Advertisements

ನಟಿ ಸಿಂದೂ ಮೆನನ್ ಈಗ ಎಲ್ಲಿದ್ದಾರೆ.. ಏನು ಮಾಡ್ತಿದ್ದಾರೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು.. ಕನ್ನಡ ಚಿತ್ರದಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟು ನಂತರ ನಾಯಕಿಯಾಗಿ ವಿಷ್ಣುವರ್ಧನ್, ದರ್ಶನ್, ಸುದೀಪ್ ಜೊತೆ ನಟಿಸಿ ಸೈ ಎನಿಸಿಕೊಂಡು ಕನ್ನಡವಲ್ಲದೇ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲೂ ನಟಿಸಿರುವ ನಟಿ ಸಿಂದೂ ಮೆನನ್ ಕಡಿಮೆ ಚಿತ್ರಗಳಲ್ಲಿ ನಟಿಸಿದ್ರು ಅವರ ಅದ್ಬುತ ಹಾಗೂ ಸಹಜ ನಟನೆಯ ಮೂಲಕ ಎಲ್ಲರ ಮನಸಲ್ಲಿ ನೆಲೆಸಿದ್ದಾರೆ. ಹಾಗಾದರೆ ಈಗ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯೋಣ. ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲೂ ಹಿಟ್ ಚಿತ್ರಗಳನ್ನು ಕೊಟ್ಟಿರುವ ಸಿಂದೂ ಮೆನನ್ ಬಾರಿ ಬೇಡಿಕೆ ಇದ್ದಾಗಲೇ..

Advertisements

ಚಿತ್ರರಂಗವನ್ನು ತೊರೆದು 2010 ರಲ್ಲಿ ಮದುವೆ ಮಾಡಿಕೊಂಡು ಇಂಗ್ಲೆಂಡ್ ಗೆ ಹೊರಟು ಹೋದರು. ಇಂಗ್ಲೆಂಡ್ ನಲ್ಲಿರುವ ಎನ್ ಆರ್ ಐ ಪ್ರಭು ಅವರನ್ನ ಮದುವೆಯಾದ ಸಿಂದೂ ಮೆನನ್ ಈಗ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರಿಗೆ ಒಬ್ಬ ಮಗಳು ಹಾಗೂ ಮಗನು ಇದ್ದಾನೆ.. ಸಿಂದೂ ಮೆನನ್ ಅವರ ಗಂಡ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉನ್ನತ ಉದ್ದೆಯಲ್ಲಿ ಇದ್ದು‌.. ಸುಂದರ ಸಂಸಾರವನ್ನು ಕಟ್ಟಿಕೊಂಡಿದ್ದಾರೆ ನಟಿ ಸಿಂದೂ ಮೆನನ್.

ಈಗ ಮಕ್ಕಳು ಚಿಕ್ಕವರು ಆಗಿರೋದ್ರಿಂದ ಅವರನ್ನ ಪ್ರೀತಿಯಿಂದ ಬೆಳೆಸುತ್ತಿರುವ ಈ ನಟಿ ಇಂಗ್ಲೆಂಡ್ ನಲ್ಲೇ ಇದ್ದರೂ ಮಕ್ಕಳಿಗೆ.. ಭಾರತೀಯ ಸಂಸ್ಕೃತಿಯನ್ನ ಚಾಚೂ ತಪ್ಪದೇ ಕಲಿಸುತ್ತಿದ್ದಾರೆ ಅನ್ನೋದು ಮೆಚ್ಚುವಂತದ್ದು.‌ ಒಳ್ಳೆಯ ನಟಿ ಆದರೆ ಸಾಲದು ಒಳ್ಳೆಯ ತಾಯಿಯಾಗಬೇಕು, ಒಳ್ಳೆಯ ಹೆಂಡತಿಯಾಗಬೇಕು.. ಆಗಲೇ ಜೀವನ ಸಾರ್ಥಕ ಅಲ್ಲವೇ. ಈ ವಿಷಯದಲ್ಲಿ ನಟಿ ಸಿಂದೂ ಮೆನನ್ ಸಕ್ಸಸ್ ಆಗಿದ್ದಾರೆ.. ನೀವು ಮತ್ತೆ ನಟಿ ಸಿಂದೂ ಮೆನನ್ ಅವರನ್ನ ತೆರೆಯ ಮೇಲೆ ನೋಡಲು ಬಯಸುತ್ತೀರಾ ಹಾಗಾದರೆ ನಿಮ್ಮ ಅನಿಸಿಕೆಯನ್ನು ತಿಳಿಸಿ.