Advertisements

ಹಾವುಗಳು 12 ವರ್ಷ ದ್ವೇಷ ಸಾಧಿಸುತ್ತವೆಯೇ ! ಹಾವು ತನ್ನ ಹೊ’ಡೆದವರನ್ನ ಗುರುತು ಹಿಡಿದು ಹಗೆ ತೀರಿಸಿಕೊಳ್ಳುತ್ತಾ ?

Kannada Mahiti

ನಮಸ್ತೇ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ನಾಗಗಳನ್ನ ದೇವರಂತೆ ಪೂಜಿಸಲಾಗುತ್ತೆ. ಏಟು ತಿಂದ ಹಾವುಗಳು ದ್ವೇಷ ತೀರಿಸಿಕೊಳ್ಳುವುದೇ ಬಿಡುವುದಿಲ್ಲ ಎಂಬುದರ ಬಗ್ಗೆ ನಾವು ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಫೇಮಸ್ ಹಾಡು ಕೂಡ ಇದೆ. ಹಾಗಾದ್ರೆ ಅರ್ಧ ಏ’ಟು ತಿಂದು ಬದುಕಿದ ಹಾವುಗಳು ಹೊ’ಡೆದವರ ಮೇಲೆ ದ್ವೇಷ ಸಾಧಿಸುತ್ತವೆಯೇ ? ಹೊ’ಡೆದವರನ್ನ ಹುಡುಕಿಕೊಂಡು ಬಂದು ಅವರ ಮೇಲೆ ದಾ’ಳಿ ಮಾಡುತ್ತವೆಯೇ? ಇದು ಎಷ್ಟರ ಮಟ್ಟಿಗೆ ನಿಜ ಎಂಬುದರ ಬಗ್ಗೆ ಪ್ರಶ್ನೆಗಳಂತೂ ಇದ್ದೆ ಇವೆ..

Advertisements

ಹೌದು, ಒಂದು ವೇಳೆ ಹಾವನ್ನ ಸಾ’ಯಿಸುವ ಸಂದರ್ಭದಲ್ಲಿ ಅದು ಗಾ’ಯಗೊಂಡು ತಪ್ಪಿಸಿಕೊಂಡು ಹೋದರೆ, ಅದು ತನ್ನ ಮೇಲೆ ಆ’ಕ್ರಮಣ ಮಾಡಿದವರ ಚಹರೆಯನ್ನ ನೆನಪಿನಲ್ಲಿಟ್ಟುಕೊಂಡು ಮತ್ತೆ ಬಂದು ಪ್ರತಿಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದರ ಬಗ್ಗೆ ಹಲವು ಅನುಮಾನಗಳಿವೆ. ಹೌದು, ವಿಜ್ನ್ಯಾನದ ಪ್ರಕಾರ ಹಾವಿಗೆ ನೆನಪಿನ ಶಕ್ತಿಯೇ ಇಲ್ಲವಂತೆ. ಜ್ಞಾಪಕ ಶಕ್ತಿಯೇ ಇಲ್ಲವೆಂದ ಮೇಲೆ ಅದು ಹುಡುಕಿಕೊಂಡು ಬಂದು ದಾ’ಳಿ ಮಾಡಲು ಹೇಗೆ ಸಾಧ್ಯ. ಇದೆಲ್ಲಾ ಹಿರಿಯರು ಹೇಳುವ ಕಲ್ಪಿತ ಕತೆಯಾಗಿದ್ದರೂ ಇದರ ಹಿಂದೆಯೂ ಕೂಡ ಅಚ್ಚರಿಯಾದ ಕಾರಣವೊಂದಿದೆ.

ಹೌದು, ಬಹಳ ಹಿಂದೆ ನಮ್ಮ ಪೂರ್ವಜರು ಹೆಚ್ಚಾಗಿ ವ್ಯವಸಾಯವನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗ ಅವರು ಬೆಳೆದಿದ್ದ ಬೆಳೆಗಳನ್ನ ಇಲಿಗಳು ತಿಂದು ಹಾಳುಮಾಡುತ್ತಿದ್ದವು. ಹಾವುಗಳನ್ನ ಸಿಕ್ಕ ಸಿಕ್ಕಲ್ಲಿ ಸಾ’ಯಿಸುತ್ತಿದ್ದ ಪರಿಣಾಮವೇ ಇಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಇನ್ನು ಹಾವುಗಳ ಸಂಖ್ಯೆ ಕಡಿಮೆಯಾಗಿ ಇಲಿಗಳ ಸಂಖ್ಯೆ ಹೆಚ್ಚಾದಂತೆ, ಬೆಳೆದ ಬೆಳೆಗಳ ಹಾನಿ ಕೂಡ ಹೆಚ್ಚಾಗತೊಡಗಿತು. ಆಗ ತಮ್ಮ ಬೆಳೆಗಳನ್ನ ಉಳಿಸಿಕೊಳ್ಳಲು ಐಡಿಯಾವೊಂದನ್ನ ಮಾಡಿದ ಆಗಿನ ಹಿರಿಯರು ಹಾವುಗಳನ್ನ ಸಾ’ಯಿಸಬೇಡಿ. ಒಂದು ವೇಳೆ ಹಾವು ಸಾ’ಯದೆ ತಪ್ಪಿಸಿಕೊಂಡು ಹೋದಲ್ಲಿ ಅದು ನಿಮ್ಮ ಮೇಲೆ ಹಾಗೆ ಸಾಧಿಸುತ್ತದೆ.

ನಿಮ್ಮನ್ನೇ ಹುಡುಕಿಕೊಂಡು ಬಂದು ಕ’ಚ್ಚುತ್ತದೆ ಎಂಬ ಭಯವನ್ನ ಹುಟ್ಟುಹಾಕಿದ್ದರು ಎಂದು ಹೇಳಲಾಗಿದೆ. ಹಾಗಾಗಿಯೇ ಈಗಲೂ ಸಹ ಹಿರಿಯರು ಹಾವು ದ್ವೇಷವನ್ನ ಸಾಧಿಸುತ್ತದೆ ಎಂದು ಹೇಳುವುದಂಟು. ಇನ್ನುಇದರ ಜೊತೆಗೆ ನಾಗಗಳನ್ನ ದೇವರಂತೆ ಪೂಜಿಸುತ್ತಿದ್ದು ಕೂಡ ಹಾವು ದ್ವೇಷ ಸಾಧಿಸುತ್ತದೆ ಅಂತ ಹೇಳಲು ಮತ್ತೊಂದು ಕಾರಣವಂತೆ. ಅದೇನೇ ಇರಲಿ ಹಾವುಗಳನ್ನ ಕಂಡಾಗ ನಮಗೆ ಎಷ್ಟು ಭಯ ಕಾಡುತ್ತದೆಯೋ, ಅಷ್ಟೇ ಭಯ ಹಾವುಗಳಿಗೂ ಕೂಡ ಇರುತ್ತದಂತೆ. ಹಾಗಾಗಿ ಹಾವುಗಳನ್ನ ಕಂಡಲ್ಲಿ ಸಾ’ಯಿಸುವುದಕ್ಕಿಂತ ಅವನ್ನ ಕಾಡಿಗೆ ಬಿಟ್ಟು ಬರುವ ವ್ಯವಸ್ಥೆ ಮಾಡುವುದು ಒಳ್ಳೆಯದು. ಈ ಭೂಮಿಯ ಮೇಲಿನ ಪ್ರತಿಯಿಂದು ಜೀವಿಗೂ ಬದುಕುವ ಹಕ್ಕನ್ನ ಆ ದೇವರು ಕೊಟ್ಟಿದ್ದಾನೆ ಅಲ್ಲವೇ..