ನಮಸ್ತೆ ಸ್ನೇಹಿತರೆ, ಜಾತಿ ಧರ್ಮ ಮತ ಬೇದಗಳನ್ನು ಹೊರತುಪಡಿಸಿ ಮಾತನಾಡುವುದಾದರೆ ಯಾವುದೇ ಅ’ಕ್ರಮ ಆಸ್ತಿ ಚಿಂತೆಯಿಲ್ಲದೆ, ಇನ್ಕಮ್ ಟ್ಯಾಕ್ಸ್ ಚಿಂತೆಯಿಲ್ಲದೆ ಕರ್ನಾಟಕ ರಾಜ್ಯದಲ್ಲಿ ರಾತ್ರಿ ನೆಮ್ಮದಿಯಿಂದ ಮಲಗುವ ಕೆಲವೇ ಕೆಲವು ನಾಯಕರಲ್ಲಿ ಸಿದ್ಧರಾಮಯ್ಯ ಕೂಡ ಒಬ್ಬರು.. ಕರ್ನಾಟಕ ರಾಜಕೀಯ ದಲ್ಲಿ ಮನಸಾಕ್ಷಿಯಾಗಿ ಪ್ರಾಮಾಣಿಕ ಕೆಲಸ ಮಾಡುವವರಲ್ಲಿ ಇವರು ಕೂಡ ಒಬ್ಬರು. ಮಾತು ಒರಟಾದರು ಇವರ ಹೃದಯ ಮಾತ್ರ ಹೂವಿನಂತದ್ದು ಆಗಾದ್ರೆ ಸಿದ್ದರಾಮಯ್ಯ ಅವರು ತಮ್ಮ ಹಳ್ಳಿಯಲ್ಲಿ ಕಟ್ಟಿಕೊಂಡಿರುವ ಅವರ ಮನೆ ಹೇಗಿದೆ ಅಂತ ನೋಡೊಣ..

ಮೈಸೂರು ಜಿಲ್ಲೆ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಅನ್ನುವ ಚಿಕ್ಕ ಹಳ್ಳಿಯಲ್ಲಿ ರೈತನ ಮಗನಾಗಿ ಹುಟ್ಟಿದ್ದ ಸಿದ್ದರಾಮಯ್ಯ. ತಮ್ಮ ಹತ್ತು ವರ್ಷದವರೆಗೂ ಶಾಲೆ ಮೆಟ್ಟಿಲು ಹತ್ತಲಿಲ್ಲ.. ನಂತರ ಶಾಲೆಗೆ ಕಾಲಿಟ್ಟ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ LLB ಮಾಡಿ ಜೂನಿಯರ್ ಲಾಯರ್ ಆಗಿ ಕೆಲಸ ಆರಂಭಿಸಿದರು. ನಂತರ ಕೆಲವರ ಪ್ರಭಾವದಿಂದ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಏಳು ಬೀ’ಳುಗಳನ್ನ ಕಂಡು ಕೊನೆಗೂ ಹಠ ಬಿಡದೆ ಜಯಿಸಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಸಿದ್ದರಾಮಯ್ಯ ಅವರಲ್ಲಿ ಮೆಚ್ಚುವಂತಹ ಒಂದು ಗುಣ ಅಂದರೆ ನಾನು ನಿನ್ನ ಸಂಬಂಧಿ, ದೂರದ ಸಂಬಂಧಿ ಎಂದು ಬಂದು ಆ ಕೆಲಸ, ಈ ಕೆಲಸ ಮಾಡಿಕೊಡಿ ಎಂದು ಅವರನ್ನ ಕೇಳಿದ್ರೆ ಖಂಡಿತವಾಗಿಯೂ ಮಾಡಿಕೊಡುವುದಿಲ್ಲ. ಯಾಕೆಂದರೆ ಸಂಬಧಗಳ ನೆಲೆಯ ಮೇಲೆ ಅವರು ಯಾವತ್ತೂ ಅಧಿಕಾರ ದು’ರು’ಪಯೋಗ ಪಡಿಸಿಕೊಳ್ಳೋದಿಲ್ಲ.. ಆದರೆ ಯಾರೇ ಆದರೂ ಕಷ್ಟ ಅಂತ ಬಂದರೆ ತಮ್ಮ ಕೈ ಮೀರಿ ಸಹಾಯ ಮಾಡ್ತಾರೆ. ಈ ಮನೆ ಸಿದ್ದರಾಮಯ್ಯ ಅವರು ಹುಟ್ಟಿದ ಮನೆ..

ಇನ್ನೊಂದು ಮನೆ ಸಿದ್ದರಾಮಯ್ಯ ಅವರು ತಮ್ಮ ಊರಲ್ಲಿ ಕಟ್ಟಿಸಿರುವ ಮನೆ. ಬಿಡುವಿದ್ದಾಗ ತಮ್ಮ ಹುಟ್ಟೂರು ಸಿದ್ದರಾಮನ ಹುಂಡಿಗೆ ಕುಟುಂಬ ಸಮೇತ ಬರುವ ಸಿದ್ದರಾಮಯ್ಯ ಅಲ್ಲೇ ಒಂದೆರಡು ದಿನ ಇದ್ದು ಬರುತ್ತಾರೆ.. ಇವರ ಕುಟುಂಬದ ಇನ್ನೊಂದು ವಿಶೇಷ ಅಂದರೆ ಯಾರು ಕ್ಯಾಮರಾ ಮುಂದೆ ಹೆಚ್ಚಾಗಿ ಬರುವುದಿಲ್ಲ.. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಒಂದು ಬಾರಿಯೂ ಮೀಡಿಯಾ ಮುಂದೆ ಬಂದಿಲ್ಲ. ತಮ್ಮ ಗಂಡ ಅಧಿಕಾರದಲ್ಲಿ ಇದ್ದಾಗ ತಮ್ಮದೇ ಇನ್ನೊಂದು ದರ್ಬಾರ್ ನಡೆಸುವ ಎಷ್ಟೋ ಹೆಂಡತಿಯರ ಮುಂದೆ ಪಾರ್ವತಿಯವರು ಮಾದರಿಯಾಗಿದ್ದಾರೆ.