Advertisements

ಭಿಕ್ಷೆ ಬೇಡಿದ ಹಣದಿಂದ ಈ ಅಜ್ಜಿ ಎಂತಹ ಕೆಲಸ ಮಾಡುತ್ತಿದ್ದಾರೆ ಗೊತ್ತಾ? ನೂರಕ್ಕೆ ಒಬ್ಬರಲ್ಲಿ ಮಾತ್ರ ಈ ಕೆಲಸ ಮಾಡಲು ಸಾಧ್ಯ..

Uncategorized

ನಮಸ್ತೆ ಸ್ನೇಹಿತರೆ, ಸಿಂದೂ ಬೈ ಸಕ್ಬಾಲ್.. ಇವರು ಸಾಮಾನ್ಯ ಮಹಿಳೆಯಲ್ಲ. 68 ವರ್ಷದ ಈ ಮಹಿಳೆಯ ಬದುಕು ಎಲ್ಲರೀಗೂ ಸ್ಪೂರ್ತಿದಾಯಕವಾಗಿದೆ.. ತನ್ನ ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಅನುಭವಿಸಿದರು ಇತರರಿಗಾಗಿ ತಮ್ಮ ಬದುಕನ್ನು ಮುಡುಪಾಗಿ ಇಟ್ಟ ಸಿಂದೂ ಬೈ ಸಕ್ಬಾಲ್ ಅವರ ಜೀವನಗಾತೆ ಅದ್ಬುತವಾಗಿದೆ.. ಅನಾಥ ಮಕ್ಕಳಿಗೆ ಇವರೇ ಪ್ರತ್ಯಕ್ಷ ದೇವತೆ ಎಂದು ಕರೆಯುತ್ತಾರೆ. ಒಬ್ಬರಿಗೆ ಯಾರು ಇಲ್ಲದೇ ಇದ್ದಾಗ ನಾನು ಇರುತ್ತೇನೆ ಅಂತ ಹೇಳುವ ಇವರು ಬಹಳಷ್ಟು ಅನಾಥ ಮಕ್ಕಳ ಬದುಕಿಗೆ ದಾರಿ ದೀಪವಾಗಿದ್ದಾರೆ. ಸಿಂದೂ ಬೈ ಸಕ್ಬಾಲ್ ಅವರಿಗೆ ತಂದೆ ಶಿಕ್ಷಣ ಕೊಡಿಸಲು ಮುಂದಾಗಿದ್ದರು ಆಕೆ ತನ್ನ ಕುಟುಂಬದ ಜವಾಬ್ದಾರಿ ಮತ್ತು ಬೇಗ ಮದುವೆಯಾದ ಕಾರಣದಿಂದ ಅವರು ಹೆಚ್ಚು ವಿದ್ಯಾಭ್ಯಾಸ ಮಾಡಲು ಆಗಲಿಲ್ಲ.

Advertisements

ಕಲಿತಿದ್ದು ಕೇವಲ 4ನೇ ತರಗತಿಯವರೆಗೂ ಮಾತ್ರ10 ವರ್ಷದ ನವ ವಯಸ್ಸಿನಲ್ಲಿ 30 ವರ್ಷದ ವ್ಯಕ್ತಿಯನ್ನ ಮದುವೆಯಾದ್ರೂ. ಆದರೆ ಆ ದುಷ್ಟ ಪತಿ ಆಕೆಗೆ ದೈ’ಹಿ.ಕ ಹಿಂ’ಸೆ ಕೊಟ್ಟು, ತುಂಬಿ ಗ’ರ್ಭಿಣಿ ಆಗಿದ್ದ ಸಮಯದಲ್ಲಿ ಮನೆಯಿಂದ ಹೊರ ಹಾಕಿದ್ದರು.. ಹಸಿವಿನ ಅಡ್ಡಿಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿ ತನ್ನ ತಾಯಿ ಮನೆಗೆ ಹೋದಾಗ ಅಲ್ಲಿಯೂ ಕೂಡ ನಿರಾಸೆ ಕಾದಿತ್ತು. ಹೊಟ್ಟೆ ಪಾಡಿಗಾಗಿ ಹೆಚ್ಚಿನ ಸಮಯವನ್ನ ಭಿಕ್ಷೆ ಮಾಡುವುದಕ್ಕೆ ತೊಡಗಿದ್ದರು.. ಸಮಾಜದಲ್ಲಿ ಬಹಳಷ್ಟು ಮಕ್ಕಳು ಅನಾಥರಿದ್ದಾರೆ. ತಂದೆ ತಾಯಿಗಳನ್ನ ಕಳೆದ ಅನಾಥ ಮಕ್ಕಳು ಜೀವನಕ್ಕಾಗಿ ಪರದಾಡುತ್ತಿದ್ದಾರೆ ಸಕ್ಬಾಲ್ ಅವರು. ಒಬ್ಬರನೊಬ್ಬರನ್ನ ದತ್ತು ಪಡೆಯುತ್ತಿರುವ ಸಕ್ಬಾಲ್ ಅವರು ಈಗ ಅವರನ್ನ ಸಾಕಬೇಕಲ್ಲವೇ ಅದಕ್ಕಾಗಿ ಅವರು ಭಿಕ್ಷೆ ಬೇಡುವುದನ್ನ ಹೆಚ್ಚಿಸಿಕೊಂಡರು..

ದಿನವಿಡೀ ಭಿಕ್ಷೆ ಬೇಡಿ ಮಕ್ಕಳಿಗೆ ಊಟವನ್ನು ಬಡಿಸುತ್ತಿದ್ದಾರೆ. ಈಗೆ ಕಂಡ ಕಂಡ ಅನಾಥ ಮಕ್ಕಳನ್ನೆಲ್ಲಾ ಮನೆಗೆ ಕರೆದುಕೊಂಡು ಬಂದು ಅವರನ್ನ ಸಾಕಲು ತೊಡಗಿದ್ದಾರೆ.. ಕೆಲವೇ ಸಮಯದಲ್ಲಿ ಅವರು ಅನಾಥರ ಮಾತೆಯಾಗಿದ್ದಾರೆ. ಇಲ್ಲಿಯವರೆಗೂ ಅವರು 1400 ಅನಾಥರನ್ನ ಪೋಷಣೆ ಮಾಡುತ್ತಿದ್ದು ಅವರಿಗೆ ಶಿಕ್ಷಣವನ್ನು ಕೊಡಿಸಿ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡಿದ್ದಾರೆ.. ಎಲ್ಲರೂ ಅವರನ್ನ ಮಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆ ಅನಾಥ ಮಕ್ಕಳಲ್ಲಿ ಕೆಲವರು ಡಾಕ್ಟರ್ ಮತ್ತು ವಕೀಲರು, ಇಂಜಿನಿಯರಿಂಗ್ ಗಳು ಕೂಡ ಇದ್ದಾರಂತೆ..

ಸಿಂದೂ ಬೈ ಅವರ ಪ್ರೀತಿ ಮತ್ತು ಸಹಾನುಭೂತಿಯೊಂದಿಗೆ ಈಗ ಸಾವಿರ ಮೊಮ್ಮಕ್ಕಳ ಕುಟುಂಬದ ದೊಡ್ಡ ಕುಟುಂಬವೊಂದನ್ನ ಇವರು ಹೊಂದಿದ್ದಾರೆ. ಈಗಲೂ ಮಕ್ಕಳ ಬಗ್ಗೆ ಈಕೆ ಚಿಂತಿಸುತ್ತಿದ್ದಾರಂತೆ.. ಅವರ ಬದುಕು ಹಲಾವರು ಮಂದಿಗೆ ಸ್ಪೂರ್ತಿಯಾಗಿದೆ ಹಾಗೂ ಅವರ ಬದುಕಿನ ಮರಾಠಿ ಸಿನಿಮಾ ಕೂಡ ಆಗಿದೆ. ಮಕ್ಕಳಿಗಾಗಿ ಇವರು ಸಂಸ್ಥೆಯನ್ನ ನಡೆಸುತ್ತಿದ್ದಾರೆ.. ಸಿಂದೂ ಬೈ ಸಕ್ಬಾಲ್ ಅವರಿಗೆ ಸುಮಾರು 500ಕ್ಕು ಹೆಚ್ಚು ಪ್ರಶಸ್ತಿಗಳು ಕೂಡ ದೊರಕಿವೆ. ಆದರೆ ಈ ಎಲ್ಲಾ ಪ್ರಶಸ್ತಿಗಳಿಗಿಂತ ನನಗೆ ಮಕ್ಕಳ ಭವಿಷ್ಯ ದೊಡ್ಡದು ಎಂದು ಹೇಳಿದ್ದಾರೆ ಸಿಂದೂ ತಾಯಿ.. ಇವರ ಸಾಧನೆ ನಿಜಕ್ಕೂ ಅದ್ಬುತ ಅಲ್ವಾ. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.