ನಮಸ್ತೇ ಸ್ನೇಹಿತರೆ.. ನಮ್ಮನ್ನು ಈ ಪ್ರಪಂಚಕ್ಕೆ ಪರಿಚಯಿಸುವ ತಂದೆ ನಮಗೆ ದಾರಿ ದೀಪವಾಗಿರುತ್ತಾರೆ. ಸಮಾಜದಲ್ಲಿ ನಾವು ಏನು ಮಾಡ್ಬೇಕು ಏನು ಮಾಡ್ಬಾರ್ದು ಎಂದು ತಂದೆಯನ್ನು ನೋಡಿ ಕಲಿಯುತ್ತೇವೆ.. ತಂದೆ ಕೂಡ ನಮ್ಮ ಬೆಳವಣಿಗೆಯಲ್ಲಿ ಸಂತಸ ಕಾಣುತ್ತಾರೆ. ಈ ಪ್ರಪಂಚದ ಪ್ರತಿಯೊಂದು ವಿಷಯವನ್ನು ನಮಗೆ ಹೇಳಿಕೊಡಬೇಕು ಎನ್ನುವ ಆತುರದಲ್ಲಿ ಇರುತ್ತಾರೆ.. ಹಾಗಾದರೆ ಈ ಸ್ಟೇಡಿಯಂ ನಲ್ಲಿ ಆಗಿದ್ದೇನು ಗೊತ್ತಾ.. ಕೊಲಂಬಿಯಾ ದೇಶದಲ್ಲಿ ಪುಟ್ಬಾಲ್ ನೋಡಲು ಸ್ಟೇಡಿಯಂ ಗೆ ಹೋಗಿದ್ದ ಒಬ್ಬ ವ್ಯಕ್ತಿ ಅಲ್ಲಿ ಒಬ್ಬ ಅಪ್ಪ ಮಗನ ವಿಡಿಯೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ.
[widget id=”custom_html-3″]

ಇದನ್ನು ನೋಡಿ ಈ ವೀಡಿಯೋ ಅಪ್ಲೋಡ್ ಮಾಡಿದಕ್ಕೆ ಧನ್ಯವಾದಗಳು ಎಂದು ಜನ ಹೇಳುತ್ತಿದ್ದಾರೆ. ಹಾಗಾದರೆ ಅಂಥ ವಿಷಯ ಅಲ್ಲಿ ಏನಿದೆ ಎಂದು ನೋಡೋಣ.. ಲೈವ್ ಪುಟ್ಬಾಲ್ ನೋಡಲು ಒಬ್ಬ ತಂದೆ ತನ್ನ ಮಗನನ್ನು ಸ್ಟೇಡಿಯಂ ಕರೆದುಕೊಂಡು ಬಂದಿದ್ದರು.. ಆದರೆ ನೋವಾಗುವ ಸಂಗತಿ ಅಂದರೆ ಆ ಮಗನಿಗೆ ಕಣ್ಣು ಕಾಣಿಸುವುದಿಲ್ಲಾ. ಆ ಹುಡುಗ ಅಂದನಾಗಿದ್ದ.. ಕಣ್ಣು ಕಾಣದ ಹುಡುಗನನ್ನು ಲೈವ್ ಪುಟ್ಬಾಲ್ ನೋಡಲು ಸ್ಟೇಡಿಯಂ ಗೆ ಕರೆದುಕೊಂಡು ಬರುವ ಅವಶ್ಯಕತೆ ಏನಿತ್ತಪ್ಪ ಅಂಥ ಅನಿಸುತ್ತೆ ಅಲ್ಲವೇ..
[widget id=”custom_html-3″]

ಇದು ತಂದೆ ಸ್ಥಾನಕ್ಕೆ ಇರೋ ಬೆಲೆ. ನನ್ನ ಮಗನಿಗೆ ಕಣ್ಣು ಕಾಣದಿದ್ದರೇನಂತೆ ನಾನಿದೀನಿ ಅಲ್ವಾ ಎಂದು ಭಾವಿಸಿದ ಆ ತಂದೆ ಮಗನನ್ನು ಸ್ಟೇಡಿಯಂ ಗೆ ಕರೆದುಕೊಂಡು ಬಂದು ಲೈವ್ ನಿರೂಪಣೆ ಕೊಡುತ್ತಿದ್ದರು.. ಬಾಲ್ ಆಕಡೆ ಹೋಯ್ತು, ಈಕಡೆ ಹೋಯ್ತು.. ಓ ಗೋಲ್ ಆಯ್ತು ಈಗೆ ತಂದೆ ಪ್ರತಿಕ್ಷಣ ಮಗನಿಗೆ ನಿರೂಪಣೆ ಮಾಡಿ ಹೇಳುತ್ತಿದ್ದಾಗ ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಬಂತು.. ತನಗೆ ಕಣ್ಣಿಲ್ಲ ಅನ್ನುವ ನೋವನ್ನು ದೂರ ಮಾಡುತ್ತಿದ್ದ ತಂದೆಯನ್ನು ನೋಡಿ ಗೌರವ ಹುಟ್ಟಿತು. ಮಗ ತಂದೆಯ ಕಣ್ಣುಗಳ ಮೂಲಕ ಪುಟ್ಬಾಲ್ ಮ್ಯಾಚ್ ನೋಡುತ್ತಿದ್ದರೆ ತಂದೆ ಮಗನಿಗೆ ಕಣ್ಣಾಗಿ ಪುಟ್ಬಾಲ್ ಮ್ಯಾಚ್ ನೋಡುತ್ತಿದ್ದರು.. ವಾವ್ ಎಂತಹ ದೃಷ್ಯ. ನಿಮಗೆ ಈ ಘಟನೆ ಕೇಳಿ ಏನನಸಿತು.