Advertisements

ಒಂದು ವರ್ಷ ಅಲ್ಲ ಅಥವಾ ಎರಡು ವರ್ಷ ಅಲ್ಲ ಬರೋಬ್ಬರಿ 28 ವರ್ಷಗಳು! ಇಂತಹ ಅಣ್ಣ‌ನನ್ನು ಹಿಂದೆಂದೂ ನೋಡಿರಲು, ಕೇಳಿರಲು ಸಾಧ್ಯವೇ ಇಲ್ಲಾ.. ತಂಗಿಗೋಸ್ಕರ ಏನು ಮಾಡಿದ್ದಾರೆ ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಅಣ್ಣ ತಂಗಿಯ ಪ್ರೀತಿಗೆ ಕೊನೆಯೇ ಇಲ್ಲ ಅಂತ ಹೇಳಬಹುದು ಹಾಗೆಯೇ ಕೇರಳಾಗೆ ಸೇರಿದ ಈ ಅಣ್ಣ ತಂಗಿಯ ಬಗ್ಗೆ ಇಂದು ನಾನು ನಿಮಗೆ ತಿಳಿಸಿಕೊಡುತ್ತಿದ್ದೇನೆ.. ಕೇರಳಾಗೆ ಸೇರಿದ ಈ ಅಣ್ಣನೇ ಮನು. ಈತನಿಗೆ ಮೀನಾ ಎಂಬ ತಂಗಿಯೂ ಕೂಡ ಇದ್ದಾಳೆ.. ಮನು ಅವರು ಬಾಡಿಗೆಯ ಆಟೋ ಓಡಿಸುತ್ತಾ ಜೀವನ ನಡೆಸುತ್ತಿದ್ದಾರೆ. ಮನು ಅವರು ತನ್ನ ತಂಗಿಯನ್ನ 28 ವರ್ಷಗಳಿಂದ ತನ್ನ ತೋಳಿನಲ್ಲಿ ಸಾಕುತ್ತಿದ್ದಾರೆ.. ಮೀನಾ ಅವರಿಗೆ ಚಿಕ್ಕಂದಿನಿಂದಲೇ ಸೊಂಟದ ಕೆಳಬಾಗ ಸ್ವಾದೀನ ಕಳೆದುಕೊಂಡಿತು. ಇದರಿಂದ ತಂಗಿ ಎದ್ದೇಳಲು ನಿಂತುಕೊಳ್ಳಲು ಆಗುವುದಿಲ್ಲ. ಇದಷ್ಟೇ ಅಲ್ಲದೆ ಅವರಿಗೆ ಕಿವಿಯೂ ಸಹ ಸರಿಯಾಗಿ ಕೇಳಿಸುವುದಿಲ್ಲ..

Advertisements

ಇನ್ನೂ ಮೀನಾ ಅವರಿಗೆ ಏನಾದರೂ ಶಸ್ತ್ರ ಚಿಕಿತ್ಸೆ ಮಾಡಿದರೆ ಪ್ರಾಣಕ್ಕೆ ಅ’ಪಾಯ ಎಂದು ವೈದ್ಯರು ಹೇಳಿದ್ದಾರೆ. ಇದರಿಂದಲೇ ತನ್ನ ಅಣ್ಣನೇ ತಂಗಿಯನ್ನ 28 ವರ್ಷಗಳಿಂದ ತೋಳಿನಲ್ಲಿ ಹೊತ್ತು ಸಾಕುತಿದ್ದಾರೆ.. ಇನ್ನೂ ಮನುವಿಗೆ 25 ವರ್ಷ ಆದಾಗ ಆತನ ಸಂಬಂಧಿಕರು ಮದುವೆ ಮಾಡಿಕೊಳ್ಳಲು ಹೇಳಿದ್ದಾರೆ. ಆದರೆ ಮನು ಅವರು ಮಾತ್ರ ಯಾವುದೇ ಕಾರಣಕ್ಕೂ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರಂತೆ.. ಅಕಸ್ಮಾತ್ ನಾನು ಮದುವೆ ಮಾಡಿಕೊಂಡರೆ ನನ್ನ ತಂಗಿಯನ್ನು ಮಗುವಿನ ರೀತಿ ನೊಡಿಕೊಳ್ಳಬೇಕು, ಅಂತಹ ಹೆಣ್ಣು ಸಿಕ್ಕರೆ ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ ಎಂದು ಹೇಳಿದ್ದ ಮನುವಿಗೆ ಅಂತಹ ಹೆಣ್ಣು ಸಿಕ್ಕಿದ್ದಾರಂತೆ.

ತಿರುವನಂತಪುರಂಗೆ ಸೇರಿದ ಕೌನ್ಸಿಲರ್ ರಮ್ಯ ಅವರು ಮೀನಾ ಅವರಿಗೆ ತಾಯಿಯಾಗಿ ಹಾಗೂ ಮನುವಿಗೆ ಹೆಂಡತಿಯಾಗಿ ನಾನಿದ್ದೇನೆ ಎಂದು ಹೇಳಿ ಮದುವೆಯಾಗಿದ್ದಾರೆ.. ಇನ್ನೂ ಆ ಮದುವೆಯಲ್ಲಿ ಇವರ ಪೊಟೊಗಳನ್ನು ತೆಗೆಯಲಾಗಿದೆ. ಸ್ನೇಹಿತರೆ ನಿಜಕ್ಕೂ ನಾನಂತೂ ಮೂಕವಿಸ್ಮಿತನಾದೆ ಅಣ್ಣತಂಗಿಯ ಬಾಂಧವ್ಯ ನಿಜಕ್ಕೂ ಗ್ರೇಟ್.. ಮೀನಾ ಅವರಿಗೆ ಇಂತಹ ಒಬ್ಬ ಸಹೋದರ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯ ಇರಬೇಕು ಅನಿಸುತ್ತದೆ.. ಎಲ್ಲಾ ತಂಗಿಯಂದಿರಿಗೂ ಇಂತಹ ಸಹೋದರ ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ..

ಕೆಲವರಂತೂ ಆಸ್ತಿ ಪಾಸ್ತಿಗಳ ವಿಚಾರಕ್ಕೆ ಜೊತೆಯಾಗಿ ಹುಟ್ಟಿದವರ ಜೊತೆಯೇ ದ್ವೇಷವನ್ನು ಕಟ್ಟಿಕೊಳ್ಳುವಂತಹ ಕಾಲವಿದು.. ಇದರ ನಡುವೆ ಮನು ಮತ್ತು ಮೀನಾ ಅವರ ಬಾಂಧವ್ಯದ ಬಗ್ಗೆ ಎಷ್ಟು ಹೇಳಿದರು ಸಾಲದು. ಹಾಗೆ ಇದರ ಜೊತೆ ಒಬ್ಬ ಹೆಣ್ಣು ಇನ್ನೊಂದು ಹೆಣ್ಣಿನ ಜೀವನದ ಬಗ್ಗೆ ಯೋಚನೆ ಮಾಡಿ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಮನು ಅವರನ್ನು ಮದುವೆಯಾದ ರಮ್ಯ ಅವರು ಕೂಡ ಮೇಲುಗೈ..  ಇನ್ನೂ ಮೀನಾ ಅವರ ಸಹೋದರ ಮನು ಹಾಗು ಅತ್ತಿಗೆ ರಮ್ಯ ಅವರಿಗೆ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸ್ನೇಹಿತರೆ ಈ ತಂಗಿ ಅಣ್ಣ ಅತ್ತಿಗೆಯ ನಡುವಿನ ಬಾಂಧವ್ಯದ ಬಗ್ಗೆ ನೀವೇನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ..