ ಜ್ಯೂನಿಯರ್ ಲಾಯರ್ ಆಗಿ ಸಹ ಕೆಲಸ ಮಾಡಿದ್ದಾರೆ. ಕಾಲ ಕ್ರಮೇಣ ಅವರೇ ವಕೀಲರಾಗಿಯೂ ಕಾರ್ಯನಿರ್ವಹಿಸಿ 1978ರವರೆಗೆ ವಕೀಲ ವೃತ್ತಿಯನ್ನು ಮಾಡುತ್ತಾರೆ. ಪಾರ್ವತಿ ಎಂಬುವ ಶಾಂತ ಸ್ವಭಾವದ ಹೆಣ್ಣು ಮಗಳನ್ನು ವಿವಾಹವಾದ ಸಿದ್ದರಾಮಯ್ಯ ಅವರಿಗೆ 2 ಗಂಡು ಮಕ್ಕಳಿದ್ದಾರೆ.

[widget id=”custom_html-3″]

ರಾಕೇಶ್ ಹಾಗೂ ಯತೀಂದ್ರ, ಸಿದ್ದರಾಮಯ್ಯ ಅವರ ಮಕ್ಕಳು. ರಾಕೇಶ್ ಬಹು ಅಂಗಾಂಗ ವೈ’ಫಲ್ಯದಿಂದ ನಿ’ಧನರಾದರು. ಯತೀಂದ್ರ ಅವರು ಮೊದಲು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಈಗ ಕೆಲಸಕ್ಕೆ ಗುಡ್ ಬೈ ಹೇಳಿ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಸದ್ಯ ವರುಣಾ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸ್ತಾ ಜನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ವೃತ್ತಿಯಲ್ಲಿ ವಕೀಲರಾಗಿದ್ದ ಸಿದ್ದರಾಮಯ್ಯ ಅವರು ಸಮಾಜವಾದಿ ಸಂಘದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ. ಆರಂಭದಲ್ಲಿ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರು 2ವರ್ಷಗಳ ಕಾಲ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡ್ತಾರೆ.

[widget id=”custom_html-3″]

ನಂತರ ಕಾಂಗ್ರೆಸ್ ಸೇರಿಕೊಂಡು 2013ರಿಂದ 5ವರ್ಷಗಳ ಕಾಲ ರಾಜ್ಯಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡೀತಾರೆ. ಹಸಿವು ಮುಕ್ತ ರಾಜ್ಯ ಮಾಡುವ ಧ್ಯೇಯ ಹೊಂದಿದ್ದ ಅವರು ಇಂದಿರಾ ಕ್ಯಾಂಟೀನ್ ಎಂಬ ವಿಶೇಷ ಯೋಜನೆಯನ್ನು ಅನುಷ್ಟಾನಗೊಳಿಸಿ ಎಷ್ಟೋ ಹಸಿದ ಹೊಟ್ಟೆಗಳನ್ನು ತುಂಬಿಸಿದ್ದಾರೆ. ಈಗಲೂ ಸಹ ಕೊ’ರೊನಾ ಸಂಕಷ್ಟ ಕಾಲದಲ್ಲಿ ಊಟಕ್ಕಾಗಿ ಪರದಾಡುತ್ತಿರುವ ಎಷ್ಟೋ ಜನರಿಗೆ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕವೇ ಹೊಟ್ಟೆ ತುಂಬಿಸುತ್ತಿದೆ. ಅಹಿಂದ ವರ್ಗದವರ ಅಭಿವೃದ್ಧಿಗೆ ನಿರಂತರ ಹೋರಾಡಿದ ನಾಯಕರ ಪೈಕಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಅಗ್ರಸಾಲಿನಲ್ಲಿದೆ. ಪ್ರತಿಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸ್ತಾ ಇರುವ ಸಿದ್ದರಾಮಯ್ಯ ಅವರ ರಾಜಕೀಯ ನಡೆ ಬಗ್ಗೆ ವೈಯಕ್ತಿಕ ಬದುಕಿನ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟಪಡ್ತೀರಾ..

Leave a Reply

Your email address will not be published. Required fields are marked *