Advertisements

ತಿರುಪತಿಯಲ್ಲಿ ಇರುವ ಈ ಜಾಗಕ್ಕೆ ಇದುವರೆಗೂ ಯಾರಿಗೂ ಪ್ರವೇಶವಿಲ್ಲ ಮುಂದೆಯೂ ಸಹ ಬಿಡೋದಿಲ್ಲ.. ಈ ಜಾಗದಲ್ಲಿ ಅಂಥದ್ದೇನಿದೆ ಗೊತ್ತಾ?

Kannada Mahiti

ತಿರುಪತಿ ತಿಮ್ಮಪ್ಪನ ದೇಗುಲುದ ಬಳಿಯಿರುವ ಶಿಲಾತೋರಣದ ಹಿನ್ನಲೆ ಗೊತ್ತಾ? ವೆಂಕಟರಮಣನ ದರ್ಶನ ಪಡೆಯುವ ಜನರಿಗೆ ಶಿಲಾತೋರಣಕ್ಕೆ ಯಾಕೆ ಭೇಟಿಯಿಲ್ಲ.. ನಮಗೆ ಬೇಜಾರಾದಾಗ, ಮನಸ್ಸಿಗೆ ಖುಷಿಯಾದಾಗ ಅಥವಾ ಯಾವುದೋ ಬೇಡಿಕೆಯನ್ನು ಇಟ್ಟು ಅಪ್ಪಾ ಈಡೇರಿಸಪ್ಪಾ, ಅಂತ ಮನವಿ ಮಾಡಲು ಕೆಲವೊಂದು ಸಲ ಏನು ಕಾರಣವಿಲ್ಲದೇ, ಸುಮ್ಮನೆ ಮನತೃಪ್ತಿಗಾಗಿ ನಾವು ದೇವಸ್ಥಾನಕ್ಕೆ ಹೋಗ್ತೀವಿ ಅಲ್ಲವಾ? ಅದರಲ್ಲೂ ಹಿಂದೂಗಳ ಧಾರ್ಮಿಕ ಪುಣ್ಯಕ್ಷೇತ್ರ ತಿರುಪತಿಯಲ್ಲೂ ಸಹ ಹಾಗೇ ವರ್ಷಕ್ಕೆ ಭೇಟಿಕೊಡುವ ಜನಸಂಖ್ಯೆಯಲ್ಲಿ ಕಡಿಮೆಯೇಯಿಲ್ಲ, ಈ ಕೋವಿಡ್ ಕಾರಣದಿಂದ ಜನರ ದೇವಸ್ಥಾನದ ಭೇಟಿ ಸ್ವಲ್ಪ ಕಡಿಮೆಯಾಗಿದೆ ಅಷ್ಟೇ, ಇಲ್ಲವಾದರೇ ದೇಗುಲಗಳು ಎಂದು ತುಂಬಿ ತುಳುಕುತಿತ್ತು..

[widget id=”custom_html-3″]

Advertisements

ಅದರಲ್ಲೂ ತಿಮ್ಮಪ್ಪನ ದೇಗುಲದಲ್ಲಿ ಹರಕೆಗೆ ಪೂಜೆಗೆ ಜನ ಸೇರುತ್ತಲೆ ಇದ್ದರು, ಇದೆಲ್ಲವುದರ ಜೊತೆಗೆ ವೆಂಕಟರಮಣನ ಸನ್ನಿಧಾನಕ್ಕೆ ಹೋದವರಿಗೆ ಅಲ್ಲೇ ಸನಿಹದಲ್ಲಿರುವ ಶಿಲಾನ್ಯಸಕ್ಕೆ ಭೇಟಿ ಕೊಡುವಂತಿಲ್ಲ, ಯಾಕೆ ಗೊತ್ತಾ? 26 ಅಡಿ ಅಗಲ 10 ಅಡಿ ಎತ್ತರವಿರುವ ಈ ಶಿಲಾನ್ಯಸಕ್ಕೆ ಒಂದೆರೆಡು ವರ್ಷಗಳ ಇತಿಹಾಸವಿಲ್ಲ ಸರಿಸುಮಾರು 20 ಲಕ್ಷ ವರ್ಷಗಳ ಗತ ಇತಿಹಾಸವನ್ನು ಹೊಂದಿದೆ, ಇಲ್ಲಿ ರಚನೆಯಾಗಿರುವ ಕಲ್ಲುಗಳು ಸಹ ಯಾವುದೇ ಮಾನವ ನಿರ್ಮಿತ ಡಿಸೈನ್ಸ್ ಅಲ್ಲ, ಬದಲಾಗಿ ಸ್ವಾಭಾವಿಕವಾಗಿದ್ದು. ನೈಸರ್ಗಿಕವಾಗಿದ್ದು. ಇದು ಆಕಾಶ ರಾಜನ ತಮ್ಮ ತೊಂಡಮಾನ್ ಚಕ್ರವರ್ತಿಯ ಕಾಲದಲ್ಲಿ ರಚನೆಯಾಗಿದ್ದು.
ಅಷ್ಟಕ್ಕೂ ಇಲ್ಲಿಗೆ ಯಾಕೆ ಜನರಿಗೆ ಭೇಟಿ ಕೊಡಲು ಬಿಡುವುದಿಲ್ಲ ಎಂಬ ವಿಚಾರ ಬಂದಾಗ ಹಿರಿಯರು ಹಾಗೂ ಜನರು ಕೊಡುವ ಉತ್ತರ ಎನಂದ್ರೆ..

[widget id=”custom_html-3″]

ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗುವ ಮಾರ್ಗವಿದು ಹಾಗಾಗಿ ಜನ ಇಲ್ಲಿಗೆ ಹೋಗಬಾರದು ಅಂತ ಹೇಳುತ್ತಾರೆ. ಇನ್ನು ಪುರಾಣದ ಪ್ರಕಾರ ಶ್ರೀ ವಿಷ್ಣು ವೈಕುಂಠದಿಂದ ಇದೇ ಮಾರ್ಗದಲ್ಲಿ ಬಂದಿದ್ದ ಅಂತ ಹೇಳಲಾಗ್ತದೆ, ಇದನ್ನು ಇಲ್ಲಿಯ ಆಡಳಿತ ಮಂಡಳಿ ಸಹ ನಾಮಫಲಕ ಹಾಗಿದೆ. ಇನ್ನು ವೈಜ್ಞಾನಿಕವಾಗಿ ಯಾಕೆ ಜನರು ಈ ಸ್ಥಳಕ್ಕೆ ಭೇಟಿ ಕೊಡಬಾರದು ಅಂತ ನೋಡಿದಾಗ ಸಂಶೋಧಕರು ಕೊಡುವ ಉತ್ತರನೇ ಬೇರೆ, ಈ ಪ್ರದೇಶದಲ್ಲಿ ಎಲೆಕ್ಟೊ ಮ್ಯಾಗ್ನೆಟಿಕ್ ರೇಡಿಯೇಷನ್ಸ್ ಆಗಾಗ ಉತ್ಪತ್ತಿಯಾಗುತ್ತೆ, ಇದರಿಂದ ನಾವು ಯಾವುದಾದರೂ ಮೊಬೈಲ್ ಅಥವಾ ಕ್ಯಾಮೆರಾ ಎನನ್ನಾದರೂ ಈ ಸ್ಥಳಕ್ಕೆ ಕೊಂಡೊಯ್ದರೇ ಕ್ಷಣಮಾತ್ರದಲ್ಲಿ ಬ್ಯಾಟೆರಿ ಡೆಡ್ ಆಗುತ್ತದೆ ಅಂತ ಹೇಳಲಾಗ್ತಿದೆ..

[widget id=”custom_html-3″]

ಇದಕ್ಕೆ ಪೂರಕವಾಗಿ ಇಲ್ಲಿನ ಜನ ಅಂದ್ರೆ ಈ ಸಿಬ್ಬಂದಿಗಳು ಕೆಲಸ ಮಾಡಲು ಶಿಲಾನ್ಯಸಕ್ಕೆ ಹೋದಾಗ ತಮ್ಮ ತಮ್ಮ ಮೊಬೈಲ್‌ಗಳನ್ನು ಆಫ್ ಮಾಡಿಟ್ಟು ಕೆಲಸ ಮಾಡಲಿಕ್ಕೆ ಬರುತ್ತಾರಂತೆ, ಈ ಎಲ್ಲ ಸೋಜಿಗದ ಕಾರಣಗಳಿಂದ ಇಲ್ಲಿನ ಆಡಳಿತ ಮಂಡಳಿ ಭಕ್ತಾದಿಗಳಿಗೆ ಶಿಲಾನ್ಯಸದ ಭೇಟಿಯನ್ನು ನಿಷಿದ್ಧ ಮಾಡಿದೆ.
ಪ್ರಿಯ ಓದುಗರೇ ಇಲ್ಲಿ ವೈಜ್ಞಾನಿಕವಾದ, ಜೊತೆಗೆ ಭಾವನಾತ್ಮಕವಾದ ಎರಡು ನಂಬಿಕೆಗಳಿವೆ, ವರದಿಗಳಿವೆ ಇಲ್ಲಿ ಯಾವುದನ್ನು ನಂಬಬೇಕು ಎಂಬುವುದು ನಿಮ್ಮವಿವೇಚನೆಗೆ ಬಿಟ್ಟಿದ್ದು..