Advertisements

ವಿಶ್ವದ ಏಕೈಕ ನೀರಿನಲ್ಲಿ ಮಲಗಿರುವ ಹನುಮಂತನ ವಿಗ್ರಹ ಎಲ್ಲಿದೆ ಗೊತ್ತಾ? ಬಹಳ ಪವರ್ ಫುಲ್..

Temples

ಪ್ರಿಯ ಓದುಗರೆ ನಾವು ಆಂಜನೇಯನ ಮೂರ್ತಿಯನ್ನು ನಿಂತಿರುವಂತೆ, ಬೆಟ್ಟ ಹೊತ್ತು ನಡೆಯುವಂತೆ, ತಪಸ್ಸಿಗೆ ಕುಳಿತ ಹಾಗೂ ಮೊಳಕಾಲೂರಿ ಕುಳಿತ ಭಂಗಿಯಲ್ಲಿ ನೀವು ನೋಡಿದ್ದೀರಿ. ಆದರೆ ಈ ಪ್ರದೇಶದಲ್ಲಿರುವ ಆಂಜನೇಯಸ್ವಾಮಿ ಮಲಗಿದ ಭಂಗಿಯಲ್ಲಿ ಇದ್ದಾನೆ. ಮಲಗಿದ ಆಂಜನೇಯ ಎಂದು ಅಚ್ಚರಿಯೇ? ಹೌದು ಇಲ್ಲಿಯ ಆಂಜನೇಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ವಿಶೇಷತೆ ಏನು? ಸಾಮಾನ್ಯವಾಗಿ ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಆಂಜನೇಯಸ್ವಾಮಿ ನಿಂತಿರುತ್ತಾನೆ ಇಲ್ಲ ಕುಳಿತಿರುತ್ತಾನೆ. ಆದರೆ ಈ ದೇವಸ್ಥಾನದಲ್ಲಿ ಆಂಜನೇಯ ಮಲಗಿರುವ ಭಂಗಿಯಲ್ಲಿದ್ದಾನೆ. ಈತನನ್ನು ಎಬ್ಬಿಸಲು ಭಕ್ತಾದಿಗಳು, ತಪಸ್ವಿಗಳು ಯತ್ನಿಸಿ ವಿಫಲರಾಗಿದ್ದಾರೆ. ಈ ಆಂಜನೇಯನ ಪವಾಡಗಳು ಅಪಾರ. ಕೇವಲ ಭಕ್ತರ ಕುಂಕುಮಾರ್ಚನೆ ಇಂದ ಸಂತೃಪ್ತನಾಗುವ ಆಂಜನೇಯಸ್ವಾಮಿಯ ಕ್ಷಣಾರ್ಧದಲ್ಲಿ ಅವರ ಬೇಡಿಕೆಯನ್ನು ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ. ಅಷ್ಟಕ್ಕೂ ಈ ದೇವಸ್ಥಾನ ಎಲ್ಲಿದೆ ಅಂತೀರಾ? ಅದು ಭಾರತ ಉತ್ತರಪ್ರದೇಶದ ಪ್ರಯಾಗದಲ್ಲಿದೆ.

[widget id=”custom_html-3″]

Advertisements

ವೇದ ಪುರಾಣಗಳಲ್ಲಿ ಈ ನಗರದ ಉಲ್ಲೇಖವಿದೆ. ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಬ್ರಹ್ಮದೇವ ಮೊಟ್ಟಮೊದಲ ಬಾರಿಗೆ ಇದೆ ಸ್ಥಳದಲ್ಲಿದ್ದ ಯಾಗ, ಯಜ್ಞ ಮಾಡಿದನಂತೆ.ಆದ್ದರಿಂದ ಈ ಸ್ಥಳಕ್ಕೆ ಪ್ರಯಾಗ ಎಂದು ಹೆಸರು ಬಂದಿತ್ತು. ಹಿಂದಿಯಲ್ಲಿ ಪ್ರಯಾಗ ಎಂದರೆ ತ್ರಿವೇಣಿ ಸಂಗಮ ಎಂದರ್ಥ. ಗಂಗಾ, ಯಮುನಾ ಮತ್ತು ವ್ಯಾಸರ ಶಾಪದಿಂದ ಗುಪ್ತಗಾಮಿನಿಯಾಗಿ ಹರಿಯುವ ಸರಸ್ವತಿ ನದಿಯ ಸಂಗಮವೇ ಈ ಪ್ರಯಾಗ. 12 ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ಮತ್ತು ಅರ್ಧ ಕುಂಭಮೇಳ ನಡೆಯುತ್ತದೆ. ಇಲ್ಲಿಯ ಆಂಜನೇಯ ಸ್ವಾಮಿ ನೋಡಲು ಅತಿ ಭವ್ಯವಾದ ಮತ್ತು ಕಾಂತಿಯುತ ದಿಂದ ಕೂಡಿದ್ದಾನೆ. ಇದು ವೀರ ಮುದ್ರೆಯಲ್ಲಿ ಇದ್ದು, ದೊಡ್ಡ ಬಾಹುಗಳು ಮತ್ತು ಕಾಲುಗಳು ಇದ್ದು ‘ಪಡೆ ಹನುಮಾನ್ ಜಿ ‘ ಎಂದು ಪ್ರಸಿದ್ಧವಾಗಿದ್ದಾನೆ. ಶಾಯಸನಅದಲ್ಲಿರುವ ಈ ಪಡೆ ಆಂಜನೇಯನಿಗೆ ಭಕ್ತರು ಕುಂಕುಮರ್ಚನೆ ಮಾಡಿದರೆ ಕ್ಷಣರ್ಧದಲ್ಲಿ ಒಳಿತಾಗುತ್ತದೆ ಎಂದು ನಂಬಿಕೆ ಇದೆ.

[widget id=”custom_html-3″]

ಇಂದಿಗೂ ಮಕ್ಕಳಿಲ್ಲದವರು ಇಲ್ಲಿ ಬಂದು ಹರಕೆ ಹೊರುತ್ತಾರೆ ಅಪರೂಪದಲ್ಲಿ ಅಪರೂಪ ಆಂಜನೇಯ ಭಂಗಿ. ಈ ದೇವಸ್ಥಾನವು ಅಷ್ಟೇ ವಿಶೇಷತೇಗಳಿಂದ ಕುಡಿದೆ. ಈ ಪಡೆ ಹನುಮಾನ್ ಬಲ ಪಾದದ ಕೆಳಗೆ ಐರಾವಣ ಪ್ರತಿಮೆ ಇದೆ.ಹನುಮಾನ್ ಈತನ ಕೆಟ್ಟ ಕಾರ್ಯ ಮತ್ತು ಗುಣಗಳನ್ನು ಮೆಟ್ಟಿ ನಿಂತಿರುವ ಸಂಕೇತವಾಗಿದೆ.ಹಾಗೆ ಎಡ ಕಾಲದ ಬಳಿ ಇಚ್ಚಾಶಕ್ತಿ ದೇವಿ ಕಾಮದೇವಿ ಪ್ರತಿಮೆಯಿದೆ. ಬಂದ ಭಕ್ತರ ಹರಕೆ ತೀರಿಸುವ ದೇವರು ಇವರಗಿದ್ದಾರೆ. ಈ ದೇವಸ್ಥಾನದ ಬಳಿ ರಾಮಲಕ್ಷ್ಮಣರ ಗುಡಿಗಳಿವೆ. ಇನ್ನು ಪ್ರಯಾಗದಲ್ಲಿ ಪಡೆ ಹನುಮಾನ್ ಜಿ ಹೇಗೆ ನೆಲೆಸಿದ ಎಂದು ನೋಡುವುದಾದರೆ, ಒಬ್ಬ ವ್ಯಾಪಾರಿ ಈ ಮೂರ್ತಿಯನ್ನು ತನ್ನ ಊರಲ್ಲಿ ಸ್ಥಾಪಿಸಲು ದೋಣಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದೋಣಿ ಪ್ರಯಾಗದ ಬಳಿಬಂದು ಮುಳುಗಿದಂತೆ. ಮೇಲೆತ್ತಲು ವ್ಯಾಪಾರಿ ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲವಂತೆ.

[widget id=”custom_html-3″]

ಕೊನೆಗೆ ಆ ವ್ಯಾಪಾರಿ ಆಂಜೆನೇಯನಿಗೆ ಇಲ್ಲಿ ನೆಲೆಸಲು ಮನಸಿಗೆ ಎಂದು ತಿಳಿದು ಅಲ್ಲಿಯೇ ಬಿಟ್ಟರಂತೆ. ಆಂಜನೇಯಸ್ವಾಮಿ ಪ್ರಯಾಗದ ನೀರಿನ ಆಳದಲ್ಲಿ ಹೇಗೆ ಮಲಗಿದನು ಅದೇ ರೂಪದಲ್ಲಿ ಮೇಲೆ ವಿಗ್ರಹವನ್ನು ಸ್ಥಾಪಿಸಿ, ಸುಂದರ ದೇವಸ್ಥಾನವನ್ನು ಕಟ್ಟಿಸಿದರೆಂದು ಇದು ಹೇಳಲಾಗುತ್ತಿದೆ. ಈ ದೇವರ ದರ್ಶನ ಪಡೆಯಲು ಭೂಮಿಯಿಂದ 15 ಮೀಟರ್ ಕೆಳಗಿಳಿದು ದರ್ಶನ ಪಡೆಯಬೇಕು. ವರ್ಷಕ್ಕೆ ಎರಡು ಬಾರಿ ಗಂಗಾ ನದಿಯಲ್ಲಿ ಈ ದೇವಸ್ಥಾನ ಮುಳುಗುತ್ತಿದ್ದು, ಹೀಗೆ ಮುಳುಗಿದ್ದಾಗ ಅದು ಲೋಕಕಲ್ಯಾಣದ ಸಂಕೇತ ಎಂದು ಪ್ರತೀತಿ. ಇದು ಜಾತಿ ಧರ್ಮಗಳನ್ನು ಮೀರಿದ ದೇವಸ್ಥಾನವಾಗಿದೆ. ಮುಸ್ಲಿಂ ಬಂದುಗಳು ಬಂದು ಇಲ್ಲಿ ಕುಂಕುಮ ಅರ್ಚನೆಯನ್ನು ಮಾಡುವುದನ್ನು ಕಾಣಬಹುದಾಗಿದೆ. ನೀವು ಕೂಡಾ ಒಮ್ಮೆ ಈ ಪಡೆ ಹನುಮನ ಜಿ ದೇವರ ದರ್ಶನ ಪಡೆದು ಪುನೀತರಾಗಿ.

[widget id=”custom_html-3″]