Advertisements

ಕಾಫಿ ಕಿಂಗ್ ಸಿದ್ದಾರ್ಥ್ ಅವರ ಮಗನ ಜೊತೆ ಡಿಕೆ ಶಿವಕುಮಾರ್ ಅವರ ಮಗಳ ಮದುವೆಯ ಮಾತುಕತೆ !

News

ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವರಾಗಿರುವ ಎಸ್.ಎಮ್.ಕೃಷ್ಣರವರ ಅಳಿಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಪುತ್ರ ಅಮಾರ್ತ್ಯ ಹೆಗ್ಡೆ ಅವರ ಮದುವೆಯನ್ನ DK ಶಿವಕುಮಾರ್ ಅವರ ಹಿರಿಯ ಪುತ್ರಿಯಾಗಿರುವ ಐಶ್ವರ್ಯ ಜೊತೆ ನಿಚ್ಚಯ ಮಾಡಲಾಗಿದೆ ಎಂದು ಹೇಳಲಾಗಿದೆ. SM ಕೃಷ್ಣರವರ 26 ವರ್ಷದ ಮೊಮ್ಮಗ ಅಮೇರಿಕಾದಲ್ಲಿ ವ್ಯಾಸಂಗ ಮಾಡಿದ್ದು, ತಮ್ಮ ತಾಯಿಯವರ ಜೊತೆ ಕಂಪನಿಯ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

Advertisements

ಇನ್ನು ಡಿಕೆ. ಶಿವಕುಮಾರ್ ಅವರ ದೊಡ್ಡ ಮಗಳಾಗಿರುವ ೨೨ ವರ್ಷದ ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ತನ್ನ ತಂದೆ ಸ್ಥಾಪನೆ ಮಾಡಿರುವ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆಯ ವ್ಯವಹಾರಗಳನ್ನ ನಿರ್ವಹಿಸುತ್ತಿದ್ದಾರೆ. ಎರಡು ಕುಟುಂಬಗಳ ನಡುವೆ ಮದುವೆಗೆ ಸಂಬಂಧ ಪಟ್ಟ ಹಾಗೆ ಅಂತಿಮ ಮಾತುಕತೆ ನಡೆದಿದ್ದು, ಈ ವರ್ಷದ ಒಳಗೆ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

ಇನ್ನು ಇದಕ್ಕೂ ಮೊದಲು ಡಿಕೆ, ಶಿವಕುಮಾರ್ ಹಾಗೂ ದಿವಂಗತ ಸಿದ್ದಾರ್ಥ್ ಅವರ ನಡುವೆ ಸ್ನೇಹ ಸಂಬಂಧವಿದ್ದು, ಸಿದ್ದಾರ್ಥ್ ಅವರು ದುರಂತ ಸಾವಿಗೆ ತುತ್ತಾಗುವ ಮುನ್ನವೇ ಮದುವೆಗೆ ಸಂಬಂದಿಸಿದ ಹಾಗೆ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿತ್ತು ಎಂದು ಹೇಳಲಾಗಿದೆ. ಕಳೆದ ಭಾನುವಾರವಷ್ಟೇ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಎರಡು ಕುಟುಂಬದ ನಡುವೆ ಫೈನಲ್ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.