Advertisements

ಭಿಕ್ಷೆ ಕೇಳಲು ಬಂದ ಬಾಲಕ ಮಹಿಳೆಯ ಸ್ಥಿತಿ ನೋಡಿ ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಇಂದಿನ ಅಧುನಿಕ ಪ್ರಪಂಚದಲ್ಲಿ ಮಾನವೀಯ ಮೌಲ್ಯಗಳು ತುಂಬಾನೆ ಕಡಿಮೆ ಹಾಗಿದೆ ಎಂದು ಹೇಳಬಹುದು.. ಈಗ ಎಲ್ಲರೂ ತಮ್ಮ ಬದುಕಿನಲ್ಲಿ ತುಂಬಾ ಬ್ಯುಸಿ ಇರುತ್ತಾರೆ.. ಬೇರೆಯವರ ಜೀವನದ ಬಗ್ಗೆ ಅವರ ಕಷ್ಟಗಳ ಬಗ್ಗೆ ಯಾರಿಗೂ ಯಾರು ಕೂಡ ಚಿಂತೆ ಮಾಡುವುದಿಲ್ಲ. ಇನ್ನೂ ರಸ್ತೆಯಲ್ಲಿ ಭಿಕ್ಷೆ ಬೇಡುವವರನ್ನ ಜನರು ನೋಡಿದರೆ ಒಂದು ರೂಪಾಯಿ ಅಥವಾ ಎರಡು ರೂಪಾಯಿ ಕೊಟ್ಟು ಹೊರಟು ಹೋಗುತ್ತಾರೆ ಹೊರತು ಆ ಭಿಕ್ಷುಕನನ್ನು ನಿಲ್ಲಿಸಿ ನಿನ್ನ ಕಷ್ಟಗಳೇನು, ಯಾಕೆ ಭಿಕ್ಷೆ ಬೇಡುತ್ತಿದ್ದೀಯಾ ಎಂದು ಯಾರು ಕೂಡ ವಿಚಾರಿಸುವುದಿಲ್ಲ ಮತ್ತು ಸಹಾಯ ಮಾಡುವುದಿಲ್ಲ..

Advertisements

ಇನ್ನೂ ಈ ಮಾಹಿತಿಯಲ್ಲಿ ಪುಟಾಣಿ ಭಿಕ್ಷುಕ ಮಾಡಿದ ಒಂದು ಕೆಲಸ ನೋಡಿದರೆ ನಿಜಕ್ಕೂ ಭಾವುಕರಾಗುತ್ತೀರಾ. ಈ ನೈಜ ಘಟನೆ ನಡೆದಿರುವುದು ಆಫ್ರಿಕಾದ ನೈರೋಬಿ ಸಿಟಿಯಲ್ಲಿ.. ನೈರೋಬಿಯ ಸ್ಲಮ್ ನಲ್ಲಿ ವಾಸ ಮಾಡುವ ಜಾನ್ ಎಂಬುವ ಹುಡುಗು ಪ್ರತೀ ದಿನ ನೈರೋಬಿಯ ಸಿಟಿಯ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುತ್ತಿದ್ದ‌. ಜಾನ್ ಗೆ ತಂದೆ ತಾಯಿ ಯಾರೂ ಕೂಡ ಇಲ್ಲ.. ಈ ಹುಡುಗು ಒಬ್ಬ ಅನಾಥನಾಗಿದ್ದ. ಪ್ರತಿ ದಿನ ಸಿಗ್ನಲ್ ಬಳಿ ಭಿಕ್ಷೆ ಬೇಡುತ್ತಿದ್ದ ಜಾನ್ ಗೆ ಕೆಲವರು ಹಣವನ್ನು ಕೊಟ್ಟರೆ ಇನ್ನೂ ಕೆಲವರು ಬೈದು ಕಳುಹಿಸುತ್ತಿದ್ದರು.. ಈಗೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಜಾನ್ ಒಂದು ದಿನ ಟ್ರಾಪಿಕ್ ನಲ್ಲಿ ನಿಂತಿದ್ದ ಕಾರಿನ ಬಳಿ ಹೋಗಿ ಹಣ ಕೊಡುವಂತೆ ಕೇಳುತ್ತಾನೆ..

ಆ ಕಾರಿನಲ್ಲಿ ಒಬ್ಬ ಮಹಿಳೆ ಕೂತಿದ್ದೂ ಆ ಮಹಿಳೆಯೇ ಡ್ರೈವಿಂಗ್ ಮಾಡುತ್ತಿರುತ್ತಾಳೆ.. ಈ ಮಹಿಳೆಯನ್ನು ಸ್ವಲ್ಪ ಸಮಯ ಗಮನಿಸಿದ ಜಾರ್ಜ್ ಗೆ ಶಾಕ್.. ಹೌದು ಆ ಮಹಿಳೆ ದೇಹಕ್ಕೆ ಹಲವು ಟ್ಯೂಬ್ ಮತ್ತು ಪೈಪ್ ಗಳನ್ನು ಅಳವಡಿಸಿ ಆಕ್ಸಿಜನ್ ಸಿಲಿಂಡರ್ ಗೆ ಕನೆಕ್ಟ್ ಮಾಡಿ ಅದರಿಂದ ಇನ್ನೊಂದು ದೊಡ್ಡ ಮಷಿನ್ ಸಹ ಇಟ್ಟಿರುತ್ತಾರೆ. ಇದನ್ನು ನೋಡಿದ ಜಾನ್ ಆ ಮಹಿಳೆಗೆ ಏಕೆ ಈ ಟ್ಯೂಬ್ ಗಳನ್ನು ಅಳವಡಿಸಿದ್ದಾರೆ.. ನೀವೇಕೆ ದೊಡ್ಡ ದೊಡ್ಡ ಬಲೂನ್ ಗಳನ್ನು ತೆಗೆದುಕೊಂಡು ಬಂದಿದ್ದೀರಾ ಎಂದು ಕೇಳುತ್ತಾನೆ. ಆ ಮಹಿಳೆಯ ಲಂಗ್ಸ್ ನಲ್ಲಿ ಸಮಸ್ಯೆ ಇದೆ, ಇವರು ಬದುಕುಳಿಯಬೇಕಾದರೆ ಈ ಆಕ್ಸಿಜನ್ ಪೈಪ್’ಗಳನ್ನು ಅಳವಡಿಸಿಕೊಳ್ಳಲೇ ಬೇಕಿತ್ತು..

ಈ ಮಹಿಳೆ ಎಲ್ಲೇ ಹೋದರು ತನ್ನ ಜೊತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮತ್ತು ಇನ್ನೊಂದು ದೊಡ್ಡ ಮಷಿನ್ ಜೊತೆಗೆ ಇರಬೇಕಿತ್ತು. ಅಕಸ್ಮಾತ್ ಒಂದು ನಿಮಿಷ ಈಕೆಗೆ ಅಳವಡಿಸಿರುವ ಪೈಪ್ ಗಳನ್ನು ಹೊರತೆಗೆದರೆ ಆಕೆ ಬದುಕುವುದಿಲ್ಲ.. ಈ ರೀತಿ ಮಹಿಳೆ ಜಾನ್ ಗೆ ತನ್ನ ಕಥೆ ಬಗ್ಗೆ ಹೇಳುತ್ತಾಳೆ. ಅಪರಿಚಿತ ಮಹಿಳೆಯ ಕಣ್ಣೀರಿನ ಕಥೆ ಕೇಳಿ ಜಾನ್ ಕಣ್ಣೀರು ಹಾಕುತ್ತಾನೆ.. ಅಪ್ಪ ಅಮ್ಮ ಇಲ್ಲ ಭಿಕ್ಷೆ ಬೇಡಿ ಊಟ ಮಾಡಬೇಕು. ನನ್ನದೇ ದೊಡ್ಡ ಕಷ್ಟ ಎಂದು ಭಾವಿಸದ ಜಾನ್ ಗೆ ಈ ಮಹಿಳೆಯ ಕಷ್ಟದ ಮುಂದೆ ತನ್ನದು ಏನೂ ಕಷ್ಟ ಅಲ್ಲ ಎಂದು ಗೊತ್ತಾಗುತ್ತದೆ‌‌‌..

ಜಾನ್ ನೋಡು ನೋಡುತ್ತಾಲೇ ಕಣ್ಣೀರು ಹಾಕುತ್ತ ತನ್ನ ಕೈಯಲ್ಲಿ ಏನೂ ಕೂಡ ಸಹಾಯ ಮಾಡಲು ಆಗಲಿಲ್ಲ ಎಂದು ರೋದಿಸಿ ಬೆಳಗ್ಗೆಯಿಂದ ಬೇರೆಯವರ ಹತ್ತಿರ ಭಿಕ್ಷೆ ಬೇಡಿದ ಹಣವನ್ನು ಆ ಮಹಿಳೆಗೆ ಕೊಡಲು ಮುಂದಾಗುತ್ತಾನೆ.. ಆಗ ಈ ಮಹಿಳೆ ಜಾನ್ ಗೆ ಸಮಾಧಾನ ಮಾಡುತ್ತಾಳೆ. ಇನ್ನೂ ದಾರಿಯಲ್ಲಿ ಹೋಗುತ್ತಿದ್ದ ಅನಾಮಿಕರೊಬ್ಬರು ಜಾನ್ ಅಳುತ್ತಿರುವುದನ್ನು ನೋಡಿ ಅಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು.. ಜಾನ್ ಮತ್ತು ಆ ಮಹಿಳೆಯ ಪೊಟೊ ತೆಗೆದು ಇವರಿಬ್ಬರ ನಡುವೆ ನಡೆದ ಕಥೆಯ ಬಗ್ಗೆ ಬರೆದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಈ ಚಿಕ್ಕ ಹುಡುಗನ ಒಳ್ಳೆಯ ಮನಸ್ಸು ಹಾಗೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..