Advertisements

ಚಪ್ಪಲಿ ಅಂಗಡಿಯಲ್ಲಿ ನಡೆದ ಮನಕಲಕುವ ಘಟನೆ.. ನಾವು ಕಲಿಯೋದು ತುಂಬಾನೆ ಇದೆ.

Inspire Kannada Mahiti

ನಮಸ್ತೆ ಸ್ನೇಹಿತರೆ, ಚಪ್ಪಲಿ ಅಂಡಗಿಯಲ್ಲಿ ನಡೆದ ಒಂದು ಮನಕಲುಕುವ ಘಟನೆಯನ್ನು ನೋಡಿ ನಾವು ಕಲಿಯೋದು ತುಂಬಾನೆ ಇದೆ.. ಇನ್ನೂ ಆ ಘಟನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಾನೊಂದು ಚಪ್ಪಲಿ ಅಂಗಡಿಗೆ ಹೋದೆ.. ಆ ಅಂಗಡಿಯವರು ನನ್ನನ್ನು ಗೌರವದಿಂದ ಒಳಗೆ ಆಹ್ವಾನಿಸಿದರು. ನಂತರ ಕುಳಿತುಕೊಳ್ಳಲು ಹೇಳಿ ಚಪ್ಪಲಿಗಳನ್ನು ತೋರಿಸಲು ಆರಂಭಿಸುತ್ತಾರೆ. ಪ್ರತಿಯೊಂದು ಚಪ್ಪಲಿ ಜೊತೆಯನ್ನು ಸ್ವತಃ ತನ್ನ ಕಾಲಿಗೆ ಹಾಕುತ್ತಾರೆ.. ನಂತರ ನನಗೆ ಯಾಕೋ ತುಂಬಾ ಕಷ್ಟ ಅನಿಸಿತು. ನೀವು ಆ ರೀತಿ ಕಾಲುಗಳನ್ನು ಹಿಡಿದು ಚಪ್ಪಲಿಗಳನ್ನು ಹಾಕುತ್ತಿದ್ದರೆ ಮನಸ್ಸಿಗೆ ನೋವಾಗುತ್ತದೆ..

Advertisements

ನೀವು ತೆಗೆದು ಕೊಡಿ ನಾನು ಹಾಕಿಕೊಳ್ಳುತ್ತೇನೆ ಎಂದು ಹೇಳಿದೆ. ಅದಕ್ಕೆ ಆತ ಪರವಾಗಿಲ್ಲ ಬಿಡಿ ನಿಮಗೆ ಇಷ್ಟವಾದ ಚಪ್ಪಲಿ ನೋಡಿ ತೆಗೆದುಕೊಂಡು ಹೋಗಿ.. ನಿಮಗೆ ಸಂತೋಷವಾದರೆ ಅಷ್ಟೇ ಸಾಕು ಎಂದು ಹೇಳುತ್ತಾರೆ.. ಅದಕ್ಕೆ ನಾನು ಮನುಷ್ಯರೇ ನೀವು ಮನುಷ್ಯರೇ ನೀವು ಈ ರೀತಿ ಕಾಲುಗಳನ್ನು ಹಿಡಿದು ಚಪ್ಪಲಿಗಳನ್ನು ಹಾಕಿ ತೋರಿಸೋದು ಸ್ವಲ್ಪ ಮುಜುಗರ ಅನಿಸುತ್ತದೆ ಅಂತ ಹೇಳಿದೆ. ಅದಕ್ಕೆ ಅವರು ಹೇಳಿದ ಮಾತುಗಳನ್ನು ಕೇಳಿ ನಾನು ಒಂದು ಕ್ಷಣ ಏನು ಮಾತಾಡದೇ ಮೌನವಾಗಿಬಿಟ್ಟೆ.. ಈ ಅಂಗಡಿಯಲ್ಲಿ ನನ್ನ ಜವಾಬ್ದಾರಿ.

ಅಂಗಡಿ ಹೊರಗೆ ನೀವು ಕೋಟಿ ರೂಪಾಯಿಗಳನ್ನು ಕೊಟ್ಟರು ನಿಮ್ಮ ಕಾಲು ಹಿಡಿಯೋದಿಲ್ಲ.. ಅಂಗಡಿಯಲ್ಲಿ ನೀವು ಕೋಟಿ ರೂಪಾಯಿ ಕೊಟ್ಟರೂ ಕಾಲು ಬಿಡೋದಿಲ್ಲ ಎಂದು ಆ ವ್ಯಕ್ತಿ ಹೇಳುತ್ತಾನೆ. ಸ್ನೇಹಿತರೆ ನೋಡಿದರಲ್ವಾ ನಿಜವಾಗಿ ತಾನು ಮಾಡುವ ಕೆಲಸದ ಮೇಲೆ ಆ ವ್ಯಕ್ತಿಗೆ ಎಷ್ಟು ಗೌರವ ಭಕ್ತಿ ಇದಿಯೋ ನೋಡಿ.. ಪ್ರತಿಯೊಬ್ಬರು ಅವರು ಮಾಡುವ ಕೆಲಸ ಚಿಕ್ಕದಾದರೂ, ದೊಡ್ಡದಾದರೂ ಆ ಕೆಲಸದ ಮೇಲೆ ಇಂತಹದ್ದೇ ಭಾವನೆ  ಬಂದರೆ ಖಚಿತವಾಗಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ  ಅನಿಸುತ್ತೆ ಅಲ್ವಾ..‌ ಇನ್ನೂ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ.