Advertisements

ರಾಮ ಸೀತೆಯನ್ನು ಕಾಡಿಗೆ ಬಿಡಲು ಕಾರಣ, ಬಟ್ಟೆ ಹೊಗೆಯುವ ಅಗಸನಲ್ಲ. ಮತ್ಯಾರು ಗೊತ್ತಾ? ಸೀತೆ ಮಾಡಿದ ತಪ್ಪೇನು ನೋಡಿ.

Adyathma

ನಮಸ್ತೆ ಸ್ನೇಹಿತರೆ ನಿಮಗೆಲ್ಲ ತಿಳಿದುರುವ ಹಾಗೆ ಅಗಸನ ಕಾರಣದಿಂದ ರಾಮ ಸೀತೆಯನ್ನು ಕಾಡಿಗೆ ಬಿಡಲು ಕಾರಣವಾಯಿತು ಎಂದು ಆದರೆ ರಾಮನು ಸೀತೆಯನ್ನು ಕಾಡಿಗೆ ಬಿಡಲು ಇದರ ಹಿಂದೆ ಇನ್ನೊಂದು ಮುಖ್ಯ ಕಾರಣ ಇದೆ. ಅದೇ ಸೀತೆಗೆ ಇದ್ದ ಶಾಪ. ಈ ಶಾಪವನ್ನು ಯಾರು ಕೊಟ್ಟರು ಯಾವ ಕಾರಣಕ್ಕಾಗಿ ಅನ್ನೋದನ್ನ ತಿಳಿಯೋಣ. ಹೌದು ಸ್ನೇಹಿತರೆ ಸೀತೆ ಆಗಿನ್ನೂ ಚಿಕ್ಕವಳು. ಆಗ ಪಂಚವರ್ಣದ ಗಿಳಿ ಜೋಡಿಯೊಂದು ಹಾರಿ ಬಂದು ಮರದ ಮೇಲೆ ಕುಳಿತಿತ್ತು . ಸೀತೆ ಆಟ ಮರೆತು ಗಿಳಿಗಳನ್ನೇ ನೋಡುತ್ತಾ ನಿಂತಳು. ಗಿಳಿಗಳು ಮಾತಾಡಿಕೊಳ್ಳುತ್ತಿದ್ದವು. ರಾಮ ಜಾನಕಿಯನ್ನು ಮದುವೆಯಾಗುತ್ತಾನಾ? ಹೆಣ್ಣು ಗಿಳಿ ಕೇಳಿತು.

ಸೀತೆಯ ಕಿವಿ ಚುರುಕಾಯಿತು. ಹೌದು ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರರು ಮಿಥಿಲೆಗೆ ಕರೆತರುತ್ತಾರೆ. ಇಲ್ಲಿ ರಾಮ ಶಿವಧನಸ್ಸನ್ನು ಭೇದಿಸಿ ಜಾನಕಿಯನ್ನು ಮದುವೆಯಾಗುತ್ತಾನೆ. ಸೀತೆಗೆ ಗಿಳಿಗಳು ತನ್ನ ಬಗ್ಗೆಯೇ ಮಾತನಾಡಿಕೊಳ್ಳುತ್ತಿವೆ ಎಂದು ಖಚಿತವಾಯಿತು. ಸಖಿಯರನ್ನು ಕರೆದು ಗಿಳಿಗಳನ್ನು ಹಿಡಿಯಲು ಹೇಳಿದಳು. ಸಖಿಯರು ಹೆಣ್ಣು ಗಿಳಿಯನ್ನು ಹಿಡಿದರು. ಗಂಡು ಗಿಳಿ ಹಾರಿ ಮರದ ಮೇಲೆ ಕುಳಿತು ಕೊಂಡಿತು. ಭಯದಿಂದ ತರತರ ನಡುಗುತ್ತಿದ್ದ ಗಿಳಿಯನ್ನು ಕಂಡು ಸೀತೆ ನೀನು ಭ,ಯಪಡಬೇಕಾದ ಅಗತ್ಯವಿಲ್ಲ. ನಿನಗೇನೂ ಅಪಾ,ಯ,ವಿಲ್ಲ ಎಂದು ಹೇಳಿದಳು.

Advertisements

ನೀನು ನನ್ನ ಭವಿಷ್ಯ ಹೇಳಿಬಿಡು ಬಿಟ್ಟುಬಿಡುತ್ತೇನೆ ಎಂದು ಸೀತೆ ಹೆಣ್ಣು ಗಿಳಿಗೆ ಹೇಳಿದಳು. ನನಗೆ ಭವಿಷ್ಯ ಹೇಳಲು ಬರುವುದಿಲ್ಲ ಎಂದು ಹೇಳಿತು ಗಿಳಿ. ಹಾಗಾದರೆ ರಾಮ ಜಾನಕಿಯರ ಮದುವೆ ಬಗ್ಗೆ ಹೇಗೆ ಮಾತನಾಡುತ್ತಿದೀರಿ ಎಂದು ಸೀತೆ ಕೇಳಿದಳು . ಅದಾ ನಾವು ವಾಸಿಸುವ ಮರದ ಪಕ್ಕದ ಆಶ್ರಮದಲ್ಲೇ ವಾಲ್ಮೀಕಿ ಮಹರ್ಷಿಗಳಿದ್ದಾರೆ. ಅವರು ಭವಿಷ್ಟ ಬಲ್ಲವರು. ಅವರು ರಾಮನ ಕಥೆ ಬರೆದಿದ್ದಾರೆ ಅವರ ಶಿಷ್ಯರು ಅದನ್ನು ಹಾಡುತ್ತಾರೆ. ಅದನ್ನೇ ಮಾತನಾಡಿಕೊಂಡೆವು. ಸೀತೆಗೆ ನಂಬಿಕೆ ಬರಲಿಲ್ಲ ಆದರೂ ಕೇಳಿದಳು. ಆಯಿತು ಮುಂದೇನಾಯಿತು ಎಂದು ಸೀತೆ ಕೇಳುತ್ತಾಳೆ ಅದಕ್ಕೆ ಗಿಳಿ ಅವರ ಬಗ್ಗೆ ನಿನಗೇಕೆ ಕುತೂಹಲ? ಯಾಕೆಂದರೆ ಆ ಜಾನಕಿ ನಾನೇ ಸೀತೆ ಹೇಳಿದಳು. ಗಿಳಿ ಬೆಚ್ಚಿಬಿದ್ದು ನನ್ನ ಮಾತು ನಂಬು ರಾಜಕುಮಾರಿ, ನನಗೆ ಮುಂದಿನ ಕಥೆ ತಿಳಿಯದು, ನನ್ನ ಬಿಟ್ಟುಬಿಡು ಎಂದು ಹೇಳಿತು. ಸಾಧ್ಯವೇ ಇಲ್ಲ ಎಂದು ದೃಢವಾಗಿ ಹೇಳಿದಳು ಸೀತೆ.

ಆಗ ಗಂಡು ಗಿಳಿ ಬಂದು ರಾಜಕುಮಾರಿ ಮುಂದಿನ ಕಥೆ ನಾವು ಕೇಳಿಲ್ಲ. ಕೇಳಿ ಬಂದು ನಿನಗೆ ಹೇಳುತ್ತೇವೆ. ಈಗ ಬಿಟ್ಟುಬಿಡು. ನನ್ನ ಪತ್ನಿ ಗರ್ಭಿಣಿ, ಅವಳಿಗೆ ತೊಂದರೆ ಕೊಡಬೇಡ ಎಂದು ಹೇಳಿತು . ಆದರೂಸೀತೆ ಬಿಡಲಿಲ್ಲ. ಇನ್ನೂ ಬಿಗಿಯಾಗಿ ಹಿಡಿದುಕೊಂಡಳು. ಬೆದರಿಹೋಗಿದ್ದ ಹೆಣ್ಣು ಗಿಳಿ, ತಪ್ಪಿಸಿಕೊಳ್ಳಲು ಕಾಲಿನ ಉಗುರಿನಿಂದ ಪರಚಿತು. ಸೀತೆ ಹಾರಿ ಹೋಗದಂತೆ ಬಲವಾಗಿ ಅದರ ಕು,ತ್ತಿಗೆಯನ್ನು ಹಿಡಿದು ತನ್ನತ್ತ ತಿರುಗಿಸಿಕೊಂಡಳು. ಆಗ ಅದರ ಕ,ತ್ತು ಮುರಿದು ಹೋಯಿತು. ಅಯ್ಯೋ ಪಾ,ಪಿ, ನಾನು ಗರ್ಭಿಣಿಯಾಗಿರುವಾಗ ನನ್ನ ಗಂಡನಿಂದ ಅಗಲುವಂತೆ ಮಾಡಿದಂತೆಯೇ ನೀನು ಗರ್ಭಿಣಿಯಾಗಿರುವಾಗ ನಿನ್ನ ಗಂಡನಿಂದ ಅಗಲುವಂತಾಗಲಿ ಎಂದು ಹೆಣ್ಣು ಗಿಳಿ ಶಪಿಸಿ ಪ್ರಾ,ಣ ಬಿಟ್ಟಿತು. ಗಂಡು ಗಿಳಿ ಕೋಪ, ದುಃಖದಿಂದ ಸೀತೆಯ ಮೇಲೆ ಕೋಪ ಕಾರುತ್ತಾ ನೀರಿಗೆ ಬಿದ್ದು ಪ್ರಾ,ಣ ಬಿಟ್ಟಿತು. ಸೀತೆಯ ಮೇಲಿನ ದ್ವೇಷದಿಂದ ಮುಂದೆ ಗಿಳಿ ಆಗಸನಾಗಿ ಹುಟ್ಟಿ, ರಾಮ ಸೀತೆಯನ್ನು ತ್ಯಜಿಸಲು ಕಾರಣವಾಯಿತು.