Advertisements

ಸಿಕ್ಕಾಪಟ್ಟೆ ವೈರಲ್ ಆದ ಈ ಗಾಯಕಿ ಯಾರು ಗೊತ್ತಾ? ಎಲ್ಲರ ಸ್ಟೇಟಸ್ ನಲ್ಲೂ ಇವರೇ ಮಿಂಚಿಂಗ್..

Cinema

ನಮಸ್ತೆ ಸ್ನೇಹಿತರೆ, ರಾಬರ್ಟ್ ಸಿನಿಮಾದ ಕಣ್ಣು ಹೊಡೆಯೋಕೆ ತೆಲುಗು ವರ್ಷನ್ ಕಣ್ಣೇ ಅದಿರಿಂದೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೈದರಾಬಾದ್ ನಲ್ಲಿ ರಾಬರ್ಟ್ ಫ್ರೀ ರಿಲೀಸ್ ಇವೆಂಟ್ ನಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದ ಈ ದ್ವನಿ ದೇಶದಲ್ಲೇ ಮೆಚ್ಚುಗೆ ಪಡೆದಿದೆ.. ಆ ದ್ವನಿ. ಗಾಯಕಿ ಮಂಗ್ಲಿ ಅವರದ್ದು ರಾತ್ರೋರಾತ್ರಿ ಕರ್ನಾಟಕದ ಕ್ರಷ್ ಆಗಿರುವ ಗಾಯಕಿ ಈಗ ಅದೇ ದ್ವನಿ ಕೋಟಿ ಕೋಟಿ ಮೊಬೈಲ್ ಗಳ ಸ್ಟೇಟಸ್ ನಲ್ಲಿ ತುಂಬಿ ತುಳುಕಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಕೂಡ ಎಲ್ಲಿ ನೋಡಿದರು ಕಣ್ಣೇ ಅದಿರಿಂದಿ ಸಾಂಗ್ ವೀಡಿಯೋಗಳು ತುಂಬಿ ಹೋಗಿದ್ದು ಸಿಕ್ಕಾಪಟ್ಟೆ ಶೇರ್ ಕೂಡ ಆಗುತ್ತಿದೆ.

Advertisements

ಈಗಾಗಲೇ ಮಂಗ್ಲಿ ಅವರು ಯಾರು ಎಂದು ತಿಳಿದುಕೊಳ್ಳಲು ಜನರು ಹುಡುಕಾಡುತ್ತಿದ್ದಾರೆ.. ಮಂಗ್ಲಿ ಅವರು ಆಂದ್ರಪ್ರದೇಶ ಮೂಲದ ಅನಂತಪುರ ಜಿಲ್ಲೆಯ ಕೋಟೆಯವರು. ಬಂಜಾರ ಸಂಪ್ರದಾಯದ ಮಂಗ್ಲಿ ಶಾಲಾ ದಿನದಿಂದ ಹಾಡನ್ನ ಹಾಡಿ ಸೈ ಎನಿಸಿಕೊಂಡಿದ್ದಾರೆ.. ಆರಂಭದಲ್ಲಿ ಆಲ್ಬಮ್ ನಲ್ಲಿ ಹಾಡುವುದಕ್ಕೆ ಶುರುಮಾಡಿ, ಮುಂದೆ ಲೈವ್ ಪ್ರದರ್ಶನ, ಆ್ಯಂಕರಿಂಗ್, ಡ್ಯಾನ್ಸ್ ಮಾಡುತ್ತಾ ಇಡೀ ಆಂದ್ರಪ್ರದೇಶದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಕೃಷ್ಣ ವರ್ಣದ ಈ ಸುಂದರಿಯ ಮುಖದ ಮೇಲೆ ಹೊಳೆಯುವ ಹಣೆ ಬಟ್ಟು ಇದೆಲ್ಲದರಿಂದ ನೆಟ್ಟಿಗರು ಮಂಗ್ಲಿಯವರಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.. ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದೆ ಹಾಡನ್ನು ಹಾಡಿ ಸಧ್ಯಕ್ಕೆ ಭಾರತದ ಕ್ರಷ್ ಆಗಿದ್ದಾರೆ. ಅಷ್ಟೇ ಅಲ್ಲದೇ ಮಂಗ್ಲಿ ಗಾಯನದ ಜೊತೆಗೆ ನಟನೆ ನೃತ್ಯ ನಿರೂಪಣೆಗೆ ಆಂದ್ರಪ್ರದೇಶದಲ್ಲಿ ಪೇಮಸ್ ಆಗಿದ್ದಾರೆ.. ಪ್ರತೀ ಸೀಸನ್ ನಲ್ಲೂ ಒಂದೊಂದು ಕ್ರಷ್ ಹುಟ್ಟಿಕೊಳ್ಳುತ್ತೆ ಅನ್ನುತ್ತಾರೆ.. ಅದೇ ರೀತಿ ಈ ಬಾರಿ ಮಂಗ್ಲಿ ಅವರ ಸರದಿ. ಸ್ನೇಹಿತರೆ ಮಂಗ್ಲಿ ಹಾಡಿರುವ ಹಾಡಿನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.