ನಮಸ್ತೆ ಸ್ನೇಹಿತರೆ, ಕನ್ನಡ ಕಿರುತರೆಯ ಅತಿ ದೊಡ್ಡ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ ಮೂಲಕ ಸಾಕಷ್ಟು ಯುವ ಗಾಯಕರು ಸಿನಿಮಾ ರಂಗದಲ್ಲಿ ಅವಕಾಶವನ್ನು ಪಡೆದು ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ.. ಇದೀಗ ಇದೇ ಸಾಲಿಗೆ ಕುರಿಗಾಹಿ ಹನುಮಂತ ಮತ್ತು ಕಂಬದ ರಂಗಯ್ಯ ಸೇರುತ್ತಿದ್ದಾರೆ. ಹಾಗಾದರೆ ಹನುಮಂತ ಮತ್ತು ಕಂಬದ ರಂಗಯ್ಯ ಯಾವ ಸಿನಿಮಾಗೆ ಹಾಡುತ್ತಿದ್ದಾರೆ ಎನ್ನುವದನ್ನ ನೋಡೊಣ.. ಸರಿಗಮಪ ಸೀಸನ್ 15 ರಲ್ಲಿ ಕುರಿಗಾಹಿ ಹನುಮಂತ ಅವರು ಸಿಕ್ಕಾಪಟ್ಟೆ ಪೇಮಸ್ ಆಗಿ ಈತನೇ ವಿಜೇತನಾಗುತ್ತಾನೆ ಎಂದು ಇಡೀ ಕರುನಾಡು ಹೇಳುತಿತ್ತು..

ಆದರೆ ಆತ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದ. ಇದೀಗ ಈ ಬಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ಕಂಬದ ರಂಗಯ್ಯ ಗೆಲ್ಲಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು.. ಆದರೆ ಆತನು ಕೂಡ ಗೆಲ್ಲದಿದ್ದಕ್ಕೆ ಸಾಕಷ್ಟು ವೀಕ್ಷಕರು ಅಸಮಧಾನವನ್ನು ಹೊರಹಾಕಿದ್ದು ಬಹಳ ಸುದ್ದಿಯಾಗಿತ್ತು.. ಹೌದು ಪ್ರತಿಬಾರಿ ಸರಿಗಮಪದಲ್ಲಿ ತುಂಬಾ ಮೋಸ ಮಾಡುತ್ತಿದ್ದಾರೆ ಎಂದು ಇಡೀ ಕರ್ನಾಟಕ ಜನತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದೀಗ ಹನುಮಂತ ಮತ್ತು ಕಂಬದ ರಂಗಯ್ಯ ಅವರಿಗೆ ಒಂದು ಸಿನಿಮಾದಲ್ಲಿ ಹಾಡಲು ಚಾನ್ಸ್ ಸಿಕ್ಕಿದ್ದು..

ಹಾಡನ್ನು ಕೂಡ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಹೊಸಬರ ತಂಡದ ಇನ್ನೂ ಹೆಸರೇ ಇಡದ ಸಿನಿಮಾಗೆ ಈ ಇಬ್ಬರೂ ಒಂದು ಹಾಡಿಗಾಗಿ ತಮ್ಮ ಧ್ವನಿಯನ್ನು ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನೂ ಹನುಮಂತ ಮತ್ತು ಕಂಬದ ರಂಗಯ್ಯ ಅವರು ಸರಿಗಮಪದಲ್ಲಿ ಟ್ರೋಫಿಯನ್ನು ಪಡೆಯದೇ ಇದ್ದರು ಲಕ್ಷಾಂತರ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.. ಇವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಒಳ್ಳೆಯ ಹಾಡುಗಳಿಗೆ ಧ್ವನಿ ಕೊಡಲಿ ಎಲ್ಲರೂ ಆರೈಸೋಣ.