Advertisements

ಕಣ್ತುಂಬ ನಿದ್ರೆ,‌ ಒಳ್ಳೆ ಊಟ, ವಿಶ್ರಾಂತಿ ಇಲ್ಲದಷ್ಟು ಬ್ಯುಸಿ. ಈಗ ಎಲ್ಲದಕ್ಕೂ ವಿರಾಮ, ಗಾಯಕ ವಿಜಯ್ ಪ್ರಕಾಶ್.

News

ಸುಮಾರು 25 ದಿನಗಳಿಂದ ಈ ಕರೋನಾ ವೈರಸ್ ಲಾಕ್ ಡೌನ್ ಆಗಿದೆ. ಆದರೆ ಕೆಲವರಿಗೆ ಇದರಿಂದ ತಲೆನೋವಾಗಿದೆ. ಎಲ್ಲಿಗೂ ಹೋಗಲಾರದೆ ಮನೆಯಲ್ಲೇ ಓಡಾಡು, ಊಟ ಮಾಡು, ಮಲಗು ಇದೇ ಆಗಿದೆ ಕೆಲವರ ಜೀವನ. ಇನ್ನೂ ಕೆಲವರು ಮನೆಯ ಕುಟುಂಬದ ಸದಸ್ಯರಿಗೆ ಸಮಯ ಕೊಡದೆ ಇರುವಷ್ಟು ಕೆಲಸದಲ್ಲಿ ನಿರತರಾಗಿದ್ದರು. ಈಗ ಲಾಕ್ ಡೌನ್ ಇಂದ ಯಾವುದೇ ಕೆಲಸಗಳು ಇಲ್ಲದೆ ಮನೆಯಲ್ಲೆ ಇದ್ದು ಕುಟುಂಬದವರ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಅವರಲ್ಲಿ ಗಾಯಕ ವಿಜಯ್ ಪ್ರಕಾಶ್ ಕೂಡ ಒಬ್ಬರು.

Advertisements

ವಿಜಯ್ ಪ್ರಕಾಶ್ ಅವರ ಹೇಳಿಕೆಯ ಪ್ರಕಾರ ಮುಂಬೈಗೆ ಹೋದ ದಿನಗಳಿಂದ ಇಡಿದು ಲಾಕ್ ಡೌನ್ ಆರಂಬ ಆಗುವವರೆಗೂ ವಿಶ್ರಾಂತಿ ಇಲ್ಲದ ಜೀವನವಾಗಿತ್ತು. ಹೌದು ವಿಜಯ್ ಪ್ರಕಾಶ್ ಗಾಯಕ ವೃತ್ತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆ ಅವರಿಗೆ ಒಂದರ ಮೇಲೊಂದು ಅವಕಾಶಗಳು ಬರಿತ್ತಿದ್ದವು. ಆಡಿಯೋ ರೆಕಾರ್ಡಿಂಗ್, ಜಾಹಿರಾತುಗಳಿಗೆ ವಾಯ್ಸ್ ನೀಡುವುದು, ಸಂಗೀತ ಕಾರ್ಯಕ್ರಮಗಳಲ್ಲಿ ಜಡ್ಜ್. ವಿದೇಶಗಳಲ್ಲಿ ಕಾರ್ಯಕ್ರಮಗಳು. ಹೀಗೆ ಬಿಡುವಿಲ್ಲದ ವೃತ್ತಿಯಲ್ಲಿ ಸರಿಯಾದ ನಿದ್ರೆ, ಊಟ, ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ಆಗುತ್ತಿರಲಿಲ್ಲ ಈಗ ಲಾಕ್ ಡೌನ್ ನಿಂದ ತಾಯಿ, ಪತ್ನಿ, ಮಗಳ ಜೊತೆ ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯುವ ಅವಕಾಶ ದೊರಕಿದೆ ಎನ್ನುತ್ತಿದ್ದಾರೆ ವಿಜಯ್ ಪ್ರಕಾಶ್.

ಮೊದಲು ಹೋದ ಕಡೆ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡುತ್ತಿದ್ದ ವಿ‌.ಪಿ ಈಗ ಮನೆಯಲ್ಲಿ ಪತ್ನಿ ಮಾಡಿದ ರುಚಿಯಾದ ಅಡುಗೆಯನ್ನು ಸಂತೋಷವಾಗಿ ಸವಿಯುತ್ತಿದ್ದಾರೆ. ಪತ್ನಿಗೆ ಸಹಾಯ ಮಾಡಲು ಮಗಳೊಂದಿಗೆ ಸೇರಿ ಮನೆ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೆ ಮನೆಯವರ ಜೊತೆ ಸೇರಿ ಚೌಕಾಬಾರ ಆಡುತ್ತಿದ್ದಾರೆ. 3-4 ಗಂಟೆಗಳ ಕಾಲ ನಿದ್ರೆ ಮಾಡುತ್ತಿದ್ದ ವಿ.ಪಿ ಈಗ ಕಣ್ತುಂಬ ನಿದ್ರೆ ಮಾಡುತ್ತಿದ್ದಾರೆ. ಎಷ್ಟೋ ವರ್ಷಗಳ ನಂತರ ಸಂಪೂರ್ಣ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದು ಎಂಜಾಯ್ ಮಾಡುತ್ತಿದ್ದಾರೆ. ವಿಜಯ್ ಪ್ರಕಾಶ್.